Video: ಮೊದಲ ಸಂಬಳದಲ್ಲಿ ಅಪ್ಪನಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಗಿಫ್ಟ್ ಕೊಟ್ಟ ಮಗಳು
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಮಗಳೊಬ್ಬಳು ತಂದೆಗೆ ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾಳೆ. ರಾಯಲ್ ಎನ್ ಫೀಲ್ಡ್ ಬೈಕ್ ನ ಕೀ ತಂದೆಯ ಕೈಗೆ ಇಟ್ಟು ಆತನ ಮೊಗದಲ್ಲಿ ನಗು ಮೂಡಿಸಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಹೆಣ್ಣು ಮಕ್ಕಳಿಗೆ ಅಪ್ಪನೇ (father) ಪ್ರಪಂಚ. ತನ್ನ ಖುಷಿಗಾಗಿ ಹಗಲಿರುಳು ಶ್ರಮಿಸುವ ತಂದೆ ಮೊಗದಲ್ಲಿ ನಗು ಮೂಡಿಸುವುದು ಮಗಳ ಕನಸು. ಇದೀಗ ಮಗಳು ಅಪ್ಪನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾಳೆ. ಅಪ್ಪ ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತನ್ನ ಮೊದಲ ಸಂಬಳದ ಹಣದಲ್ಲಿ ತಂದೆಗೆ ಉಡುಗೊರೆ ನೀಡಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಂತಹ ಮಗಳನ್ನು ಪಡೆದ ನೀವೇ ಧನ್ಯರು ಎಂದು ಪ್ರತಿಕ್ರಿಯಿಸಿದ್ದಾರೆ.
ತಂದೆಗೆ ಮೊದಲ ಸಂಬಳದಲ್ಲಿ ಬೈಕ್ ಗಿಫ್ಟ್ ಕೊಟ್ಟ ಮಗಳು
ಮಾಂಡವಿ ಶರ್ಮಾ (@mndavi_shrma) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ಕ್ಲಿಪಿಂಗ್ ಗೆ ನನ್ನ ತಂದೆ ತಮ್ಮ ಇಡೀ ಜೀವನವನ್ನು ನನಗೆ ಎಲ್ಲವನ್ನೂ ನೀಡಲು ಕಳೆದರು. ಇಂದು, ನನ್ನ ಮೊದಲ ಸಂಬಳದಲ್ಲಿ ಅವರಿಗೆ ಏನನ್ನಾದರೂ ನೀಡಲು ನನಗೆ ಅವಕಾಶ ಸಿಕ್ಕಿತು ಎಂದು ಬರೆದಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಸರ್ಪ್ರೈಸ್ ಗಿಫ್ಟ್ ನೋಡಿ ತಂದೆಯ ಮೊಗದಲ್ಲಿ ಮೂಡಿತು ನಗು
ಈ ವಿಡಿಯೋದಲ್ಲಿ ಒಂದು ರೂಮ್ ನ ನೋಟವನ್ನು ಕಾಣಬಹುದು. ವ್ಯಕ್ತಿಯೊಬ್ಬ ಪೇಪರ್ ಸುತ್ತಿದ್ದನ್ನು ಬಿಡಿಸುತ್ತಾ ಇದ್ದಾನೆ. ಇತ್ತ ಮಗಳು ಆತನನ್ನು ನೋಡಿ ನಗುತ್ತಿದ್ದಾಳೆ. ಆದರೆ ಆ ಪೇಪರ್ ಒಳಗೆ ಇದ್ದದ್ದು ಬೈಕ್ ಕೀ. ಮಗಳು ಕೊಟ್ಟ ಉಡುಗೊರೆ ನೋಡಿ ಆತನ ಮುಖ ಅರಳುತ್ತದೆ. ಹೌದು, ಮಗಳು ತನ್ನ ತಂದೆಗೆ ರಾಯಲ್ ಎನ್‌ಫೀಲ್ಡ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾಳೆ. ವಿಡಿಯೋ ಎರಡನೇ ಭಾಗದಲ್ಲಿ ತಂದೆ ಮಗಳು ಇಬ್ಬರೂ ಬುಲೆಟ್‌ನೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ಮನೆ ಮಂದಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಈ ದಿನದ ಬೆಸ್ಟ್ ವಿಡಿಯೋ ಎಂದರೆ, ಮತ್ತೊಬ್ಬರು, ಅಪ್ಪನ ಮೊಗದಲ್ಲಿ ನಗು ಮೂಡಿಸಿದ್ದಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ವ್ಯಕ್ತಿ ಬಹಳ ಹೆಮ್ಮೆಯಿಂದ ತನ್ನ ಫ್ಯಾಮಿಲಿ ಹಾಗೂ ಸ್ನೇಹಿತರಿಗೆ ಈ ವಿಷ್ಯ ಹೇಳಿ ಕೊಳ್ಳುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




