AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ, ದೀಪಾವಳಿ ಹಿನ್ನೆಲೆ ಬೆಂಗಳೂರಿನಿಂದ ಮುಂಬೈ, ವಿಶಾಖಪಟ್ಟಣಂ ನಡುವೆ ವಿಶೇಷ ರೈಲುಗಳ ಸಂಚಾರ

ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಬೆಂಗಳೂರಿನಿಂದ ಮುಂಬೈ ಹಾಗೂ ವಿಶಾಖಪಟ್ಟಣಂ ನಗರಗಳಿಗೆ ವಿಶೇಷ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ. ಮುಂಬೈ–ಬೆಂಗಳೂರು ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ತಲಾ 7 ಟ್ರಿಪ್‌ಗಳನ್ನು ನಡೆಸಲಿವೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನವರಾತ್ರಿ, ದೀಪಾವಳಿ ಹಿನ್ನೆಲೆ ಬೆಂಗಳೂರಿನಿಂದ ಮುಂಬೈ, ವಿಶಾಖಪಟ್ಟಣಂ ನಡುವೆ ವಿಶೇಷ ರೈಲುಗಳ ಸಂಚಾರ
ಸಾಂದರ್ಭಿಕ ಚಿತ್ರImage Credit source: PTI
ಪ್ರಸನ್ನ ಹೆಗಡೆ
|

Updated on:Sep 26, 2026 | 9:16 AM

Share

ಬೆಂಗಳೂರು, ಸೆಪ್ಟೆಂಬರ್​​ 26: ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಬೆಂಗಳೂರು–ಮುಂಬೈ ಹಾಗೂ ಬೆಂಗಳೂರು–ವಿಶಾಖಪಟ್ಟಣಂ ನಡುವೆ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ. ಈ ಸಮಯದಲ್ಲಿ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದನ್ನು ಮನಗಂಡು, ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳು ಸಂಚರಸಿಲಿವೆ ಎಂದು ತಿಳಿಸಲಾಗಿದೆ.

ಬೆಂಗಳೂರು-ಮುಂಬೈ ವಿಶೇಷ ರೈಲು

ರೈಲು ಸಂಖ್ಯೆ 01013 CSMT ಮುಂಬೈ–SMVT ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 10ರಿಂದ ನವೆಂಬರ್ 21ರವರೆಗೆ ಪ್ರತಿ ಶನಿವಾರ ರಾತ್ರಿ 12.35ಕ್ಕೆ CSMT ಮುಂಬೈನಿಂದ ಹೊರಟು, ಅದೇ ದಿನ ರಾತ್ರಿ 11.55ಕ್ಕೆ SMVT ಬೆಂಗಳೂರಿಗೆ ತಲುಪಲಿದೆ. ಹಾಗೆಯೇ, ರೈಲು ಸಂಖ್ಯೆ 01014 SMVT ಬೆಂಗಳೂರು–CSMT ಮುಂಬೈ ವಿಶೇಷ ರೈಲು ಅಕ್ಟೋಬರ್ 11ರಿಂದ ನವೆಂಬರ್ 22ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 4.30ಕ್ಕೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 4.05ಕ್ಕೆ CSMT ಮುಂಬೈ ತಲುಪಲಿದೆ.

LIVE TV

ಇದನ್ನೂ ಓದಿ: 2026ರ ಒಂಬತ್ತು ತಿಂಗಳ ಭಾರತದ ಟೆಕ್ ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇ.43ಕ್ಕೆ ಏರಿಕೆ

ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ತಲಾ 7 ಟ್ರಿಪ್‌ಗಳನ್ನು ನಡೆಸಲಿವೆ. ಎರಡೂ ಮಾರ್ಗಗಳಲ್ಲಿ ದಾದರ್, ಥಾಣೆ, ಕಲ್ಯಾಣ್, ಲೋಣಾವಳ, ಪುಣೆ, ಲೋಣಂದ್, ಸತಾರಾ, ಕರಾಡ್, ಸಾಂಗ್ಲಿ, ಮೀರಜ್, ಕುಡಚಿ, ರಾಯಬಾಗ್, ಘಟಪ್ರಭಾ, ಬೆಳಗಾವಿ, ಲೋಂಡಾ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಹಾಗೂ ತುಮಕೂರು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ. ಈ ವಿಶೇಷ ರೈಲು ಒಟ್ಟು 22 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 2 ಎಸಿ 2-ಟೈರ್ ಬೋಗಿಗಳು, 18 ಎಸಿ 3-ಟೈರ್ ಬೋಗಿಗಳು ಹಾಗೂ 2 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ವ್ಯಾನ್ ಬೋಗಿಗಳು ಇರಲಿವೆ.

ಬೆಂಗಳೂರು-ವಿಶಾಖಪಟ್ಟಣಂ ರೈಲು

ರೈಲು ಸಂಖ್ಯೆ 08583 ಪ್ರತಿ ಮಂಗಳವಾರ ಅಕ್ಟೋಬರ್ 6ರಿಂದ ನವೆಂಬರ್ 24ರವರೆಗೆ ಸಂಜೆ 7 ಗಂಟೆಗೆ ವಿಶಾಖಪಟ್ಟಣಂನಿಂದ ಹೊರಟು, ಮರುದಿನ ಮಧ್ಯಾಹ್ನ 12.45ಕ್ಕೆ SMVT ಬೆಂಗಳೂರಿಗೆ ತಲುಪಲಿದೆ. ಹಾಗೆಯೇ, ರೈಲು ಸಂಖ್ಯೆ 08584 ಪ್ರತಿ ಬುಧವಾರ ಅಕ್ಟೋಬರ್ 7ರಿಂದ ನವೆಂಬರ್ 25ರವರೆಗೆ ಮಧ್ಯಾಹ್ನ 3.50ಕ್ಕೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 1.30ಕ್ಕೆ ವಿಶಾಖಪಟ್ಟಣಂ ತಲುಪಲಿದೆ. ಈ ರೈಲುಗಳು ದುರ್ವಾಡ, ಅನಕಾಪಲ್ಲಿ, ಸಮಲ್ಕೋಟ್, ರಾಜಮಂಡ್ರಿ, ಏಲೂರು, ವಿಜಯವಾಡ, ಒಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟ, ಕಟ್ಪಾಡಿ, ಜೋಲಾರ್‌ಪೇಟೆ, ಬಂಗಾರಪೇಟೆ ಹಾಗೂ ಕೆಆರ್ ಪುರಂ ಮಾರ್ಗವಾಗಿ ಸಂಚರಿಸಲಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:15 am, Sat, 26 September 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More