AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿಯ ಹಿಂದಿನ ನೈಜ ರಹಸ್ಯವೇನು? ಸದ್ಗುರು ಹಂಚಿಕೊಂಡ ಆಸಕ್ತಿಕರ ಸಂಗತಿಗಳು!

ಸದ್ಗುರು ಅವರ ಪ್ರಕಾರ, ನವರಾತ್ರಿಯು ಕೇವಲ ಸಂಭ್ರಮಾಚರಣೆಯಲ್ಲ, ಬದಲಾಗಿ ಆಂತರಿಕ ಪರಿವರ್ತನೆಗೆ ಅದ್ಭುತ ಅವಕಾಶ. ತಾಮಸ, ರಜೋಗುಣ ಮತ್ತು ಸತ್ತ್ವ ಗುಣಗಳ ಆಳವಾದ ತಿಳುವಳಿಕೆಯ ಮೂಲಕ ಪ್ರತಿ ವ್ಯಕ್ತಿಯೂ ತನ್ನನ್ನು ತಾನೇ ವಿಕಸಿತಗೊಳಿಸಿಕೊಳ್ಳಬಹುದು. ಈ ಒಂಬತ್ತು ರಾತ್ರಿಗಳು ಆಧ್ಯಾತ್ಮಿಕ ಜಾಗೃತಿ ಮತ್ತು ಪ್ರಜ್ಞಾಪೂರ್ವಕ ಜೀವನಕ್ಕೆ ದಾರಿ ತೋರುತ್ತವೆ. ವಿಜಯದಶಮಿಯು ಈ ಗುಣಗಳನ್ನು ಮೀರಿ ಜೀವನದಲ್ಲಿ ಸಫಲತೆ ಕಾಣುವ ದಿನವಾಗಿದೆ.

ನವರಾತ್ರಿಯ ಹಿಂದಿನ ನೈಜ ರಹಸ್ಯವೇನು? ಸದ್ಗುರು ಹಂಚಿಕೊಂಡ ಆಸಕ್ತಿಕರ ಸಂಗತಿಗಳು!
ನವರಾತ್ರಿ ಮತ್ತು ಆತ್ಮಾವಲೋಕನImage Credit source: Getty Images
ಅಕ್ಷತಾ ವರ್ಕಾಡಿ
|

Updated on:Oct 03, 2026 | 11:44 AM

Share

ನವರಾತ್ರಿ ಎಂದ ತಕ್ಷಣ ಎಲ್ಲರ ನೆನಪಿಗೆ ಬರುವುದು ಸಂಗೀತ, ಉಪವಾಸ ಮತ್ತು ಸಂಭ್ರಮಾಚರಣೆ. ಆದರೆ ಇಶಾ ಫೌಂಡೇಶನ್‌ನ ಸದ್ಗುರು ಅವರ ಪ್ರಕಾರ, ನವರಾತ್ರಿ ಎನ್ನುವುದು ಕೇವಲ ಆಚರಣೆಗಷ್ಟೇ ಸೀಮಿತವಾಗಿರದೆ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆಂತರಿಕ ಬೆಳವಣಿಗೆ ಮತ್ತು ಬದಲಾವಣೆಯನ್ನು (Transformation) ಕಂಡುಕೊಳ್ಳಲು ಸಿಗುವ ಉತ್ತಮ ಅವಕಾಶವಾಗಿದೆ. ಸದ್ಗುರು ಅವರು ನವರಾತ್ರಿಯ ಒಂಬತ್ತು ರಾತ್ರಿಗಳನ್ನು ಮಾನವ ಸ್ವಭಾವದ ಮೂರು ಮುಖ್ಯ ಗುಣಗಳಾದ ತಾಮಸಗುಣ, ರಜೋಗುಣ ಮತ್ತು ಸತ್ತ್ವ ಗುಣಗಳಿಗೆ ವಿಂಗಡಿಸಿ ವಿವರಿಸುತ್ತಾರೆ.

ಮೊದಲ 3 ದಿನಗಳು (ತಾಮಸ ಗುಣ – ದುರ್ಗೆ ಮತ್ತು ಕಾಳಿ):

ಈ ದಿನಗಳು ಪೃಥ್ವಿ (ಭೂಮಿ), ಜನನ ಮತ್ತು ಮೌನಕ್ಕೆ ಸಂಬಂಧಿಸಿದ್ದು. ನಮ್ಮ ದೇಹವು ತಾತ್ಕಾಲಿಕ ಎಂಬ ಸತ್ಯವನ್ನು ಅರಿತು, ಆಧ್ಯಾತ್ಮಿಕ ಚಿಂತನೆಯತ್ತ ಗಮನ ಹರಿಸಲು ಈ ದಿನಗಳು ಸೂಕ್ತ.

ನಡುವಿನ 3 ದಿನಗಳು (ರಜೋಗುಣ – ಲಕ್ಷ್ಮಿ):

ರಜೋಗುಣವು ಮನುಷ್ಯನನ್ನು ಕರ್ಮ ಅಥವಾ ಕ್ರಿಯೆಯತ್ತ ಪ್ರೇರೇಪಿಸುತ್ತದೆ. ನಾವು ಮಾಡುವ ಕೆಲಸಗಳನ್ನು ಎಷ್ಟು ಅರಿವಿನಿಂದ (Consciousness) ಮಾಡುತ್ತಿದ್ದೇವೆ ಎಂಬುದನ್ನು ಪರಿಶೀಲಿಸಲು ಈ ದಿನಗಳು ನೆರವಾಗುತ್ತವೆ.

ಕೊನೆಯ 3 ದಿನಗಳು (ಸತ್ವಗುಣ – ಸರಸ್ವತಿ):

ಈ ಅವಧಿಯು ಜ್ಞಾನ, ಬೆಳಕು ಮತ್ತು ಜಾಗೃತಿಯ ಸಂಕೇತ. ಸತ್ವಗುಣವು ವ್ಯಕ್ತಿಯನ್ನು ಉನ್ನತ ಜ್ಞಾನದತ್ತ ಕೊಂಡೊಯ್ಯುತ್ತದೆ.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?

ವಿಜಯದಶಮಿಯ ನಿಜವಾದ ಅರ್ಥ:

ಒಂಬತ್ತು ರಾತ್ರಿಗಳ ನಂತರ ಬರುವ 10ನೇ ದಿನವೇ ವಿಜಯದಶಮಿ. ಸದ್ಗುರು ಅವರ ಪ್ರಕಾರ, ವಿಜಯದಶಮಿ ಎಂದರೆ ಕೇವಲ ಸಂಪತ್ತು, ಅಧಿಕಾರ ಅಥವಾ ಜ್ಞಾನವನ್ನು ಗಳಿಸುವುದಷ್ಟೇ ಅಲ್ಲ, ಬದಲಿಗೆ ಈ ಮೂರೂ ಗುಣಗಳನ್ನು ದಾಟಿ (Transcending Limitations) ಮುನ್ನಡೆಯುವುದು ಮತ್ತು ಜೀವನದಲ್ಲಿ ಸಫಲತೆಯನ್ನು ಸಾಧಿಸುವುದು. ನವರಾತ್ರಿಯು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನವನ್ನು ಎಷ್ಟು ಜಾಗರೂಕತೆಯಿಂದ ಮತ್ತು ಶ್ರದ್ಧೆಯಿಂದ ಅನುಭವಿಸುತ್ತಿದ್ದಾರೆ ಎಂಬುದನ್ನು ನೆನಪಿಸುವ ಸುಂದರ ಪಯಣವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:42 am, Sat, 3 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು