AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್​ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು

2026 October, top banks offering highest fd interest rates: ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳು ಈಗಲೂ ಕೂಡ ಜನಸಾಮಾನ್ಯರ ನೆಚ್ಚಿನ ಹೂಡಿಕೆ ಸ್ಥಳಗಳಾಗಿವೆ. ಆರ್​ಬಿಐನ ರಿಪೋದರ ಕಡಿಮೆಗೊಂಡಾಗ್ಯೂ ಹಲವು ಬ್ಯಾಂಕುಗಳು ಉತ್ತಮ ರೀತಿಯ ಎಫ್​​ಡಿ ರೇಟ್ ಆಫರ್ ಮಾಡುತ್ತವೆ. ಅತಿಹೆಚ್ಚು ಬಡ್ಡಿ ಆಫರ್ ಮಾಡುವ ಕೆಲ ಪ್ರಮುಖ ಬ್ಯಾಂಕುಗಳ ವಿವರ ಇಲ್ಲಿದೆ.

ಅಕ್ಟೋಬರ್​ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು
ಠೇವಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2025 | 11:13 PM

Share

ನವದೆಹಲಿ, ಅಕ್ಟೋಬರ್ 22: ಷೇರು, ಮ್ಯುಚುವಲ್ ಫಂಡ್, ಚಿನ್ನದ ಆಕರ್ಷಣೆ ನಡುವೆ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಈಗಲೂ ಕೂಡ ನಂಬರ್ ಒನ್ ಆಯ್ಕೆಯೇ ಆಗಿದೆ. ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ ಹಲವು ಲಕ್ಷ ಕೋಟಿ ರೂಗಳಷ್ಟು ಹಣವನ್ನು ಠೇವಣಿಗಳಲ್ಲಿ ಇಡಲಾಗಿದೆ. ಮಾರುಕಟ್ಟೆಯ ರಿಸ್ಕ್​ಗಳಿಂದ ದೂರ ಇರುವ ಮತ್ತು ಹಣಕ್ಕೆ ಹೆಚ್ಚಿನ ಭದ್ರತೆ ಇರುವುದರಿಂದ ನಿಶ್ಚಿತ ಠೇವಣಿ ಹೆಚ್ಚು ಮಂದಿಗೆ ಆಕರ್ಷಕವಾಗಿದೆ. ಅದರಲ್ಲೂ ಪ್ರಮುಖ ಬ್ಯಾಂಕುಗಳಲ್ಲಿ ಇಡುವ ಠೇವಣಿ ಬಹುತೇಕ ಸುರಕ್ಷಿತವಾಗಿರುತ್ತವೆ.

ಏನಿದು ಫಿಕ್ಸೆಡ್ ಡೆಪಾಸಿಟ್?

ನಿಶ್ಚಿತ ಅವಧಿಗೆ ಲಂಪ್ಸಮ್ ಆಗಿ ಹಣವನ್ನು ಠೇವಣಿ ಇಡುವುದು ಫಿಕ್ಸೆಡ್ ಡೆಪಾಸಿಟ್ ಪ್ಲಾನ್. ಹೆಚ್ಚಿನ ಬ್ಯಾಂಕುಗಳು 7 ದಿನಗಳಿಂದ ಆರಂಭಿಸಿ 10 ವರ್ಷಗಳವರೆಗೆ ಠೇವಣಿಗಳಿಗೆ ಆಫರ್ ಮಾಡುತ್ತವೆ. ಒಂದು ವರ್ಷ ಹಾಗೂ ಮೇಲ್ಪಟ್ಟ ಅವಧಿಯ ಠೇವಣಿಗಳಿಗೆ ಉತ್ತಮ ಬಡ್ಡಿಯನ್ನು ಬ್ಯಾಂಕುಗಳು ನೀಡುತ್ತವೆ.

ಇದನ್ನೂ ಓದಿ: ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್​ಗಳನ್ನು ಮಾಡುವಾಗ ಹುಷಾರ್

ಅತಿಹೆಚ್ಚು ಎಫ್​ಡಿ ದರ ಆಫರ್ ಮಾಡುವ ಬ್ಯಾಂಕುಗಳು

  • ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 5 ವರ್ಷದ ಠೇವಣಿಗೆ ಶೇ. 8.20 ಬಡ್ಡಿ
  • ಜನ ಸ್ಮಾಲ್ ಫೈನಾನ್ಸ್ ಬ್ಯಾಂಕು: 5 ವರ್ಷದ ಠೇವಣಿಗೆ ಶೇ. 8 ಬಡ್ಡಿ
  • ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 18 ತಿಂಗಳ ಠೇವಣಿಗೆ ಶೇ 7.75 ಬಡ್ಡಿ
  • ಬಂಧನ್ ಬ್ಯಾಂಕ್: 2-3 ವರ್ಷದ ಠೇವಣಿಗೆ ಶೇ. 7.20 ಬಡ್ಡಿ
  • ಐಸಿಐಸಿಐ ಬ್ಯಾಂಕ್: 5 ವರ್ಷದ ಠೇವಣಿಗೆ ಶೇ. 6.60 ಬಡ್ಡಿ
  • ಹೆಚ್​ಡಿಎಫ್​ಸಿ ಬ್ಯಾಂಕ್: 5 ವರ್ಷದ ಠೇವಣಿಗೆ ಶೇ. 6.60 ಬಡ್ಡಿ

ಈ ಮೇಲಿನವು ಮಾಮೂಲಿಯ ಗ್ರಾಹಕರ ಠೇವಣಿಗಳಿಗೆ ನೀಡಲಾಗುವ ಬಡ್ಡಿ. ಹಿರಿಯ ನಾಗರಿಕರಿಗೆ 25ರಿಂದ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಕೊಡಲಾಗುತ್ತದೆ.

ಇದನ್ನೂ ಓದಿ: ಇಬ್ಬರು ಗೆಳೆಯರು.. ಅದೇ ವಯಸ್ಸು, ಅದೇ ಸಂಬಳ; ಒಬ್ಬನದ್ದು ಆರಾಮ ಜೀವನ, ಮತ್ತೊಬ್ಬನದ್ದು ಡೆಟ್ ಟ್ರ್ಯಾಪ್; ತಪ್ಪಾಗಿದ್ದು ಎಲ್ಲಿ?

ಎಸ್​ಬಿಐ, ಎಚ್​ಡಿಎಫ್​ಸಿ ಇತ್ಯಾದಿ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಬಡ್ಡಿ ದರ ಕಡಿಮೆ ಇರುತ್ತದೆ. ಠೇವಣಿ ಸುರಕ್ಷತೆ ಹೆಚ್ಚು ಇರುತ್ತದೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಬಡ್ಡಿ ಹೆಚ್ಚು. ಆದರೆ, ಹೂಡಿಕೆ ರಿಸ್ಕ್ ಹೆಚ್ಚಿರುತ್ತದೆ. ಹಾಗೆಯೇ, ಸಹಕಾರಿ ಬ್ಯಾಂಕುಗಳಲ್ಲೂ ಕೂಡ ಬಡ್ಡಿ ಹೆಚ್ಚು, ರಿಸ್ಕ್ ಕೂಡ ಹೆಚ್ಚು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ