AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ, ಬೆಳ್ಳಿ ಬೆಲೆಗಳು ಇಳಿಯುತ್ತಿರುವುದು ಯಾಕೆ? ಇನ್ನೆಷ್ಟು ದಿನ ಇರಲಿದೆ ಈ ಇಳಿಕೆ?

Reasons why gold and silver priced coming down: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗರಿಷ್ಠ ಮಟ್ಟದಿಂದ ಒಂದಷ್ಟು ಕುಸಿತ ಕಂಡಿವೆ. 200 ರೂವರೆಗೂ ಹೋಗಿದ್ದ ಬೆಳ್ಳಿ ಬೆಲೆ 159 ರೂಗೆ ಇಳಿದಿದೆ. ಈ ಅಮೂಲ್ಯ ಲೋಹಗಳ ಬೆಲೆ ಅಸಹಜ ರೀತಿಯಲ್ಲಿ ಏರಿದ್ದವು. ಈಗ ಇಳಿಕೆಯಾಗಲು ಏನು ಕಾರಣ? ಬೆಲೆ ಇಳಿಕೆಗೆ ತಜ್ಞರು ಎರಡು ಪ್ರಮುಖ ಕಾರಣಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಒಂದು ವರದಿ...

ಚಿನ್ನ, ಬೆಳ್ಳಿ ಬೆಲೆಗಳು ಇಳಿಯುತ್ತಿರುವುದು ಯಾಕೆ? ಇನ್ನೆಷ್ಟು ದಿನ ಇರಲಿದೆ ಈ ಇಳಿಕೆ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 23, 2025 | 7:42 PM

Share

ನವದೆಹಲಿ, ಅಕ್ಟೋಬರ್ 23: ದಾಖಲೆಯ ವೇಗದಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (gold rates) ಇಳಿಕೆಯಾಗತೊಡಗಿವೆ. ಅದರಲ್ಲೂ ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿದಷ್ಟೂ ಕುಸಿತ ಕಾಣುತ್ತಿದೆ. ಚಿನ್ನದ ಬೆಲೆಯೂ ತನ್ನ ಗರಿಷ್ಠ ಮಟ್ಟದಿಂದ ತುಂಬಾ ಕೆಳಗೆ ಹೋಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ್ಯೂಯಾರ್ಕ್​ನ ಗೋಲ್ಡ್ ಫ್ಯೂಚರ್​​ನಲ್ಲಿ ಶೇ. 6ರ ಆಸುಪಾಸಿನಷ್ಟು ಕುಸಿತ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 12,500 ರೂಗೆ ಬಂದು ನಿಂತಿದೆ.

ಈ ವರ್ಷದ ಆರಂಭದಲ್ಲಿದ್ದ ಬೆಲೆಗೆ ಹೋಲಿಸಿದರೆ ಚಿನ್ನ ಇನ್ನೂ ಎತ್ತರದಲ್ಲಿದೆಯಾದರೂ ಮುಂಬರುವ ದಿನಗಳಲ್ಲಿ ಬೆಲೆ ಸತತವಾಗಿ ಕುಸಿತವಾಗುವ ಸುಳಿವು ನೀಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆಯಾಗಲು ಪ್ರಮುಖ ಕಾರಣವಾಗಿದ್ದುದು ಜಾಗತಿಕ ಅನಿಶ್ಚಿತ ವ್ಯಾಪಾರ ಮತ್ತು ರಾಜಕೀಯ ವಾತಾವರಣ (global economic uncertainty). ಈ ಬೆಲೆ ಇಳಿಕೆಯಾಗಲು ಏನು ಕಾರಣ?

ಇದನ್ನೂ ಓದಿ: ಬಬಲ್ ಝೋನ್​ನಲ್ಲಿ ಚಿನ್ನ; 400 ಡಾಲರ್​ನಷ್ಟು ಬೆಲೆ ಇಳಿಕೆ ಸಾಧ್ಯತೆ: ಆಭರಣ ವ್ಯಾಪಾರಸ್ಥರ ಅನಿಸಿಕೆ

ಚಿನ್ನದ ಬೆಲೆ ಇಳಿಕೆಗೆ ಎರಡು ಪ್ರಮುಖ ಕಾರಣಗಳು

ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆಯಾಗಲು ಇಂಥದ್ದೇ ಸ್ಪಷ್ಟ ಕಾರಣಗಳಿಲ್ಲ. ಆದರೆ, ತಜ್ಞರು ಈ ಕೆಳಗಿನ ಎರಡು ಪ್ರಮುಖ ಕಾರಣಗಳನ್ನು ಪ್ರಸ್ತಾಪಿಸಿದ್ದಾರೆ.

  1. ಅಮೆರಿಕ ಮತ್ತು ಚೀನಾ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಇದರಿಂದ ಜಾಗತಿಕ ವ್ಯಾಪಾರ ವಾತಾವರಣ ತಿಳಿಯಾಗುವ ಆಶಯ ಇದೆ.
  2. ಚಿನ್ನ ಹಾಗೂ ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಿರುವವರು ಪ್ರಾಫಿಟ್ ಬುಕಿಂಗ್ ಮಾಡುತ್ತಿರಬಹುದು.

ಚಿನ್ನ ಮತ್ತು ಬೆಳ್ಳಿ ಅಸಹಜವಾಗಿ ಬೆಲೆ ಏರಿಕೆ ಹೊಂದಿವೆ. ಸಾಮಾನ್ಯ ವರ್ಷಗಳಲ್ಲಿ ಇವುಗಳ ಬೆಲೆ ಶೇ. 10-12ರಷ್ಟು ಮಾತ್ರವೇ ಏರುವುದು. ಆದರೆ, ಕಳೆದ ಒಂದು ವರ್ಷದಲ್ಲಿ ಬೆಲೆ ಶೇ. 50-70ರಷ್ಟು ಏರಿಕೆ ಆಗಿರುವುದು ಗಮನಾರ್ಹ. ಬೆಲೆಗಳು ಇಷ್ಟು ಉಬ್ಬರ ಕಂಡಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಇವುಗಳನ್ನು ಮಾರಿ ಲಾಭ ಮಾಡಿಕೊಳ್ಳುವುದು ಸಹಜ. ಈಗಲೂ ಅದೇ ಆಗುತ್ತಿರಬಹುದು.

ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್

ಚಿನ್ನದ ಬೆಲೆ 2026ರಲ್ಲಿ ಶೇ. 20ರಷ್ಟು ಇಳಿಕೆ ಆಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಬೆಳ್ಳಿ ಬೆಲೆ ಇನ್ನೂ ಹೆಚ್ಚು ಇಳಿಯಬಹುದು. ಆ ನಂತರ ಇವುಗಳ ಬೆಲೆ ಮತ್ತೆ ಏರಿಕೆಯಾಗತೊಡಗಬಹುದು ಎನ್ನಲಾಗುತ್ತಿದೆ. ಆದರೆ, ಎಷ್ಟು ದಿನ ಈ ಬೆಲೆ ಇಳಿಕೆ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ. ಅಮೆರಿಕ ಮತ್ತು ಚೀನಾ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡದಿದ್ದರೆ, ಅಥವಾ ಮತ್ಯಾವುದೋ ಅಂತಾರಾಷ್ಟ್ರೀಯ ವಿಪತ್ತು ಎದುರಾದರೆ ಚಿನ್ನಕ್ಕೆ ಮತ್ತೆ ಬೇಡಿಕೆ ಬರಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Thu, 23 October 25

Follow Us
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ