AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!

ಡಾರ್ವಿನ್‌ನ ಮಾರ್ಕಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಈ ಹೀನಾಯ ಸೋಲಿಗೆ ಮುಖ್ಯ ಕಾರಣ 22 ವರ್ಷದ ಯುವ ಎಡಗೈ ವೇಗಿ ಕ್ಯಾಂಪ್​ಬೆಲ್ ಥಾಂಪ್ಸನ್. ಈ ಭರ್ಜರಿ ಪ್ರದರ್ಶನದೊಂದಿಗೆ ಕ್ಯಾಂಪ್​ಬೆಲ್ ಥಾಂಪ್ಸನ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಬರೋಬ್ಬರಿ 8 ವಿಕೆಟ್​... ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!
Campbell ThompsonImage Credit source: CA
ಝಾಹಿರ್ ಯೂಸುಫ್
|

Updated on: Aug 09, 2026 | 9:20 AM

Share

ಬಾಂಗ್ಲಾದೇಶ್ ಕ್ರಿಕೆಟ್ ತಂಡಕ್ಕೆ ಆಸ್ಟ್ರೇಲಿಯಾದ ಯುವ ವೇಗಿಯೊಬ್ಬ ಅಕ್ಷರಶಃ ನಡುಕ ಹುಟ್ಟಿಸಿದ್ದಾನೆ. ಕೇವಲ 22 ವರ್ಷದ ಆಸ್ಟ್ರೇಲಿಯಾದ ಯುವ ಎಡಗೈ ವೇಗದ ಬೌಲರ್ ಕ್ಯಾಂಪ್​ಬೆಲ್ ಥಾಂಪ್ಸನ್, ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಬರೋಬ್ಬರಿ 8 ವಿಕೆಟ್ ಕಬಳಿಸಿದ್ದಾರೆ. ಇವರ ಈ ಕರಾರುವಾಕ್ ದಾಳಿಗೆ ಧೂಳೀಪಟವಾದ ಬಾಂಗ್ಲಾದೇಶ್, ತನ್ನ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 54 ರನ್‌ಗಳಿಗೆ ಆಲೌಟ್ ಆಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಡಾರ್ವಿನ್‌ನ ಮರಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕ್ಯಾಂಪ್​ಬೆಲ್ ಥಾಂಪ್ಸನ್ ಮಿಂಚಿನ ದಾಳಿ ಸಂಘಟಿಸಿದ್ದಾರೆ. ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯವಾಡುತ್ತಿರುವ ಸೌತ್ ಆಸ್ಟ್ರೇಲಿಯಾದ ಈ ಯುವ ಪ್ರತಿಭೆ, ಇಡೀ ಬಾಂಗ್ಲಾ ಬ್ಯಾಟಿಂಗ್ ಲೈನಪ್ ಅನ್ನು ಧ್ವಂಸಗೊಳಿಸಿದರು. ಥಾಂಪ್ಸನ್ ಕೇವಲ 25 ರನ್ ನೀಡಿ 8 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಹೀರೊ ಆಗಿ ಹೊರಹೊಮ್ಮಿದ್ದಾರೆ.

ಪಂದ್ಯದ ವಿವರ:

ಮೊದಲ ಇನಿಂಗ್ಸ್‌ನಲ್ಲಿ ಮೆಹಿದಿ ಹಸನ್ ಮಿರಾಝ್ ಅವರ ಶತಕದ (109*) ನೆರವಿನಿಂದ ಬಾಂಗ್ಲಾದೇಶ್ ತಂಡ 263 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್, ಟೇಗ್ ವೈಲಿ ಅವರ ಅದ್ಭುತ 130 ರನ್‌ಗಳ ನೆರವಿನಿಂದ 355 ರನ್ ಕಲೆಹಾಕಿ 92 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಇದನ್ನೂ ಓದಿ: ಸದಾ ‘ಗಂಭೀರ’ವಾಗಿರುವ ಗಂಭೀರ್‌ಗೆ ನಗು ತರಿಸಿದ ಜಡೇಜಾ!

92 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಕ್ಯಾಂಪ್​ಬೆಲ್ ಥಾಂಪ್ಸನ್ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಬಾಂಗ್ಲಾ ಪಡೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 54 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ತಂಡವು ಇನಿಂಗ್ಸ್ ಹಾಗೂ 38 ರನ್​ಗಳ ಭರ್ಜರಿ ಜಯ ದಾಖಲಿಸಿತು. ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 25 ರನ್ ನೀಡಿ 8 ವಿಕೆಟ್​ ಕಬಳಿಸುವ ಕ್ಯಾಂಪ್​ಬೆಲ್ ಥಾಂಪ್ಸನ್ ಭರ್ಜರಿ ಗೆಲುವಿನ ರೂವಾರಿ ಎನಿಸಿಕೊಂಡರು.

ಟೆಸ್ಟ್ ಸರಣಿಗೂ ಮುನ್ನ ಎಚ್ಚರಿಕೆ:

ಆಗಸ್ಟ್ 13 ರಿಂದ ಡಾರ್ವಿನ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅಲ್ಲಿ ಬಾಂಗ್ಲಾದೇಶ್ ತಂಡವು ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್​ ಅವರಂತಹ ವಿಶ್ವದ ನಂಬರ್ ಒನ್ ವೇಗಿಗಳನ್ನು ಎದುರಿಸಬೇಕಾಗಿದೆ. ಅದಕ್ಕೂ ಮುನ್ನ ಕೇವಲ 22 ವರ್ಷದ ಯುವ ಆಟಗಾರನ ಎದುರೇ 54 ರನ್‌ಗಳಿಗೆ ಧೂಳೀಪಟವಾಗಿರುವುದ ಬಾಂಗ್ಲಾದೇಶ್ ತಂಡಕ್ಕೆ ತೀವ್ರ ಆತಂಕವನ್ನುಂಟು ಮಾಡಿದೆ.

Follow Us
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ
ಕೆಪಿಎಸ್​ಸಿ ಅಕ್ರಮ ನೇಮಕಾತಿ ಕೇಸ್ ತನಿಖೆ ಎಸ್​ಐಟಿ ಹೆಗಲಿಗೆ!
ಕೆಪಿಎಸ್​ಸಿ ಅಕ್ರಮ ನೇಮಕಾತಿ ಕೇಸ್ ತನಿಖೆ ಎಸ್​ಐಟಿ ಹೆಗಲಿಗೆ!
ಮಹಿಳಾ PSI ಮೇಲೆ ಹಲ್ಲೆ ಪ್ರಕರಣ: ಕ್ಷಮೆ ಕೇಳಿದ ಶಾಸಕ ಸುರೇಶ್​ ಗೌಡ ಪುತ್ರಿ
ಮಹಿಳಾ PSI ಮೇಲೆ ಹಲ್ಲೆ ಪ್ರಕರಣ: ಕ್ಷಮೆ ಕೇಳಿದ ಶಾಸಕ ಸುರೇಶ್​ ಗೌಡ ಪುತ್ರಿ