AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!

ಜಪಾನ್‌ನ ಕಾಮಕುರಾದಲ್ಲಿರುವ ವಿಶೇಷ 'ವಿಚ್ಛೇದನ ದೇವಾಲಯ'ವು 700 ವರ್ಷಗಳ ಇತಿಹಾಸ ಹೊಂದಿದೆ. ಪುರುಷರಿಗೆ ಮಾತ್ರ ವಿಚ್ಛೇದನ ಹಕ್ಕು ಇದ್ದ ಕಾಲದಲ್ಲಿ, ಗೃಹ ಹಿಂಸೆಗೆ ಒಳಗಾದ ಮಹಿಳೆಯರಿಗೆ ಇದು ಸುರಕ್ಷಿತ ಆಶ್ರಯ, ಮಾನಸಿಕ ಶಾಂತಿ ಮತ್ತು ಕಾನೂನುಬದ್ಧ ವಿಚ್ಛೇದನ ನೀಡುವ ಕೇಂದ್ರವಾಗಿತ್ತು. ಮಹಿಳಾ ಸನ್ಯಾಸಿನಿ ಕಾಕುಸನ್ ಶಿಡೋ ಸ್ಥಾಪಿಸಿದ ಈ ದೇವಾಲಯವು ಅಸಹಾಯಕ ಮಹಿಳೆಯರಿಗೆ ಹೊಸ ಬದುಕು ನೀಡುವ ಮೂಲಕ ಸಬಲೀಕರಣದ ಸಂಕೇತವಾಗಿ ನಿಂತಿದೆ.

ಜಪಾನ್‌ನಲ್ಲಿದೆ 'ಡಿವೋರ್ಸ್ ಟೆಂಪಲ್': ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ಡಿವೋರ್ಸ್ ಟೆಂಪಲ್Image Credit source: Jane Pipkin
ಅಕ್ಷತಾ ವರ್ಕಾಡಿ
|

Updated on:Sep 13, 2026 | 2:59 PM

Share

ಸಾಮಾನ್ಯವಾಗಿ ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾದಾಗ ದಂಪತಿಗಳು ದೇವಸ್ಥಾನಗಳಿಗೆ ತೆರಳಿ ಸಂಸಾರ ಚೆನ್ನಾಗಿರಲೆಂದು ಪ್ರಾರ್ಥಿಸುವುದನ್ನು ಕಾಣುತ್ತೇವೆ. ಆದರೆ ಜಪಾನ್‌ನಲ್ಲಿ ವಿಚ್ಛೇದನಕ್ಕಾಗಿಯೇ ಪ್ರಸಿದ್ಧಿ ಪಡೆದ ವಿಶೇಷ ದೇವಾಲಯವೊಂದಿದೆ. ಗಂಡನ ದೌರ್ಜನ್ಯಕ್ಕೆ ಒಳಗಾಗಿ ಕೌಟುಂಬಿಕ ಜೀವನದಿಂದ ಮುಕ್ತಿ ಬಯಸುವ ಮಹಿಳೆಯರಿಗೆ ಹಾಗೂ ವಿಚ್ಛೇದನ ಬಯಸಿ ಬರುವವರಿಗೆ ಈ ದೇವಾಲಯವು ಸುರಕ್ಷಿತ ಆಶ್ರಯ ಮತ್ತು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಎಲ್ಲಿದೆ ಈ ‘ಡಿವೋರ್ಸ್ ಟೆಂಪಲ್’? ಉಗಮಕ್ಕೆ ಕಾರಣವೇನು?

ಜಪಾನ್‌ನ ಕಾಮಕುರಾ ನಗರದಲ್ಲಿ ನೆಲೆಗೊಂಡಿರುವ ಈ ವಿಶಿಷ್ಟ ದೇವಾಲಯಕ್ಕೆ ಸುಮಾರು 700 ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ದೇವಾಲಯವನ್ನು ಬೌದ್ಧ ಸನ್ಯಾಸಿನಿ ಕಾಕುಸನ್ ಶಿಡೊ ನಿರ್ಮಿಸಿದರು. 12 ಮತ್ತು 13ನೇ ಶತಮಾನದ ಜಪಾನೀಸ್ ಸಮಾಜದಲ್ಲಿ ವಿಚ್ಛೇದನ ನೀಡುವ ಹಕ್ಕು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಮಹಿಳೆಯರಿಗೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವ ಸ್ವತಂತ್ರವಿರಲಿಲ್ಲ. ಸ್ವತಃ ಕಾಕುಸನ್ ಅವರೇ ಗಂಡನ ಕಿರುಕುಳಕ್ಕೆ ಒಳಗಾಗಿ, ಬಳಿಕ ಸನ್ಯಾಸ ದೀಕ್ಷೆ ಪಡೆದು ತಮ್ಮಂತೆ ಗೃಹಹಿಂಸೆಗೆ ಒಳಗಾದ ಮಹಿಳೆಯರ ಸಬಲೀಕರಣಕ್ಕಾಗಿ ಈ ದೇವಾಲಯವನ್ನು ಆರಂಭಿಸಿದರು.

ಕೌಟುಂಬಿಕ ಹಿಂಸಾಚಾರದಿಂದ ಬಳಲುತ್ತಿದ್ದ ಮಹಿಳೆಯರಿಗೆ ಆಶಾ ಕಿರಣ:

ಆ ಕಾಲದಲ್ಲಿ ಪುರುಷರು ಕ್ಷುಲ್ಲಕ ಕಾರಣಗಳಿಗಾಗಿ ಹೆಂಡತಿಗೆ ಸುಲಭವಾಗಿ ವಿಚ್ಛೇದನ ನೀಡುತ್ತಿದ್ದರು. ಆದರೆ ದೌರ್ಜನ್ಯ ಎದುರಿಸುತ್ತಿದ್ದ ಮಹಿಳೆಯರಿಗೆ ಗಂಡನಿಂದ ಬೇರ್ಪಡುವ ಅವಕಾಶವಿರಲಿಲ್ಲ. ಅಂತಹ ಸಂದರ್ಭದಲ್ಲಿ ಗಂಡನ ಕ್ರೌರ್ಯದಿಂದ ಓಡಿಬರುವ ಪ್ರತಿಯೊಬ್ಬ ಮಹಿಳೆಗೆ ಈ ದೇವಾಲಯದ ಬಾಗಿಲುಗಳು ಸದಾ ತೆರೆದಿರುತ್ತಿದ್ದವು. ಇಲ್ಲಿಗೆ ಬರುವ ಮಹಿಳೆಯರಿಗೆ ದೈಹಿಕ ರಕ್ಷಣೆಯಷ್ಟೇ ಅಲ್ಲದೆ, ಆಧ್ಯಾತ್ಮಿಕ ಶಾಂತಿ, ಮಾನಸಿಕ ನೆಮ್ಮದಿ ಹಾಗೂ ಸ್ವಾವಲಂಬಿಗಳಾಗುವ ತರಬೇತಿಯನ್ನು ನೀಡಲಾಗುತ್ತಿತ್ತು.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ಕಾನೂನುಬದ್ಧ ವಿಚ್ಛೇದನ ಹಕ್ಕು ಮತ್ತು ನಿಯಮಾವಳಿಗಳು:

ಈ ದೇವಾಲಯವು ಕೇವಲ ಆಶ್ರಯತಾಣವಾಗಿರದೆ, ಮಹಿಳೆಯರಿಗೆ ಕಾನೂನುಬದ್ಧವಾಗಿ ವಿಚ್ಛೇದನ ಪತ್ರವನ್ನು ನೀಡುವ ಅಧಿಕಾರವನ್ನೂ ಹೊಂದಿತ್ತು. ಆರಂಭದಲ್ಲಿ ಈ ದೇವಾಲಯಕ್ಕೆ ಬಂದು ನೆಲೆಸಿದ ಮಹಿಳೆಯರು 3 ವರ್ಷಗಳ ಕಾಲ ಇಲ್ಲಿದ್ದು ನಂತರ ಗಂಡನಿಂದ ಸಂಪೂರ್ಣ ಬಂಧನಮುಕ್ತಿ (ವಿಚ್ಛೇದನ) ಪಡೆಯಬಹುದಾಗಿತ್ತು. ಕಾಲಾನಂತರದಲ್ಲಿ ಈ ಅವಧಿಯನ್ನು 2 ವರ್ಷಗಳಿಗೆ ಇಳಿಸಲಾಯಿತು.

ಪುರುಷರ ಪ್ರವೇಶ ನಿಷೇಧ ಮತ್ತು ತದನಂತರದ ಬದಲಾವಣೆಗಳು:

ಮಹಿಳೆಯರ ಸಂಪೂರ್ಣ ಸುರಕ್ಷತೆಯ ದೃಷ್ಟಿಯಿಂದ 1902 ರವರೆಗೆ ಈ ದೇವಾಲಯಕ್ಕೆ ಪುರುಷರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಆದರೆ ಬಳಿಕ ‘ಎಂಗಾಕು-ಜಿ’ ಮಠವು ಈ ದೇವಾಲಯದ ಆಡಳಿತ ಮತ್ತು ಉಸ್ತುವಾರಿಯನ್ನು ವಹಿಸಿಕೊಂಡ ನಂತರ ನಿಯಮಗಳು ಬದಲಾದವು. ಆ ಬಳಿಕ ದೇವಾಲಯಕ್ಕೆ ಪುರುಷ ಮಠಾಧೀಶರನ್ನು ನೇಮಿಸಲಾಯಿತು. ಇಂದಿಗೂ ಈ ದೇವಾಲಯವು ದೌರ್ಜನ್ಯದ ವಿರುದ್ಧ ಹೋರಾಡುವ ಪ್ರತಿಯೊಬ್ಬ ಮಹಿಳೆಗೆ ಸ್ಫೂರ್ತಿಯ ಸಂಕೇತವಾಗಿ ನಿಂತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:58 pm, Sun, 13 September 26

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ