AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Planetary Transits: ಆಗಸ್ಟ್​​ನಲ್ಲಿ ಈ 4 ರಾಶಿಗೆ ರಾಜಯೋಗ; ಹೊಸ ಮನೆ, ವಾಹನ ಖರೀದಿ ಭಾಗ್ಯ!

ಆಗಸ್ಟ್ ತಿಂಗಳಲ್ಲಿ ಗುರು, ಶನಿ ಮತ್ತು ಶುಕ್ರ ಗ್ರಹಗಳ ಅಪರೂಪದ ಸಂಚಾರದಿಂದಾಗಿ ಅದ್ಭುತ ರಾಜಯೋಗಗಳು ಸೃಷ್ಟಿಯಾಗುತ್ತಿವೆ. ಈ ಗ್ರಹಗಳ ಶುಭ ಪ್ರಭಾವದಿಂದಾಗಿ ಮೇಷ, ಕನ್ಯಾ, ಮಕರ ಮತ್ತು ಮೀನ ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಧನಲಾಭ ಹಾಗೂ ಹೊಸ ಮನೆ-ವಾಹನ ಖರೀದಿಸುವ ಯೋಗ ಕೂಡಿಬರಲಿದೆ.

Planetary Transits: ಆಗಸ್ಟ್​​ನಲ್ಲಿ ಈ 4 ರಾಶಿಗೆ ರಾಜಯೋಗ; ಹೊಸ ಮನೆ, ವಾಹನ ಖರೀದಿ ಭಾಗ್ಯ!
ಹೊಸ ಮನೆ, ವಾಹನ ಖರೀದಿ ಭಾಗ್ಯ Image Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 04, 2026 | 10:50 AM

Share

ಆಗಸ್ಟ್ ತಿಂಗಳು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ತಿಂಗಳಲ್ಲಿ ಜ್ಯೋತಿಷ್ಯದ ಪ್ರಮುಖ ಗ್ರಹಗಳಾದ ಗುರು, ಶನಿ ಮತ್ತು ಶುಕ್ರ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಚಾರದಿಂದಾಗಿ ಬಲವಾದ ರಾಜಯೋಗಗಳು ಸೃಷ್ಟಿಯಾಗುತ್ತಿವೆ. ಈ ಗ್ರಹಗಳ ವಿಶೇಷ ಶುಭ ದೃಷ್ಟಿಯಿಂದಾಗಿ ನಾಲ್ಕು ರಾಶಿಚಕ್ರಗಳ ಭಾಗ್ಯವೇ ಬದಲಾಗಲಿದ್ದು, ಅವರು ಅಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಲಿವೆ. ವಿಶೇಷವಾಗಿ ಈ ಅವಧಿಯಲ್ಲಿ ಹೊಸ ಮನೆ, ಆಸ್ತಿ ಅಥವಾ ವಾಹನವನ್ನು ಖರೀದಿಸುವ ಯೋಗ ಈ ರಾಶಿಯವರಿಗಿದೆ.

ಮೇಷ ರಾಶಿ:

ಮೇಷ ರಾಶಿಯವರಿಗೆ ಆಗಸ್ಟ್ ತಿಂಗಳು ಅತ್ಯಂತ ಲಾಭದಾಯಕವಾಗಿರಲಿದೆ. ಅನಿರೀಕ್ಷಿತ ಮಾರ್ಗಗಳಿಂದ ಹಣದ ಹರಿವು ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಸುಧಾರಿಸಲಿದೆ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸ-ಕಾರ್ಯಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ಸಂತೋಷ ಹಾಗೂ ಗೌರವದ ವಾತಾವರಣ ನಿರ್ಮಾಣವಾಗಲಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಯ ಜಾತಕದವರಿಗೆ ಈ ಗ್ರಹಗಳ ಸಂಚಾರವು ಅತ್ಯಂತ ಶುಭ ಫಲಗಳನ್ನು ತರಲಿದೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಹೊಸ ಮನೆ ಅಥವಾ ಕನಸಿನ ವಾಹನವನ್ನು ಖರೀದಿಸುವ ಉತ್ತಮ ಅವಕಾಶಗಳು ಸಿಗಲಿವೆ. ವಿವಿಧ ಮೂಲಗಳಿಂದ ನಿರೀಕ್ಷಿತ ಹಾಗೂ ಅನಿರೀಕ್ಷಿತ ಹಣ ಹರಿದುಬರಲಿದ್ದು, ಆರ್ಥಿಕವಾಗಿ ಹೆಚ್ಚಿನ ಭದ್ರತೆ ಸಿಗಲಿದೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಮಕರ ರಾಶಿ:

ಮಕರ ರಾಶಿಯವರಿಗೆ ಈ ಸಮಯವು ಕಾನೂನು ಹಾಗೂ ಆಸ್ತಿ ವಿಚಾರಗಳಲ್ಲಿ ಜಯ ತಂದುಕೊಡಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ನಿಮಗೇ ಅನುಕೂಲಕರ ತೀರ್ಪು ಬರಲಿದೆ. ಹಿರಿಯರಿಂದ ಅಥವಾ ಅಜ್ಜ-ಅಜ್ಜಿಯಂದಿರಿಂದ ಬರಬೇಕಾಗಿದ್ದ ಆಸ್ತಿ ಕೈಸೇರಲಿದೆ. ಹೊಸ ವ್ಯಾಪಾರ-ವಹಿವಾಟು ಪ್ರಾರಂಭಿಸಲು ಇದು ಸೂಕ್ತ ಸಮಯವಾಗಿದ್ದು, ಹೊಸ ವಾಹನ ಖರೀದಿಯ ಯೋಗವೂ ಇದೆ.

ಮೀನ ರಾಶಿ:

ಮೀನ ರಾಶಿಯವರಿಗೆ ಆಗಸ್ಟ್ ತಿಂಗಳು ಆರ್ಥಿಕ ಹಾಗೂ ಮಾನಸಿಕ ನೆಮ್ಮದಿಯನ್ನು ನೀಡಲಿದೆ. ಈ ಹಿಂದೆ ನೀವು ಬೇರೆಯವರಿಗೆ ನೀಡಿದ್ದ ಹಣ ಅಥವಾ ಬರಬೇಕಾಗಿದ್ದ ಹಳೆಯ ಬಾಕಿ ಮೊತ್ತ ನಿಮ್ಮ ಕೈಸೇರಲಿದೆ. ಅನಗತ್ಯ ಖರ್ಚುಗಳು ಗಣನೀಯವಾಗಿ ಕಡಿಮೆಯಾಗಿ ಉಳಿತಾಯ ಹೆಚ್ಚಾಗಲಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗಲಿದ್ದು, ಆದಾಯದ ಹೊಸ ಬಾಗಿಲುಗಳು ತೆರೆಯಲಿವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು