AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್’ ಸಿನಿಮಾವನ್ನು ಕೊಂಡಾಡಿದ ಕೊರಿಯನ್ ಸ್ಟಾರ್ ನಟ

Korean actor about KGF: ‘ಸ್ಕ್ವಿಡ್ ಗೇಮ್ಸ್’, ‘ದಿ ಚೇಸ್’, ‘ಮಿಡ್​​ನೈಟ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಕೊರಿಯಾದ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ವಿ ಹಾ ಜುನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮೊದಲು ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿದರು. ‘ಕೆಜಿಎಫ್’ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ...

‘ಕೆಜಿಎಫ್’ ಸಿನಿಮಾವನ್ನು ಕೊಂಡಾಡಿದ ಕೊರಿಯನ್ ಸ್ಟಾರ್ ನಟ
Wi Ha Joon Kgf
ಮಂಜುನಾಥ ಸಿ.
|

Updated on: Mar 15, 2026 | 10:45 PM

Share

ಕೊರಿಯನ್ ಸಿನಿಮಾಗಳು (Cinema) ವಿಶ್ವದಾದ್ಯಂತ ಮೋಡಿ ಮಾಡಿವೆ. ವಿಶ್ವದಲ್ಲಿಯೇ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಿಸುವ ದೇಶಗಳಲ್ಲಿ ಕೊರಿಯಾ ಸಹ ಒಂದು. ಕೋವಿಡ್ ನಂತರದ ಒಟಿಟಿ ಕ್ರಾಂತಿಯ ಬಳಿಕವಂತೂ ಕೊರಿಯನ್ ಸಿನಿಮಾಗಳು ಸಣ್ಣ ಪುಟ್ಟ ನಗರ-ಪಟ್ಟಣಗಳನ್ನೂ ತಲುಪಿವೆ. ಕೊರಿಯನ್ ಶೋಗಳು, ಕೊರಿಯನ್ ಹಾಡುಗಳು ಭಾರತದಲ್ಲಿಯೂ ಸಹ ಸಖತ್ ಜನಪ್ರಿಯ. ಇತ್ತೀಚೆಗಿನ ‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ‘ಸ್ಕ್ವಿಡ್ ಗೇಮ್’ ಸೇರಿದಂತೆ ಕೊರಿಯಾದ ಹಲವು ಸಿನಿಮಾ, ಶೋಗಳಲ್ಲಿ ನಟಿಸಿರುವ ಸ್ಟಾರ್ ನಟರೊಬ್ಬರು ಕನ್ನಡದ ‘ಕೆಜಿಎಫ್’ ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

‘ಸ್ಕ್ವಿಡ್ ಗೇಮ್ಸ್’, ‘ದಿ ಚೇಸ್’, ‘ಮಿಡ್​​ನೈಟ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಕೊರಿಯಾದ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ವಿ ಹಾ ಜುನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮೊದಲು ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿದರು. ‘ನನಗೆ ಕೆಲವು ಭಾರತೀಯ ಸಿನಿಮಾಗಳ ಪರಿಚಯ ಇದೆ. ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ‘ಕೆಜಿಎಫ್’ ಸಿನಿಮಾ ನನಗೆ ಬಹಳ ಇಷ್ಟ. ಅದೊಂದು ಅದ್ಭುತವಾದ ಬಹಳ ಅದ್ಧೂರಿಯಾದ ಆಕ್ಷನ್ ಸಿನಿಮಾ. ಬಹಳ ಇಂಟೆನ್ಸ್ ಆದ ಆಕ್ಷನ್ ಮತ್ತು ಸನ್ನಿವೇಶಗಳನ್ನು ಆ ಸಿನಿಮಾ ಹೊಂದಿದೆ’ ಎಂದಿದ್ದಾರೆ.

‘ಕೆಜಿಎಫ್’ ಸಿನಿಮಾ ಅದ್ಧೂರಿ ಸ್ಕೇಲ್ ಹೊಂದಿರುವ ಸೀಟಿನ ತುದಿಗೆ ಕೂರಿಸುವ ಸಿನಿಮಾ, ಮತ್ತು ಅಷ್ಟೇ ಮನೊರಂಜನಾತ್ಮಕವೂ ಇದೆ. ನಾನು ಸಹ ಅಂಥಹಾ ಒಂದು ಅದ್ಧೂರಿ ಮತ್ತು ಇಂಟೆನ್ಸ್ ಆಗಿರುವ ಆಕ್ಷನ್ ಸಿನಿಮಾನಲ್ಲಿ ನಟಿಸಲು ಕಾತರದಿಂದ ಕಾಯುತ್ತಿದ್ದೀನಿ. ನನಗೆ ಅಂಥಹಾ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಅದು ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಜನಪ್ರಿಯವಾಗಿರುವ ‘3 ಇಡಿಯಟ್ಸ್’ ಸಿನಿಮಾವನ್ನು ಸಹ ನಾನು ಇನ್ನು ಮೆನ್ಷನ್ ಮಾಡಲೇ ಬೇಕು. ಅದು ಬಹಳ ಮನೊರಂಜನಾತ್ಮಕ ಮತ್ತು ಅಷ್ಟೆ ಹಾಸ್ಯಮಯ ಸಿನಿಮಾ ಅದರ ಜೊತೆಗೆ ಸಮಾಜಕ್ಕೆ ಒಂದು ಅದ್ಭುತ ಸಂದೇಶವನ್ನು ಸಹ ಹೊಂದಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

ಕನ್ನಡದ ಸಿನಿಮಾಗಳು ಕರ್ನಾಟಕದ ಗಡಿಯನ್ನೇ ದಾಟದ ಸಮಯವೊಂದಿತ್ತು. ಆದರೆ ಈಗ ವಿಶ್ವದ ಗಡಿಯನ್ನು ದಾಟುವುದು ಮಾತ್ರವಲ್ಲದೆ, ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುವಾಗ ವಿದೇಶಿ ನಟನೊಬ್ಬ ‘ಕೆಜಿಎಫ್’ ಅನ್ನು ಉದಾಹರಣೆಯಾಗಿ ನೀಡುವುದು ‘ಕೆಜಿಎಫ್’ ಸಿನಿಮಾ ಸೃಷ್ಟಿಸಿರುವ ಪ್ರಭಾವಕ್ಕೆ ಅದ್ಭುತ ಉದಾಹರಣೆ ಆಗಿದೆ. ‘ಕೆಜಿಎಫ್’ ಮೂಲಕ ಯಶ್ ಮತ್ತು ಪ್ರಶಾಂತ್ ನೀಲ್ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಆ ಸಿನಿಮಾದ ಮೂಲಕ ಮನೊರಂಜನಾ ಕ್ಷೇತ್ರದಲ್ಲಿ ಕರ್ನಾಟಕದ ಹೆಸರನ್ನು ದೇಶ-ವಿದೇಶಗಳಿಗೆ ವಿಸ್ತರಿಸಿದ್ದಾರೆ.

ಈಗ ಯಶ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು ಅದುವೇ ‘ಟಾಕ್ಸಿಕ್’ ಈ ಸಿನಿಮಾವನ್ನು ಸಹ ಅವರು ಅಂತರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಮಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಯಶ್ ಮತ್ತು ಕೆವಿಎನ್ ಬಂಡವಾಳ ಹೂಡಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us