AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026ರ ಒಂಬತ್ತು ತಿಂಗಳ ಭಾರತದ ಟೆಕ್ ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇ.43ಕ್ಕೆ ಏರಿಕೆ

2026ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತದ ಒಟ್ಟು ಟೆಕ್ ಹೂಡಿಕೆಯಲ್ಲಿ ಬೆಂಗಳೂರು ಶೇ.43ರಷ್ಟು (4.4 ಬಿಲಿಯನ್ ಡಾಲರ್‌) ಪಾಲು ಪಡೆದು ಅಗ್ರಸ್ಥಾನದಲ್ಲಿದ್ದು, ದೇಶದ ಪ್ರಮುಖ ಟೆಕ್ ಹಬ್ ಆಗಿ ಮುಂದುವರಿದಿದೆ. ಮುಂಬೈ 1.8 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಶೇ.18ರಷ್ಟು ಪಾಲು ಪಡೆದು ಎರಡನೇ ಸ್ಥಾನದಲ್ಲಿದೆ. ಗುರುಗ್ರಾಮ್‌ನ ಪಾಲು ಕಳೆದ ವರ್ಷಕ್ಕಿಂತ ದ್ವಿಗುಣಗೊಂಡು ಶೇ.16ಕ್ಕೆ ಏರಿದ್ದು, ಒಟ್ಟು 1.6 ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ.

2026ರ ಒಂಬತ್ತು ತಿಂಗಳ ಭಾರತದ ಟೆಕ್ ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇ.43ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Sep 26, 2026 | 7:23 AM

Share

ಬೆಂಗಳೂರು, ಸೆಪ್ಟೆಂಬರ್​​ 26: 2026ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತದ ಟೆಕ್ ಕ್ಷೇತ್ರದ ಹೂಡಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಒಟ್ಟು ಬಂಡವಾಳದ ಶೇ.43ರಷ್ಟು ಅಂದರೆ 4.4 ಬಿಲಿಯನ್ ಡಾಲರ್‌ ಹೂಡಿಕೆಯನ್ನು ಆಕರ್ಷಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬೆಂಗಳೂರಿನ ಪಾಲು ಶೇ.38ರಷ್ಟಿತ್ತು. ಒಟ್ಟಾರೆ ಟೆಕ್ ಹೂಡಿಕೆ ಶೇ.7ರಷ್ಟು ಏರಿಕೆಯಾಗಿದ್ದು, 10.3 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಡಿಮೆ ಸಂಖ್ಯೆಯ, ಆದರೆ ದೊಡ್ಡ ಮೊತ್ತದ ಹೂಡಿಕೆಗಳಿಂದ ಈ ಏರಿಕೆ ಕಂಡುಬಂದಿದೆ ಎಂದು ಟ್ರ್ಯಾಕ್ಸನ್ಸ್​ ಇಂಡಿಯಾ ಟೆಕ್​​ 9M 2026 ವರದಿ ತಿಳಿಸಿದೆ.

ಎರಡನೇ ಸ್ಥಾನ ಪಡೆದಿರುವ ಮುಂಬೈ

ಕ್ರೆಡ್​​ನ 540 ಮಿಲಿಯನ್ ಡಾಲರ್ ಮೊತ್ತದ ಸಿರೀಸ್​​ ಹೆಚ್​​ ಸುತ್ತಿನ ಹೂಡಿಕೆ, ರ್ಯಾಪಿಡೋದ 240 ಮಿಲಿಯನ್ ಡಾಲರ್ ಹೂಡಿಕೆ ಹಾಗೂ ಸರ್ವಂನ 234 ಮಿಲಿಯನ್ ಡಾಲರ್ ನಿಧಿ ಸಂಗ್ರಹ ಬೆಂಗಳೂರಿನ ಟೆಕ್ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿವೆ. ಮುಂಬೈ 1.8 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಶೇ.18ರಷ್ಟು ಪಾಲು ಪಡೆದು ಎರಡನೇ ಸ್ಥಾನದಲ್ಲಿದೆ. ಗುರುಗ್ರಾಮ್‌ನ ಪಾಲು ಕಳೆದ ವರ್ಷಕ್ಕಿಂತ ದ್ವಿಗುಣಗೊಂಡು ಶೇ.16ಕ್ಕೆ ಏರಿದ್ದು, ಒಟ್ಟು 1.6 ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ. ಇದರಲ್ಲಿ ಬಹುತೇಕ ಭಾಗ ನೆಕ್ಸ್ಟ್ರಾ ಸಂಸ್ಥೆಯ ಡೇಟಾ ಸೆಂಟರ್ ವಿಸ್ತರಣೆಗಾಗಿ ನಡೆದ 1 ಬಿಲಿಯನ್ ಡಾಲರ್ ಖಾಸಗಿ ಈಕ್ವಿಟಿ ಹೂಡಿಕೆಯಿಂದ ಬಂದಿದೆ. ನೋಯ್ಡಾ ಮತ್ತು ದೆಹಲಿ ಕ್ರಮವಾಗಿ 660 ಮಿಲಿಯನ್ ಡಾಲರ್ ಮತ್ತು 446 ಮಿಲಿಯನ್ ಡಾಲರ್ ಹೂಡಿಕೆ ಪಡೆದಿವೆ.

LIVE TV

ಇದನ್ನೂ ಓದಿ: ‘ಮೇಕ್ ಇನ್ ಇಂಡಿಯಾ’ಗೆ 12 ವರ್ಷ: ಮ್ಯಾನುಫ್ಯಾಕ್ಚರಿಂಗ್ ಪ್ರಯಾಣದಲ್ಲಿ ಭಾರತ ಕಂಡ ಯಶಸ್ಸು, ಭವಿಷ್ಯದ ಕನಸು

ಜನವರಿ 1ರಿಂದ ಸೆಪ್ಟೆಂಬರ್ 21ರವರೆಗೆ ಭಾರತೀಯ ಟೆಕ್ ಸ್ಟಾರ್ಟ್‌ಅಪ್‌ಗಳು ಒಟ್ಟು 10.3 ಬಿಲಿಯನ್ ಡಾಲರ್ ಸಂಗ್ರಹಿಸಿವೆ. 2025ರ ಇದೇ ಅವಧಿಯಲ್ಲಿ 9.7 ಬಿಲಿಯನ್ ಡಾಲರ್ ಮತ್ತು 2024ರಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಬಂದಿತ್ತು. ಆದರೆ ಈ ಏರಿಕೆಯ ನಡುವೆಯೇ ಒಪ್ಪಂದಗಳ ಸಂಖ್ಯೆಯಲ್ಲಿ ಶೇ.38ರಷ್ಟು ಕುಸಿತ ಕಂಡುಬಂದಿದೆ. 2025ರ 1,838 ಡೀಲ್‌ಗಳಿಗೆ ಹೋಲಿಸಿದರೆ 2026ರಲ್ಲಿ 1,134 ಸುತ್ತಿನ ಹೂಡಿಕೆಗಳು ನಡೆದಿವೆ. ಮೊದಲ ಬಾರಿಗೆ ಹೂಡಿಕೆ ಪಡೆದ ಕಂಪನಿಗಳ ಸಂಖ್ಯೆ ಶೇ.30ರಷ್ಟು ಕುಸಿದು 338ಕ್ಕೆ ತಲುಪಿದೆ. ಹೊಸ ಸೂನಿಕಾರ್ನ್ ಕಂಪನಿಗಳ ಸೇರ್ಪಡೆಯೂ ಶೇ.53ರಷ್ಟು ಇಳಿಕೆಯಾಗಿದೆ. ಇದು ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಿಗೆ ಎದುರಾಗಿರುವ ಒತ್ತಡವನ್ನು ಸೂಚಿಸುತ್ತದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More