AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ

Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ

ನಯನಾ ರಾಜೀವ್
|

Updated on: Mar 05, 2026 | 7:58 AM

Share

ರೈಲ್ವೆ ಸಿಬ್ಬಂದಿಯೊಬ್ಬರಿಗೆ ಪೈಲ್ಸ್​ ಆಪರೇಷನ್ ಮಾಡಲಾಗಿತ್ತು. ಗಾಯ ವಾಸಿಯಾಗದ ಕಾರಣ ಕುಳಿತುಕೊಳ್ಳಲು ಆಗುತ್ತಿಲ್ಲ, ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆಗ ಅಧಿಕಾರಿಯೊಬ್ಬರು ನಿನಗೆ ಆಪರೇಷನ್ ಆಗಿದೆ ಎಂಬುದಕ್ಕೆ ಏನು ಸಾಕ್ಷಿ ಇದೆ ಸಅಕ್ಷಿ ತೋರಿಸು ಬಳಿಕ ರಜೆ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಅದಕ್ಕೆ ಬೇಸರಲ್ಲಿ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಆಪರೇಷನ್ ಆಗಿರುವ ಜಾಗವನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಯ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ನೋ, ಮಾರ್ಚ್​ 05: ರೈಲ್ವೆ ಸಿಬ್ಬಂದಿಯೊಬ್ಬರಿಗೆ ಪೈಲ್ಸ್​ ಆಪರೇಷನ್ ಮಾಡಲಾಗಿತ್ತು. ಗಾಯ ವಾಸಿಯಾಗದ ಕಾರಣ ಕುಳಿತುಕೊಳ್ಳಲು ಆಗುತ್ತಿಲ್ಲ, ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆಗ ಅಧಿಕಾರಿಯೊಬ್ಬರು ನಿನಗೆ ಆಪರೇಷನ್ ಆಗಿದೆ ಎಂಬುದಕ್ಕೆ ಏನು ಸಾಕ್ಷಿ ಇದೆ ಸಅಕ್ಷಿ ತೋರಿಸು ಬಳಿಕ ರಜೆ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಅದಕ್ಕೆ ಬೇಸರಲ್ಲಿ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಆಪರೇಷನ್ ಆಗಿರುವ ಜಾಗವನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಯ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್ ರಾಜೇಶ್ ಮೀನಾ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಕ್ನೋದಲ್ಲಿ ನಡೆದ ಶಸ್ತ್ರಚಿಕಿತ್ಸೆಗಾಗಿ ಮೀನಾ ಅವರಿಗೆ ಫೆಬ್ರವರಿ 22 ರಿಂದ 28 ರವರೆಗೆ ರಜೆ ನೀಡಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಅವರ ಗಾಯ ಮಾಗದ ಕಾರಣ ರಜೆ ವಿಸ್ತರಿಸುವಂತೆ ಮನವಿ ಮಾಡಿದ್ದರು.ಬಳಿಕ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಗಾಯವನ್ನು ತೋರಿಸಿದ್ದಾರೆ. ಇದಾದ ಬಳಿಕ ರೈಲ್ವೆ ಆರೋಗ್ಯ ಘಟಕಕ್ಕೆ ಭೇಟಿ ನೀಡಿದ ನಂತರ, ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ದೃಢಪಡಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us