AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ ರೆಡಿ!

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ಮುಂದಿನ ವರ್ಷ ಜನವರಿ 21 ರಿಂದ ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಗಾಗಿ ಆಸ್ಟ್ರೇಲಿಯಾ ಈಗಲೇ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್​ನೊಂದಿಗೆ ಆಸ್ಟ್ರೇಲಿಯಾ ಕೃತಕ ಸ್ಪಿನ್ ಪಿಚ್ ನಿರ್ಮಿಸಿ ಅಭ್ಯಾಸ ನಡೆಸಲಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ ರೆಡಿ!
AustraliaImage Credit source: GettyImages
ಝಾಹಿರ್ ಯೂಸುಫ್
|

Updated on: Aug 05, 2026 | 12:35 PM

Share

ಭಾರತದ ನೆಲದಲ್ಲಿ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಿನ್ನವಾದ ಹಾದಿ ತುಳಿಯಲು ಸಜ್ಜಾಗಿದೆ. ಭಾರತದ ಸ್ಥಳೀಯ ತಂಡಗಳ ವಿರುದ್ಧ ಯಾವುದೇ ಸಾಂಪ್ರದಾಯಿಕ ಅಭ್ಯಾಸ ಪಂದ್ಯಗಳನ್ನು ಆಡದೆ, ನೇರವಾಗಿ ಸರಣಿ ಆರಂಭಿಸಲು ಆಸ್ಟ್ರೇಲಿಯಾ ಪಡೆ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್, ಭಾರತದ ವಿರುದ್ಧದ ಸರಣಿಗೂ ಮುನ್ನ ನಾವು ಯಾವುದೇ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡುವುದಿಲ್ಲ. ಬದಲಿಗೆ ನಮ್ಮದೇ ಶಿಬಿರವನ್ನು ಆಯೋಜಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಅಭ್ಯಾಸ ಪಂದ್ಯವಾಡದಿರಲು ಕಾರಣವೇನು?

ಸ್ಥಳೀಯ ಪಿಚ್‌ಗಳಲ್ಲಿ ನೆಪಮಾತ್ರಕ್ಕೆ ಅಭ್ಯಾಸ ಪಂದ್ಯ ಆಡುವುದಕ್ಕಿಂತ, ನಿರ್ದಿಷ್ಟವಾಗಿ ಸಿದ್ಧಪಡಿಸಲಾದ ವಿಶೇಷ ತರಬೇತಿ ಶಿಬಿರ ಹೆಚ್ಚು ಪ್ರಯೋಜನಕಾರಿ ಎಂದು ಆಸ್ಟ್ರೇಲಿಯಾ ಮ್ಯಾನೇಜ್‌ಮೆಂಟ್ ನಂಬಿದೆ.

ಭಾರತದ ಪಿಚ್‌ಗಳ ಸ್ಪಿನ್ ತಂತ್ರವನ್ನು ಎದುರಿಸಲು ಸೆಂಟರ್-ವಿಕೆಟ್ ಸಿಮ್ಯುಲೇಶನ್ (ಕೃತಕವಾಗಿ ಸ್ಪಿನ್ ಪಿಚ್ ನಿರ್ಮಿಸಿ ಅಭ್ಯಾಸ ಮಾಡುವುದು) ಅತ್ಯುತ್ತಮ ಮಾರ್ಗ ಎಂಬುದು ಕ್ರಿಕೆಟ್ ಆಸ್ಟ್ರೇಲಿಯಾದ ಅಭಿಪ್ರಾಯವಾಗಿದೆ.

ಈ ಹಿಂದಿನ ಮಾಸ್ಟರ್ ಪ್ಲ್ಯಾನ್:

ಆಸ್ಟ್ರೇಲಿಯಾ ತಂಡವು ಈ ಹಿಂದೆ ಕೂಡ ಅಭ್ಯಾಸ ಪಂದ್ಯವಾಡದೇ ಸರಣಿಯಲ್ಲಿ ನೇರವಾಗಿ ಕಣಕ್ಕಿಳಿದಿತ್ತು. ಈ ವೇಳೆಯೂ ತಮ್ಮದೇ ಶಿಬಿರ ಆಯೋಜಿಸಿ ಅಭ್ಯಾಸ ನಡೆಸಿದ್ದರು.

  • 2023ರ ಭಾರತ ಪ್ರವಾಸ: ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ಮತ್ತು ನಾರ್ತ್ ಸಿಡ್ನಿ ಓವಲ್‌ನಲ್ಲಿ ಕೃತಕ ಸ್ಪಿನ್ ಪಿಚ್‌ಗಳನ್ನು ನಿರ್ಮಿಸಿ ಕಠಿಣ ತರಬೇತಿ ನಡೆಸಿತ್ತು.
  • ಶ್ರೀಲಂಕಾ ಪ್ರವಾಸ: ಉಪಖಂಡದ ವಾತಾವರಣಕ್ಕೆ ಹೊಂದಿಕೊಳ್ಳಲು ದುಬೈನಲ್ಲಿ ವಿಶೇಷ ಸಿದ್ಧತಾ ಶಿಬಿರವನ್ನು ಆಯೋಜಿಸಿತ್ತು.

ಆಸೀಸ್ ಪಡೆಗೆ ವಿಶೇಷ ಶಿಬಿರ:

ನಮಗೆ ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ. ನಾವು ಯಾವುದೇ ಅಭ್ಯಾಸ ಪಂದ್ಯವನ್ನು ಆಡುವುದಿಲ್ಲ. ಬದಲಿಗೆ ನಿರ್ದಿಷ್ಟ ಸ್ಥಳಗಳಲ್ಲಿ ತರಬೇತಿ ಶಿಬಿರ ನಡೆಸಲಿದ್ದೇವೆ ಎಂದು ಕೋಚ್ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.

ಇದನ್ನೂ ಓದಿ: IND vs SL ಟೆಸ್ಟ್​ ಟೀಮ್ ಇಂಡಿಯಾ ಪಾಲಿಗೆ ಐತಿಹಾಸಿಕ ಪಂದ್ಯ

ಈ ಬಾರಿ ಸರಣಿಯ ಸಿದ್ಧತೆಗಾಗಿ ದುಬೈ ಅಥವಾ ಭಾರತದ ಯಾವುದಾದರೂ ಒಂದು ನಗರವನ್ನು ಆಯ್ಕೆ ಮಾಡಿಕೊಳ್ಳಲು ಆಸ್ಟ್ರೇಲಿಯಾ ಚಿಂತನೆ ನಡೆಸುತ್ತಿದೆ. ಅಂದರೆ ಟೀಮ್ ಇಂಡಿಯಾ ವಿರುದ್ಧದ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಅಥವಾ ದುಬೈನಲ್ಲಿ ವಿಶೇಷ ಶಿಬಿರ ಆಯೋಜಿಸಿ ಕೃತಕವಾಗಿ ಸ್ಪಿನ್ ಪಿಚ್ ನಿರ್ಮಿಸಿ ಅಭ್ಯಾಸ ನಡೆಸಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ 2027ರ ಸಂಪೂರ್ಣ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ
ಮೊದಲ ಟೆಸ್ಟ್ ಜನವರಿ 21 – 25 ವಿಸಿಎ ಸ್ಟೇಡಿಯಂ, ನಾಗ್ಪುರ
ಎರಡನೇ ಟೆಸ್ಟ್ ಜನವರಿ 29 – ಫೆಬ್ರವರಿ 02 ಎಂ.ಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಮೂರನೇ ಟೆಸ್ಟ್ ಫೆಬ್ರವರಿ 11 – 15 ಎಸಿಎ ಸ್ಟೇಡಿಯಂ, ಗುವಾಹಟಿ
ನಾಲ್ಕನೇ ಟೆಸ್ಟ್ ಫೆಬ್ರವರಿ 19 – 23 ಜೆಎಸ್ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂ, ರಾಂಚಿ
ಐದನೇ ಟೆಸ್ಟ್ ಫೆಬ್ರವರಿ 27 – ಮಾರ್ಚ್ 03 ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
Follow Us
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ