Silver
ಭೂಮಿಯಲ್ಲಿ ಸಿಗುವ ಅಮೂಲ್ಯ ಲೋಹಗಳಲ್ಲಿ ಬೆಳ್ಳಿ ಒಂದು. ಇದರ ವೈಜ್ಞಾನಿಕ ಹೆಸರು ಅರ್ಜೆಂಟಮ್. ತಾಮ್ರ, ಚಿನ್ನ, ಸೀಸ (ಲೆಡ್) ಮತ್ತು ಜಿಂಕ್ನ ರಿಫೈನಿಂಗ್ ವೇಳೆ ಬೆಳ್ಳಿ ಒಂದು ಉಪ ಉತ್ಪನ್ನವಾಗಿ ಸೃಷ್ಟಿಯಾಗುತ್ತದೆ. ಬೆಳ್ಳಿ ತುಸು ಶ್ವೇತ ವರ್ಣದ ಲೋಹವಾಗಿದ್ದು, ಚಿನ್ನದಂತೆ ಇದೂ ಕೂಡ ಬಹೂಪಯೋಗಿ ವಸ್ತುವಾಗಿದೆ. ಗೃಹಬಳಕೆ ವಸ್ತುಗಳು, ಆಭರಣ, ಎಲೆಕ್ಟ್ರಿಕಲ್ ಉತ್ಪನ್ನಗಳಾಗಿಯೂ ಬೆಳ್ಳಿ ಬಳಕೆಯಲ್ಲಿ ಇದೆ. ಬೆಳ್ಳಿಯನ್ನು ಔಷಧಿಯಾಗಿಯೂ ಬಳಸಬಹುದು. ವೈದ್ಯಕೀಯ ಉಪಕರಣದಲ್ಲೂ ಇದನ್ನು ಬಳಸಲಾಗುತ್ತದೆ. ಚಿನ್ನದಷ್ಟು ದುರ್ಲಭವಾಗಿಲ್ಲದಿದ್ದರೂ ಬೆಳ್ಳಿಗೂ ಸಾಕಷ್ಟು ಬೇಡಿಕೆ ಇದೆ. ಬೆಳ್ಳಿ ನಾಣ್ಯಗಳು ಬಹಳ ಸಾಮಾನ್ಯವಾಗಿ ಇವೆ. ಕ್ರಿಸ್ತಪೂರ್ವ 6ನೇ ಶತಮಾನದ ಹಿಂದಿನಷ್ಟು ಹಳೆಯದಾದ ಬೆಳ್ಳಿ ನಾಣ್ಯ ಸಿಕ್ಕಿದೆ. ಬಹೂಪಯೋಗಿಯಾಗಿರುವ ಬೆಳ್ಳಿಗೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಕಡಿಮೆ. ಹೀಗಾಗಿ, ಚಿನ್ನದಂತೆ ಬೆಳ್ಳಿಯೂ ಕೂಡ ಉತ್ತಮ ಹೂಡಿಕೆಯ ಸರಕು ಎನಿಸಿದೆ.