AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್

Avoid Gold Buying Traps: ಹಬ್ಬಗಳಲ್ಲಿ ಚಿನ್ನಾಭರಣ ಖರೀದಿಸುವಾಗ "0% ಮೇಕಿಂಗ್ ಚಾರ್ಜಸ್" ಆಫರ್ ಕೇಳಿರುತ್ತೀರಿ. ಆದರೆ, ಇದು ಗ್ರಾಹಕರನ್ನು ಆಕರ್ಷಿಸುವ ತಂತ್ರವಷ್ಟೇ. ಆಭರಣದಂಗಡಿಗಳು ವೇಸ್ಟೇಜ್ ಶುಲ್ಕ, ಮಾರುಕಟ್ಟೆಗಿಂತ ಹೆಚ್ಚಿನ ಚಿನ್ನದ ದರ ಮತ್ತು ಅತಿಯಾದ ಬೆಲೆಯ ಹರಳುಗಳ ಮೂಲಕ ಗುಪ್ತವಾಗಿ ಶುಲ್ಕ ವಿಧಿಸುತ್ತವೆ. ಈ ಹಿಡನ್ ಚಾರ್ಜ್‌ಗಳಿಂದ ಗ್ರಾಹಕರು ಹೇಗೆ ವಂಚನೆಗೆ ಒಳಗಾಗುತ್ತಾರೆ ಮತ್ತು ನಿಮ್ಮ ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2025 | 4:47 PM

Share

ಚಿನ್ನಕ್ಕೆ ಝೀರೋ ಪರ್ಸೆಂಟ್ ಮೇಕಿಂಗ್ ಚಾರ್ಜಸ್ ಎಂದು ಆಭರಣದಂಗಡಿಯವರು ಹೇಳಿಕೊಳ್ಳುವುದನ್ನು ಕೇಳಿರುತ್ತೇವೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ, ಧನತ್ರಯೋದಶಿ, ಅಕ್ಷಯ ತೃತೀಯ, ಸಂಕ್ರಾಂತಿ, ಯುಗಾದಿ, ನವರಾತ್ರಿ ಇತ್ಯಾದಿ ದಿನಗಳಲ್ಲಿ ಚಿನ್ನ (gold) ಖರೀದಿಸಿದರೆ ಭಾಗ್ಯ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಇಂಥ ದಿನಗಳಲ್ಲಿ ಆಭರಣದಂಗಡಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ಆಫರ್​ಗಳನ್ನು ಮುಂದಿಡುವುದುಂಟು. ಮೇಕಿಂಗ್ ಚಾರ್ಜಸ್ ಹಾಕೋದಿಲ್ಲ, ಫ್ರೀ ಎಂದು ಹೇಳಿ ಗ್ರಾಹಕರನ್ನು ಸೆಳೆಯುವುದುಂಟು. ಆದರೆ, ಈ ಆಫರ್​ಗಳ ಹಿಂದೆ ಹೋಗುವ ಗ್ರಾಹಕರಿಗೆ ನಿಜಕ್ಕೂ ಲಾಭವಾ? ವಾಸ್ತವದಲ್ಲಿ ಮೇಕಿಂಗ್ ಚಾರ್ಜಸ್ ಅನ್ನೂ ಮೀರಿಸುವ ಕೆಲ ಶುಲ್ಕಗಳನ್ನು ಹಾಕುವುದುಂಟು.

ಇನ್ವೆಸ್ಟ್​ಮೆಂಟ್ ಬ್ಯಾಂಕರ್ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಸಾರ್ಥಕ್ ಅಹುಜಾ ಅವರು ಇತ್ತೀಚೆಗೆ ತಮ್ಮ ಲಿಂಕ್ಡ್​ಇನ್​ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಹೇಗೆ ಆಭರಣಕಾರರು ಹಲವು ಹಿಡ್ಡನ್ ಚಾರ್ಜ್​ಗಳ ಮೂಲಕ ಗ್ರಾಹಕರ ಸುಲಿಗೆ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ

ವೇಸ್ಟೇಜ್ ಚಾರ್ಜ್ ಹೆಚ್ಚಿಸುತ್ತಾರೆ…

ಒಂದು ಸಾಮಾನ್ಯ ವಿನ್ಯಾಸದ ಆಭರಣದ ತಯಾರಿಕೆಗೆ ವೇಸ್ಟ್ ಆಗುವ ಚಿನ್ನ ಶೇ. 2-3ರಷ್ಟು ಇರಬಹುದು. ಆದರೆ, ಹಲವು ಆಭರಣದಂಗಡಿಯವರು ಸಂಕೀರ್ಣ ವಿನ್ಯಾಸದ ನೆವ ಹೇಳಿ ವೇಸ್ಟೇಜ್ ಚಾರ್ಜ್ ಎಂದು ಶೇ. 5ರವರೆಗೆ ಶುಲ್ಕ ಹಾಕಬಹುದು.

ಹೆಚ್ಚಿನ ಚಿನ್ನದ ದರ

ಆಭರಣದಂಗಡಿಯವರ ಬಳಿ ನೀವು ಚಿನ್ನ ಖರೀದಿಸುವಾಗ ಬೆಲೆ ವಿಚಾರಿಸುತ್ತೀರಿ. ಆಗ ಮಾರ್ಕೆಟ್ ದರಕ್ಕಿಂತ ಸ್ವಲ್ಪ ಹೆಚ್ಚೇ ಬೆಲೆ ತಿಳಿಸುತ್ತಾರೆ. ಗ್ರಾಮ್​ಗೆ 200 ರೂ ಹೆಚ್ಚಿಸಿದರೂ ಸಾಕು, 50 ಗ್ರಾಮ್ ಒಡವೆಗೆ 10,000 ರೂ ಹೆಚ್ಚಿದಂತಾಗುತ್ತದೆ. ನೀವು ಗೂಗಲ್​ನಲ್ಲಿ ಮಾರ್ಕೆಟ್ ರೇಟ್ ತಿಳಿದುಕೊಂಡು ಹೋಗಿ, ಬೆಲೆ ವ್ಯತ್ಯಾಸ ಯಾಕೆಂದು ಪ್ರಶ್ನೆ ಮಾಡಬಹುದು. ಆದರೆ, ಅವರು ಕೊಡುವ ಸಿದ್ಧ ಉತ್ತರ ಎಂದರೆ ಬೆಲೆ ಅಪ್​ಡೇಟ್ ಆಗಿದೆ. ನೀವು ಹೇಳಿದ ಬೆಲೆ ನಿನ್ನೆ ಇತ್ತು. ಈಗ ಚೇಂಜ್ ಆಗಿದೆ ಎನ್ನುವ ಉತ್ತರ ಸಿಗಬಹುದು.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಎಷ್ಟು ಕಡಿಮೆ ಆಗಬಹುದು? ಇಲ್ಲಿದೆ ತಜ್ಞರ ಅಂದಾಜು

ಹರಳುಗಳಿಗೆ ದುಬಾರಿ ಬೆಲೆ ಹೇರಿಕೆ

ಶೇ 0 ಮೇಕಿಂಗ್ ಚಾರ್ಜಸ್ ಎಂದು ಹೇಳಿ ಕೊಡಲಾಗುವ ಆಭರಣಗಳಲ್ಲಿ ಅಲ್ಲಲ್ಲಿ ಸಣ್ಣ ಹರಳುಗಳನ್ನು ಹಾಕಿರಲಾಗುತ್ತದೆ. ಇವೂ ಕೂಡ ಅಮೂಲ್ಯ ವಸ್ತುಗಳೇ ಆದರೂ ವಾಸ್ತವಕ್ಕಿಂತ ಬಹಳ ಹೆಚ್ಚಿನ ಬೆಲೆ ಹಾಕಲಾಗಿರುತ್ತದೆ. ಮೇಕಿಂಗ್ ಚಾರ್ಜ್ ವಿನಾಯಿತಿಯಿಂದ ಸಿಗುವ ಉಳಿತಾಯವು ಈ ಹರಳುಗಳ ಮೂಲಕ ಹೊರಟುಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ