AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಬಲ್ ಝೋನ್​ನಲ್ಲಿ ಚಿನ್ನ; 400 ಡಾಲರ್​ನಷ್ಟು ಬೆಲೆ ಇಳಿಕೆ ಸಾಧ್ಯತೆ: ಆಭರಣ ವ್ಯಾಪಾರಸ್ಥರ ಅನಿಸಿಕೆ

Gold has entered bubble zone, may see $300-$400 correction: ಚಿನ್ನ ಈಗ ಬಬ್ಬಲ್ ಝೋನ್ ತಲುಪಿದೆ. ಬಹಳ ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆ ಆಗಿದೆ. ಇದು ತೀಕ್ಷ್ಣವಾಗಿ ಇಳಿಕೆ ಆಗುತ್ತದಾ? ಆಭರಣ ಉದ್ಯಮಿ ಮನೋಜ್ ಝಾ ಪ್ರಕಾರ ಚಿನ್ನದ ಬೆಲೆ ಗ್ರಾಮ್​ಗೆ 1,000 ರೂನಷ್ಟು ಇಳಿಯುವ ಸಾಧ್ಯತೆ ಇದೆ. ಹಿಂದೆ 1979 ಮತ್ತು 2010ರಲ್ಲಿ ಇದೇ ರೀತಿ ಚಿನ್ನದ ಬೆಲೆ ಏರಿಕೆ ಆಗಿದ್ದ ಸಂದರ್ಭದಲ್ಲಿ ತೀಕ್ಷ್ಣವಾಗಿ ಪ್ರೈಸ್ ಕರೆಕ್ಷನ್ಸ್ ಆಗಿತ್ತೆನ್ನಲಾಗಿದೆ.

ಬಬಲ್ ಝೋನ್​ನಲ್ಲಿ ಚಿನ್ನ; 400 ಡಾಲರ್​ನಷ್ಟು ಬೆಲೆ ಇಳಿಕೆ ಸಾಧ್ಯತೆ: ಆಭರಣ ವ್ಯಾಪಾರಸ್ಥರ ಅನಿಸಿಕೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2025 | 11:17 PM

Share

ನವದೆಹಲಿ, ಅಕ್ಟೋಬರ್ 20: ಚಿನ್ನದ ಬೆಲೆ (gold rate) ಕಳೆದ ವಾರ ಹೊಸ ದಾಖಲೆ ಮಟ್ಟಕ್ಕೆ ಏರಿತ್ತು. ಇಷ್ಟು ಮಟ್ಟದ ಬೆಲೆಯು ಹೂಡಿಕೆದಾರರಲ್ಲೇ ಆತಂಕ ಮೂಡಿಸಿದೆ ಎಂದು ಆಭರಣ ಉದ್ಯಮಿ ಮನೋಜ್ ಝಾ ಹೇಳಿದ್ದಾರೆ. ಚಿನ್ನದ ಬೆಲೆ ಈಗ ಬಬ್ಬಲ್ ಝೋನ್ (Bubble zone) ತಲುಪಿದೆ. ಮುಂಬರುವ ದಿನಗಳಲ್ಲಿ ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಮಾಡಲಿದ್ದಾರೆ ಎಂದು ಕಾಮಾಖ್ಯ ಜ್ಯುವೆಲ್ಸ್ (Kamakhya Jewels) ಸಂಸ್ಥೆಯ ಸಂಸ್ಥಾಪಕರಾದ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಚಿನ್ನವು ತನ್ನ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಸ್ವತಃ ಹೂಡಿಕೆದಾರರಿಗೂ ಚಿಂತೆ ತಂದಿದೆ. ಹಿಂದೆ ಚಿನ್ನದ ಬೆಲೆ ವಿಪರೀತ ಏರಿದಾಗೆಲ್ಲಾ ತೀಕ್ಷ್ಣ ಇಳಿಕೆಯೂ ಆಗಿದೆ. 1979-80ರಲ್ಲಿ, ಹಾಗೂ 2010-11ರಲ್ಲೂ ಚಿನ್ನ ಭಾರೀ ಬೆಲೆ ಏರಿಕೆ ಪಡೆದಿತ್ತು. ಆ ಸಂದರ್ಭಗಳಲ್ಲಿ ಅದರ ಪ್ರೈಸ್ ಕರೆಕ್ಷನ್ ತೀಕ್ಷ್ಣವಾಗಿ ಆಗಿತ್ತು’ ಎಂದು ಮನೋಜ್ ಝಾ ಅವರು ಹಿಂದಿನ ದತ್ತಾಂಶಗಳನ್ನು ಉಲ್ಲೇಖಿಸುತ್ತಾ ವಿವರಿಸಿದ್ದಾರೆ.

ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್

ಚಿನ್ನದ ಬೆಲೆಯಲ್ಲಿ 1,000 ರೂ ಇಳಿಕೆ?

ಮನೋಜ್ ಝಾ ಅವರ ಪ್ರಕಾರ ಚಿನ್ನದ ಬೆಲೆ ಮುಂದಿನ ಕೆಲ ಅವಧಿಯಲ್ಲಿ ಔನ್ಸ್​ಗೆ 300-400 ಡಾಲರ್​ನಷ್ಟು ಬೆಲೆ ಇಳಿಕೆ ಆಗಬಹುದು. ಇಲ್ಲಿ ಒಂದು ಔನ್ಸ್ ಎಂದರೆ 28-29 ಗ್ರಾಮ್​ನಷ್ಟಾಗುತ್ತದೆ. ಅಂದರೆ, ಒಂದು ಗ್ರಾಮ್​ಗೆ 1,000-1,200 ರೂಗಳಷ್ಟು ಬೆಲೆ ಇಳಿಕೆಯನ್ನು ಚಿನ್ನ ಹೊಂದುವ ಸಾಧ್ಯತೆ ಇದೆ.

ಸದ್ಯ ಅಪರಂಜಿ ಚಿನ್ನದ ಬೆಲೆ ಗ್ರಾಮ್​​ಗೆ 13,000 ರೂಗಿಂತ ತುಸು ಹೆಚ್ಚಿದೆ. ಇದರ ಬೆಲೆ ಸದ್ಯೋಭವಿಷ್ಯದಲ್ಲಿ 12,000 ರೂ ಗಡಿಗಿಂತ ಕೆಳಗೆ ಇಳಿಯುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಎಷ್ಟು ಕಡಿಮೆ ಆಗಬಹುದು? ಇಲ್ಲಿದೆ ತಜ್ಞರ ಅಂದಾಜು

ಹೂಡಿಕೆದಾರರ ತಟ್ಟೆಯಲ್ಲಿ ಹೆಚ್ಚು ಚಿನ್ನ

ಕಾಮಾಖ್ಯ ಜುವೆಲ್ಸ್​ನ ಮಾಲೀಕರಾದ ಮನೋಜ್ ಝಾ ಹೇಳುವ ಪ್ರಕಾರ, ಹೂಡಿಕೆದಾರರು ಈಗ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಹೊಂದಿದ್ದಾರೆ. ‘ಹೂಡಿಕೆದಾರರು ತಮ್ಮ ಪೋರ್ಟ್​ಫೋಲಿಯೋದಲ್ಲಿ ಶೇ. 10-12ರಷ್ಟು ಚಿನ್ನ ಹೊಂದಿರುವುದು ಸಾಮಾನ್ಯ. ಆದರೆ, ಈಗ ಚಿನ್ನದ ಬೆಲೆ ಏರಿಕೆಯಿಂದಾಗಿ ಹೂಡಿಕೆಯಲ್ಲಿ ಚಿನ್ನದ ಪಾಲು ಶೇ. 18-22ರಷ್ಟಾಗಿದೆ. ಹೀಗಾಗಿ, ಹೂಡಿಕೆದಾರರು ಚಿನ್ನವನ್ನು ಮಾರಿ ಲಾಭ ಮಾಡಲು ಯತ್ನಿಸಬಹುದು’ ಎಂದು ಮನೋಜ್ ಝಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ