AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharmendra Pradhan Resignation: ರಾಜೀನಾಮೆ ನೀಡಿದ ರಹಸ್ಯ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್!

ನೀಟ್ ಪೇಪರ್ ಲೀಕ್ ಹಗರಣ ಹಾಗೂ ತೀವ್ರ ವಿದ್ಯಾರ್ಥಿ ಪ್ರತಿಭಟನೆಗಳ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮೇಂದ್ರ ಪ್ರಧಾನ್ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ. ಯುವ ಜನಾಂಗದ ಹಿತ ಕಾಯಲು ಹಾಗೂ ರಾಜಕೀಯ ಸಂಚುಗಳಿಂದ ಅವರನ್ನು ದೂರವಿಡಲು ಸಚಿವ ಸ್ಥಾನ ತ್ಯಜಿಸಿರುವುದಾಗಿ ಅವರು ತಿಳಿಸಿದ್ದು, ಒಡಿಶಾದಲ್ಲಿ ವಿರೋಧ ಪಕ್ಷಗಳ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Dharmendra Pradhan Resignation: ರಾಜೀನಾಮೆ ನೀಡಿದ ರಹಸ್ಯ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್!
ಧರ್ಮೇಂದ್ರ ಪ್ರಧಾನ್
ಭಾವನಾ ಹೆಗಡೆ
|

Updated on: Aug 09, 2026 | 8:51 AM

Share

ಮುಖ್ಯಾಂಶಗಳು

  • ನೀಟ್ ಪೇಪರ್ ಲೀಕ್ ಪ್ರತಿಭಟನೆ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
  • ಯುವ ಪೀಳಿಗೆಯ ಹಿತದೃಷ್ಟಿಯಿಂದ ಸಚಿವ ಸ್ಥಾನ ತೊರೆದಿರುವುದಾಗಿ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.
  • ತಮಗೆ ವೈಯಕ್ತಿಕ ಅಧಿಕಾರದ ಹಪಾಹಪಿತನ ಇಲ್ಲವೆಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಭುವನೇಶ್ವರ, ಆಗಸ್ಟ್ 09: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪೇಪರ್ ಲೀಕ್ ಹಗರಣ ಹಾಗೂ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ಶನಿವಾರ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಡಿಶಾದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀಟ್ ಪೇಪರ್ ಲೀಕ್ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಯುವ ಪೀಳಿಗೆಯನ್ನು (Gen Z) ದಾರಿ ತಪ್ಪಿಸಲು ಕೆಲವು ಶಕ್ತಿಗಳು ವ್ಯವಸ್ಥಿತ ಸಂಚು ರೂಪಿಸಿದ್ದವು. ಈ ಕಾರಣಕ್ಕಾಗಿಯೇ ನಾನು ಸಚಿವ ಸ್ಥಾನ ತೊರೆಯಲು ನಿರ್ಧರಿಸಿದೆ” ಎಂದು ತಮ್ಮ ಮೌನ ಮುರಿದಿದ್ದಾರೆ.

‘ನನಗೆ ಸಚಿವ ಸ್ಥಾನ ಮುಖ್ಯವಲ್ಲ, ಯುವಕರ ಭವಿಷ್ಯ ಮುಖ್ಯ’: ಧರ್ಮೇಂದ್ರ ಪ್ರಧಾನ್

ತಮ್ಮ ರಾಜೀನಾಮೆಯ ಕುರಿತು ಸ್ಪಷ್ಟನೆ ನೀಡಿದ ಧರ್ಮೇಂದ್ರ ಪ್ರಧಾನ್, “ದೇಶದ ಯುವ ಪೀಳಿಗೆ ನಮ್ಮ ಮಕ್ಕಳು. ಆದರೆ ಕೆಲವು ಹಿತಾಸಕ್ತಿಗಳು ಅವರನ್ನು ರಾಜಕೀಯವಾಗಿ ಬಳಸಿಕೊಂಡು ದಾರಿ ತಪ್ಪಿಸಲು ಯತ್ನಿಸಿದವು. ನನಗೆ ವೈಯಕ್ತಿಕವಾಗಿ ಯಾವುದೇ ಅಧಿಕಾರದ ಹಪಹಪಿತನ ಇಲ್ಲ. ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ 2 ಕೋಟಿ ಮಕ್ಕಳು ಜನಿಸುತ್ತಾರೆ. ಕಳೆದ 10 ವರ್ಷಗಳಲ್ಲಿ 20 ಕೋಟಿ ಯುವ ಜನಾಂಗ ಸೃಷ್ಟಿಯಾಗಿದೆ. ದೇಶವನ್ನು ‘ವಿಶ್ವಗುರು’ ಮಾಡುವ ಮಹದಾಸೆ ಅವರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ನನಗೇನು ಮುಖ್ಯವಾಗಿರಲಿಲ್ಲ” ಎಂದು ಭಾವುಕರಾಗಿ ನುಡಿದರು.

ಜುಲೈ 25 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಾವೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ

ಇದೇ ವೇಳೆ ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಡಿ (BJD) ಅಧ್ಯಕ್ಷ ನವೀನ್ ಪಟ್ನಾಯಕ್ ವಿರುದ್ಧ ಧರ್ಮೇಂದ್ರ ಪ್ರಧಾನ್ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಡಿ ಕಾರ್ಯಕರ್ತರು ತಮಗೆ ಕಪ್ಪು ಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್’ ಘೋಷಣೆ ಕೂಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಒಬ್ಬ ರೈತನ ಮಗ. ನೀವು ನನ್ನನ್ನು ವಾಪಸ್ ಹೋಗಲು ಹೇಳಿದರೂ, ನಾನು ಮತ್ತೆ ಜನರ ಸೇವೆಗಾಗಿ ಮರಳಿ ಬರುತ್ತೇನೆ. ನವೀನ್ ಬಾಬು ನನ್ನನ್ನು ಒಡಿಶಾದ ಜನತೆಗೆ ಅವಮಾನ ತಂದವರು ಎಂದು ಬಿಂಬಿಸುತ್ತಿದ್ದಾರೆ. ಆದರೆ ನಾನು ಒಡಿಶಾದ ಕೀರ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ಮಾಡಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ ಯಾರೀ ಧರ್ಮೇಂದ್ರ ಪ್ರಧಾನ್?

ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಡಿ ನಾಯಕರು, “ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ನಡೆಸಿದ ಯತ್ನ ಹಾಗೂ ಪೇಪರ್ ಲೀಕ್‌ನಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಅನುಭವಿಸಿದ ಮಾನಸಿಕ ಒತ್ತಡವೇ ಅವರ ರಾಜೀನಾಮೆಗೆ ಮುಖ್ಯ ಕಾರಣ, ಬೇರೆಯವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ” ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?