NEET Exam
ನೀಟ್ (NEET – National Eligibility cum Entrance Test) ಎಂಬುದು ಭಾರತದಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸಲಾಗುವ ಏಕೈಕ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಎಂಬಿಬಿಎಸ್ (MBBS), ಬಿಡಿಎಸ್ (BDS) ಮತ್ತು ಆಯುಷ್ (AYUSH) ನಂತಹ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗುತ್ತದೆ. ಇದನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಆಯೋಜಿಸುತ್ತದೆ. ಈ ಪರೀಕ್ಷೆಯು ಮುಖ್ಯವಾಗಿ ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಮತ್ತು ಜೀವಶಾಸ್ತ್ರ (Biology – Botany & Zoology) ವಿಷಯಗಳನ್ನೊಳಗೊಂಡಿದ್ದು, ಒಟ್ಟು 720 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳ (MCQs) ಮಾದರಿಯಲ್ಲಿರುತ್ತದೆ. ಭಾರತದಲ್ಲಿನ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅತ್ಯಗತ್ಯವಾಗಿದೆ.
ಇನ್ನೂ ಹೆಚ್ಚು ಓದಿNEET ಪರೀಕ್ಷೆ ಇನ್ಮುಂದೆ ಆನ್‌ಲೈನ್? ಪೆನ್-ಪೇಪರ್ ಬದಲು CBT ಮಾದರಿಗೆ ಬದಲಾಯಿಸಲು ಕೇಂದ್ರ ಸರ್ಕಾರದ ಸಿದ್ಧತೆ!
ಕೇಂದ್ರ ಶಿಕ್ಷಣ ಸಚಿವಾಲಯವು ನೀಟ್ ಯುಜಿ ಪರೀಕ್ಷೆಯನ್ನು ಪೆನ್-ಮತ್ತು-ಪೇಪರ್ನಿಂದ ಆನ್‌ಲೈನ್ ಕಂಪ್ಯೂಟರ್ ಆಧಾರಿತ (CBT) ಮಾದರಿಗೆ ಬದಲಾಯಿಸಲು ಯೋಜನೆ ರೂಪಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಮತ್ತು ಗ್ರಾಮೀಣ, ನಗರ ಪ್ರದೇಶಗಳೆರಡರಲ್ಲೂ ಏಕರೂಪದ ಪರೀಕ್ಷಾ ಸೌಲಭ್ಯ ಒದಗಿಸಲು ಅತ್ಯುನ್ನತ ಗುಣಮಟ್ಟದ ಆನ್‌ಲೈನ್ ಮೂಲಸೌಕರ್ಯ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಹತ್ವದ ಬದಲಾವಣೆಯ ಅಂತಿಮ ನಿರ್ಧಾರವು ಉನ್ನತ ಮಟ್ಟದ ಕಾರ್ಯಪಡೆಯ ವರದಿ ನಂತರ ಪ್ರಕಟಗೊಳ್ಳಲಿದೆ.
- Akshatha Vorkady
- Updated on: Sep 30, 2026
- 3:14 pm
ನೀಟ್ ಪಿಜಿ ಫಲಿತಾಂಶ ಪ್ರಕಟ: 720ಕ್ಕೆ 641 ಅಂಕ ಗಳಿಸಿದ ಅಭ್ಯರ್ಥಿ ಮೊದಲ ರ‍್ಯಾಂಕ್
ನೀಟ್ ಪಿಜಿ 2026ರ ಫಲಿತಾಂಶ ಪ್ರಕಟಗೊಂಡಿದ್ದು, ಎನ್ ಬಿ ಇ ಎಂ ಎಸ್ ಈ ಫಲಿತಾಂಶವನ್ನು ಪ್ರಕಟಿಸಿದೆ. 720 ಅಂಕಗಳಿಗೆ 641 ಅಂಕ ಗಳಿಸಿದ ಅಭ್ಯರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ರ್‍ಯಾಂಕ್‌ಗೆ 633 ಅಂಕ ಮತ್ತು ತೃತೀಯ ರ್‍ಯಾಂಕ್‌ಗೆ 626 ಅಂಕ ಲಭಿಸಿದೆ. ಒಟ್ಟು 20 ಟಾಪ್ ಅಭ್ಯರ್ಥಿಗಳು 614 ರಿಂದ 641 ಅಂಕಗಳ ವ್ಯಾಪ್ತಿಯಲ್ಲಿ ಸ್ಕೋರ್ ಮಾಡಿದ್ದಾರೆ.
- Akshatha Vorkady
- Updated on: Sep 25, 2026
- 1:32 pm
NEET PG ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಇಲ್ಲಿದೆ ಲಿಂಕ್
ದೇಶಾದ್ಯಂತ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟವಾಗಿದೆ. ಅಭ್ಯರ್ಥಿಗಳು ತಮ್ಮ ಅಂಕಗಳನ್ನು natboard.edu.in ನಲ್ಲಿ ಪರಿಶೀಲಿಸಬಹುದು.ಅಕ್ಟೋಬರ್ 1 ರೊಳಗೆ ಉತ್ತರ ಕೀಲಿ ಬಿಡುಗಡೆಯಾಗಲಿದೆ. ಫಲಿತಾಂಶ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್ ವಿವರಗಳನ್ನು ನಮೂದಿಸಿ.
- Akshatha Vorkady
- Updated on: Sep 24, 2026
- 3:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಎನ್‌ಟಿಎ ಕಚೇರಿಗೆ ಭೇಟಿ ನೀಡುವ ಸುಳಿವು ನೀಡಿದ ಸುಪ್ರೀಂ ಕೋರ್ಟ್
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಪರೀಕ್ಷಾ ಪದ್ಧತಿಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಎನ್‌ಟಿಎ ಸುಧಾರಣೆಗಳಿಗೆ ಸಂಬಂಧಿಸಿದ ತನ್ನ ಅಫಿಡವಿಟ್ ಅನ್ನು ತಕ್ಷಣವೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವಂತೆ ಕೋರ್ಟ್ ಸೂಚಿಸಿದೆ. ಅಲ್ಲದೆ, ಈಗಾಗಲೇ ರಚಿಸಲಾಗಿರುವ ನಿಲೇಕಣಿ ಸಮಿತಿ ಮುಂದಿನ 3 ವಾರಗಳ ಒಳಗಾಗಿ ಪ್ರಗತಿ ವರದಿಯ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂದು ನ್ಯಾಯಪೀಠ ನಿರ್ದೇಶಿಸಿದೆ. ಸುಧಾರಣೆಗಳು ಕೇವಲ ಸಮಿತಿಯ ವರದಿಗಳಿಗೆ ಸೀಮಿತವಾಗದೆ, ಹಂತ-ಹಂತವಾಗಿ ನೈಜವಾಗಿ ಅನುಷ್ಠಾನಕ್ಕೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ.
- Sushma Chakre
- Updated on: Sep 18, 2026
- 3:21 pm
ನೀಟ್ ಪಿಜಿ ಮರು ಪರೀಕ್ಷೆ: ಶೀಘ್ರದಲ್ಲೇ ಫಲಿತಾಂಶ ಹಾಗೂ ಅಂತಿಮ ಕೀ ಉತ್ತರ ಪ್ರಕಟ!
ನೀಟ್ ಪಿಜಿ 2026 ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಲಕ್ಷಾಂತರ ಅಭ್ಯರ್ಥಿಗಳು ಫಲಿತಾಂಶ ಮತ್ತು ಅಂತಿಮ ಉತ್ತರ ಕೀಲಿಗಾಗಿ ಕಾಯುತ್ತಿದ್ದಾರೆ. ಎನ್‌ಬಿಇಎಂಎಸ್ ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇವುಗಳನ್ನು ಪ್ರಕಟಿಸಲಿದೆ. ಆಗಸ್ಟ್ 30 ರಂದು ಮುಖ್ಯ ಪರೀಕ್ಷೆ ಹಾಗೂ ಸೆಪ್ಟೆಂಬರ್ 5 ರಂದು ಮರು ಪರೀಕ್ಷೆ ನಡೆದಿದ್ದು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಫಲಿತಾಂಶ, ನಂತರ ಉತ್ತರ ಕೀಲಿ ಲಭ್ಯವಾಗಲಿದೆ.
- Akshatha Vorkady
- Updated on: Sep 6, 2026
- 3:48 pm
ದೇಶಾದ್ಯಂತ ಶಾಂತಿಯುತವಾಗಿ ಮುಗಿದ ನೀಟ್-ಪಿಜಿ ಪರೀಕ್ಷೆ: ತಾಂತ್ರಿಕ ಸಮಸ್ಯೆಗೆ ಸಿಲುಕಿದ ಜೈಪುರದ ಅಭ್ಯರ್ಥಿಗಳಿಗೆ ಸೆ. 5ಕ್ಕೆ ಮರುಪರೀಕ್ಷೆ
NEET-PG 2026 ಪರೀಕ್ಷೆಯು ದೇಶಾದ್ಯಂತ ಬಿಗಿ ಭದ್ರತೆ ಹಾಗೂ ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಜಸ್ಥಾನದ ಜೈಪುರದಲ್ಲಿ ತಾಂತ್ರಿಕ ಸಮಸ್ಯೆಗೆ ಸಿಲುಕಿದ 2,445 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಮರುಪರೀಕ್ಷೆ ನಡೆಸಲಾಗುವುದು. ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗಲಿದೆ.
- Nayana Rajeev
- Updated on: Aug 30, 2026
- 3:31 pm
NEET-PG 2026: ನೀಟ್–ಪಿಜಿ ಪರೀಕ್ಷೆಯ ವೇಳೆ ವಿದ್ಯುತ್ ಕಡಿತ; ಸೆಪ್ಟೆಂಬರ್ 5ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧಾರ!
ಜೈಪುರದ ಐಒಎನ್ ಡಿಜಿಟಲ್ ವಲಯದಲ್ಲಿ ನಡೆದ ನೀಟ್-ಪಿಜಿ ಪರೀಕ್ಷೆಗೆ ವಿದ್ಯುತ್ ಕೈಕೊಟ್ಟ ಕಾರಣ ಭಾರಿ ಅವ್ಯವಸ್ಥೆ ಉಂಟಾಗಿದೆ. ಪರೀಕ್ಷೆ ಅರ್ಥಕ್ಕೆ ನಿಂತು, 311 ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಡಿತದಿಂದ ತೊಂದರೆಗೊಳಗಾದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಜೈಪುರದಲ್ಲೇ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇಂದು ನಡೆದ ಪರೀಕ್ಷೆಗೆ ದೇಶಾದ್ಯಂತ 2.73 ಲಕ್ಷ ವಿದ್ಯಾರ್ಥಿಗಳಲ್ಲಿ 2.65 ಲಕ್ಷ ಅಭ್ಯರ್ಥಿಗಳು 1,111 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
- Akshatha Vorkady
- Updated on: Aug 30, 2026
- 2:59 pm
NEET PG Exam 2026: ಇಂದೇ ನೀಟ್-ಪಿಜಿ 2026 ಪರೀಕ್ಷೆ: ಹಾಲ್ ಟಿಕೆಟ್ ಜೊತೆ ಆಧಾರ್ ದೃಢೀಕರಣ ಕಡ್ಡಾಯ, 8.30ಕ್ಕೆ ಗೇಟ್ ಕ್ಲೋಸ್
ನೀಟ್ ಪಿಜಿ ಪರೀಕ್ಷೆ ಇಂದು ನಡೆಯಲಿದ್ದು, ಪ್ರವೇಶಕ್ಕೆ ಆಧಾರ್ ದೃಢೀಕರಣ ಕಡ್ಡಾಯ. ಬೆಳಗ್ಗೆ 8:30ರ ಒಳಗೆ ಕೇಂದ್ರಕ್ಕೆ ಹಾಜರಾಗಬೇಕು; ನಂತರ ಪ್ರವೇಶವಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ನಿರ್ದಿಷ್ಟ ಡ್ರೆಸ್ ಕೋಡ್ ಪಾಲಿಸುವುದು ಅಗತ್ಯ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಮೂಲ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಪರೀಕ್ಷಾ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮ ಜಾರಿ.
- Nayana Rajeev
- Updated on: Aug 30, 2026
- 8:24 am
ಎನ್ಟಿಎಯಲ್ಲಿ ಮುಖ್ಯ ಬದಲಾವಣೆ; ಐಎಎಸ್-ಐಪಿಎಸ್ ಸೇರಿದಂತೆ 3 ಅಧಿಕಾರಿಗಳ ನೇಮಕ
ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಐಎಎಸ್, ಐಪಿಎಸ್ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ಈ ಅಧಿಕಾರಿಗಳನ್ನು ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಪ್ರತ್ಯೇಕ ಆದೇಶಗಳ ಪ್ರಕಾರ, ರವಿ ಕುಮಾರ್ ಸಿಂಗ್ (ಐಪಿಎಸ್) ಮತ್ತು ಪ್ರಸನ್ನ ವೆಂಕಟೇಶ್ ವಿ (ಐಎಎಸ್) ಅವರನ್ನು NTAಯಲ್ಲಿ ನಿರ್ದೇಶಕರಾಗಿ ನೇಮಿಸಲಾಗಿದೆ. ಐಆರ್ಎಸ್ ಅಧಿಕಾರಿ ಅಮಿತ್ ಸಂದರಿಯಾ ಅವರನ್ನು NTAಯಲ್ಲಿ ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ.
- Sushma Chakre
- Updated on: Aug 28, 2026
- 10:22 pm
ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆಯಿಂದ ಪರೀಕ್ಷಾ ಪದ್ಧತಿ ಸುಧಾರಣೆಗೆ ಜನರಿಂದ ಸಲಹೆಗಳ ಆಹ್ವಾನ
ಭಾರತದ ಉನ್ನತ ಸ್ಪರ್ಧಾತ್ಮಕ ಮತ್ತು ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ರಚಿಸಲಾಗಿರುವ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಗೆ (HPTF) ಸಲಹೆಗಳನ್ನು ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಪರೀಕ್ಷೆಗಳ ಸುರಕ್ಷತೆ, ಪ್ರಶ್ನೆಪತ್ರಿಕೆ ವಿನ್ಯಾಸ, ಕಂಪ್ಯೂಟರ್ ಆಧಾರಿತ ಪರೀಕ್ಷಾ ವಿಧಾನ ಹಾಗೂ ಅಕ್ರಮ ತಡೆಗಟ್ಟುವ ಕುರಿತು ಸಾರ್ವಜನಿಕರು ತಮ್ಮ ಸಲಹೆಗಳನ್ನು ಹಂಚಿಕೊಳ್ಳಬಹುದು.
- Sushma Chakre
- Updated on: Aug 28, 2026
- 8:39 pm
NEET-UG Exam: ಜೆಇಇ ಮಾದರಿಯಲ್ಲಿ ನೀಟ್-ಯುಜಿ ಪರೀಕ್ಷಾ ಕ್ರಾಂತಿ:ಆನ್‌ಲೈನ್ ಕಂಪ್ಯೂಟರ್ ಪರೀಕ್ಷೆ
ನೀಟ್-ಯುಜಿ ಪರೀಕ್ಷೆಯು ಜೆಇಇ ಮಾದರಿಯಲ್ಲಿ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಬದಲಾಗುತ್ತಿದೆ. ಇದು ಪರೀಕ್ಷಾ ಸೋರಿಕೆಗಳನ್ನು ತಡೆಗಟ್ಟಿ, ಪಾರದರ್ಶಕತೆ ಹೆಚ್ಚಿಸಲಿದೆ. ಹಲವು ಪಾಳಿಗಳಲ್ಲಿ ಪರೀಕ್ಷೆ, ನಾರ್ಮಲೈಸೇಶನ್ ವಿಧಾನ, ಮತ್ತು ಸರ್ಕಾರಿ ಕೇಂದ್ರಗಳಿಂದ ಭದ್ರತೆ ಸುಧಾರಿಸಲಿದೆ. ಡಾ. ಕೆ. ರಾಧಾಕೃಷ್ಣನ್ ಸಮಿತಿ ಶಿಫಾರಸ್ಸಿನಂತೆ ಈ ಸುಧಾರಣೆಗಳು ವೇಗದ ಹಾಗೂ ನಿಖರ ಫಲಿತಾಂಶಕ್ಕೆ ಸಹಕಾರಿ
- Nayana Rajeev
- Updated on: Aug 28, 2026
- 11:20 am
NEET-PG Exam 2026: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ, ಪ್ರಶ್ನೆಗಳ ಸಂಖ್ಯೆ 200 ರಿಂದ 180 ಕ್ಕೆ ಇಳಿಕೆ
ನೀಟ್-ಪಿಜಿ (NEET-PG 2026) ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಎನ್‌ಬಿಇಎಂಎಸ್ (NBEMS) ಸಂಪೂರ್ಣವಾಗಿ ಸಜ್ಜಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಅಭಿಜತ್ ಶೇಠ್ ತಿಳಿಸಿದ್ದಾರೆ. ಪರೀಕ್ಷೆಯು ಆಗಸ್ಟ್ 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.
- Nayana Rajeev
- Updated on: Aug 28, 2026
- 10:15 am