AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಾಷ್ಟಮಿ 2026: ಶ್ರೀ ರಾಧಾರಾಣಿಯ ಜನ್ಮದಿನದ ಮಹತ್ವ, ಪೂಜಾ ಮುಹೂರ್ತ ಹಾಗೂ ಆಸಕ್ತಿದಾಯಕ ಪೌರಾಣಿಕ ಕಥೆ!

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ರಾಧಾ ಅಷ್ಟಮಿ ಆಚರಿಸಲಾಗುತ್ತದೆ. 2026ರಲ್ಲಿ ಸೆಪ್ಟೆಂಬರ್ 19 ರಂದು ಬರುವ ಈ ಶುಭದಿನದಂದು ರಾಧಾ-ಕೃಷ್ಣರನ್ನು ಪೂಜಿಸಿ, ಉಪವಾಸ ಆಚರಿಸುವುದರಿಂದ ದಾಂಪತ್ಯದಲ್ಲಿ ಸುಖ, ಸಮೃದ್ಧಿ ಹೆಚ್ಚುತ್ತದೆ. ಶ್ರೀಧಾಮನ ಶಾಪದಿಂದ ರಾಧಾರಾಣಿ ಭೂಲೋಕದಲ್ಲಿ ಅವತರಿಸಿದ ಪೌರಾಣಿಕ ಕಥೆಯೂ ಇದರ ಹಿಂದಿದೆ. ಮಧ್ಯಾಹ್ನದ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ರಾಧಾಷ್ಟಮಿ 2026: ಶ್ರೀ ರಾಧಾರಾಣಿಯ ಜನ್ಮದಿನದ ಮಹತ್ವ, ಪೂಜಾ ಮುಹೂರ್ತ ಹಾಗೂ ಆಸಕ್ತಿದಾಯಕ ಪೌರಾಣಿಕ ಕಥೆ!
ರಾಧಾಷ್ಟಮಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 18, 2026 | 11:21 AM

Share

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ರಾಧಾ ಅಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿ ಮುಗಿದ ಸರಿಯಾಗಿ 15 ದಿನಗಳ ನಂತರ ಶ್ರೀ ರಾಧಾರಾಣಿಯ ಜನ್ಮದಿನವಾದ ರಾಧಾಷ್ಟಮಿ ಬರುತ್ತದೆ. ಈ ಶುಭ ದಿನದಂದು ರಾಧಾ-ಕೃಷ್ಣರನ್ನು ಪೂಜಿಸಿ, ಉಪವಾಸ ವ್ರತ ಆಚರಿಸುವುದರಿಂದ ದಾಂಪತ್ಯದಲ್ಲಿ ಪ್ರೀತಿ-ಸೌಹಾರ್ದತೆ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ.

ರಾಧಾಷ್ಟಮಿ ದಿನಾಂಕ ಮತ್ತು ಪೂಜಾ ಮುಹೂರ್ತ:

2026 ರಲ್ಲಿ ಸೆಪ್ಟೆಂಬರ್ 19 ರ ಶನಿವಾರದಂದು ರಾಧಾ ಅಷ್ಟಮಿ ಆಚರಿಸಲ್ಪಡುತ್ತದೆ. ಸೂರ್ಯೋದಯದ ಸಮಯದಲ್ಲಿ ಅಷ್ಟಮಿ ತಿಥಿ ಇರುವ ದಿನವೇ ವ್ರತ ಆಚರಿಸುವುದು ಶಾಸ್ತ್ರೋಕ್ತವಾಗಿದೆ.

  • ಅಷ್ಟಮಿ ತಿಥಿ ಆರಂಭ: ಸೆಪ್ಟೆಂಬರ್ 18, 2026 ರಂದು ಮಧ್ಯಾಹ್ನ 1:02 ಗಂಟೆಗೆ
  • ಅಷ್ಟಮಿ ತಿಥಿ ಮುಕ್ತಾಯ: ಸೆಪ್ಟೆಂಬರ್ 19, 2026 ರಂದು ಮಧ್ಯಾಹ್ನ 3:28 ಕ್ಕೆ
  • ಪೂಜೆಗೆ ಅತ್ಯಂತ ಶುಭ ಸಮಯ: ಬೆಳಿಗ್ಗೆ 11:01 ರಿಂದ ಮಧ್ಯಾಹ್ನ 1:28 ರವರೆಗೆ.

ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದರೆ, ಶ್ರೀ ರಾಧಾರಾಣಿಯು ಮಧ್ಯಾಹ್ನದ ಅವಧಿಯಲ್ಲಿ ಜನ್ಮತಾಳಿದಳು ಎಂಬ ಐತಿಹ್ಯವಿದೆ. ಹಾಗಾಗಿ ರಾಧಾಷ್ಟಮಿಯಂದು ಮಧ್ಯಾಹ್ನ ರಾಧಾರಾಣಿಗೆ ಶ್ರೀಗಂಧ, ಹೂವು, ಹಣ್ಣು, ಬೆಣ್ಣೆ, ಖೀರ್ ಮುಂತಾದ ನೈವೇದ್ಯಗಳನ್ನು ಅರ್ಪಿಸಿ ಪೂಜಿಸುವುದು ವಿಶೇಷ.

ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!

ಶ್ರೀಧಾಮನ ಶಾಪದಿಂದ ಭೂಮಿಗೆ ಬಂದ ರಾಧಾರಾಣಿ:

ರಾಧಾಷ್ಟಮಿಯ ಸಂದರ್ಭದಲ್ಲಿ ಭಕ್ತರು ರಾಧಾರಾಣಿಯ ಭೂಲೋಕದ ಅವತಾರಕ್ಕೆ ಕಾರಣವಾದ ಒಂದು ಪೌರಾಣಿಕ ಕಥೆಯನ್ನು ಸ್ಮರಿಸುತ್ತಾರೆ. ಗೋಲೋಕದಲ್ಲಿ ಶ್ರೀಕೃಷ್ಣನ ಆಪ್ತ ಮಿತ್ರನಾದ ಶ್ರೀಧಾಮ (ಶ್ರೀದಾಂ) ಮತ್ತು ರಾಧಾರಾಣಿಯ ನಡುವೆ ಉಂಟಾದ ವಾದದಿಂದ ಈ ಶಾಪದ ಘಟನೆ ನಡೆಯಿತು. ಒಮ್ಮೆ ಶ್ರೀಕೃಷ್ಣನು ಗೋಲೋಕದಲ್ಲಿ ವಿರಾಜಾ ಎಂಬಾಕೆಯೊಂದಿಗೆ ಇದ್ದಾಗ, ಬಾಗಿಲಲ್ಲಿ ಯ ಯಾರನ್ನೂ ಬಿಡದಂತೆ ಶ್ರೀಧಾಮನಿಗೆ ಕಾವಲಿಟ್ಟಿದ್ದನು. ಅಲ್ಲಿಗೆ ಬಂದ ರಾಧಾರಾಣಿಯನ್ನು ಶ್ರೀಧಾಮ ತಡೆದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೋಪಗೊಂಡ ರಾಧಾರಾಣಿಯು ಶ್ರೀಧಾಮನಿಗೆ ‘ಭೂಮಿಯಲ್ಲಿ ರಾಕ್ಷಸ ಕುಲದಲ್ಲಿ ಜನ್ಮತಾಳು’ ಎಂದು ಶಾಪ ನೀಡಿದಳು. ಇದರಿಂದ ಅತೃಪ್ತನಾದ ಶ್ರೀಧಾಮನು ಪ್ರತಿಯಾಗಿ, “ನೀನು ಭೂಮಿಯ ಮೇಲೆ ಮಾನವಿಯಾಗಿ ಜನ್ಮತಾಳಿ, 100 ವರ್ಷಗಳ ಕಾಲ ಶ್ರೀಕೃಷ್ಣನಿಂದ ವಿರಹ ಯಾತನೆ ಅನುಭವಿಸು” ಎಂದು ಶಾಪ ನೀಡಿದನು.

ಈ ದೈವಿಕ ಶಾಪದ ಹಿನ್ನೆಲೆಯಲ್ಲೇ ರಾಧಾರಾಣಿ ಭೂಮಿಯಲ್ಲಿ ಅವತರಿಸಿ, ಶ್ರೀಕೃಷ್ಣನ ದೈವಿಕ ಪ್ರೀತಿ ಮತ್ತು ವಿರಹದ ಲೀಲೆಯನ್ನು ಜಗತ್ತಿಗೆ ತೋರಿಸಿಕೊಟ್ಟಳು ಎಂಬುದು ಪೌರಾಣಿಕ ಸಂಪ್ರದಾಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು