AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ 13: ರಾಕ್ಷಸನಾಗಿ ಬಾಯಿ ಬಂದಂತೆ ಮಾತನಾಡುತ್ತಿರುವ ಮಂಜ

ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ ವೇಳೆ ಮಂಜ ನಾಲಿಗೆ ಹರಿಬಿಟ್ಟಿದ್ದಾರೆ. ಯಶಸ್, ಕಿರಣ್ ಶಾಸ್ತ್ರಿ ಮುಂತಾದವರ ಬಗ್ಗೆ ಕೇವಲವಾಗಿ ಅವರು ಮಾತನಾಡಿದ್ದಾರೆ. ಬೇರೆ ರೀತಿಯಲ್ಲಿ ಟಾಸ್ಕ್ ನಿಭಾಯಿಸುವ ಬದಲು ಬರೀ ಖಾರದ ಮಾತುಗಳನ್ನು ಆಡುತ್ತಾ, ಚಾರಿತ್ರ್ಯಹರಣ ಮಾಡುವುದರಲ್ಲೇ ಮಂಜ ಕಾಲ ಕಳೆಯುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ 13: ರಾಕ್ಷಸನಾಗಿ ಬಾಯಿ ಬಂದಂತೆ ಮಾತನಾಡುತ್ತಿರುವ ಮಂಜ
Manja, Kavya
ಮದನ್​ ಕುಮಾರ್​
|

Updated on: Oct 07, 2026 | 10:50 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಮೊದಲಿನಿಂದಲೂ ಮಿತಿ ಇಲ್ಲದಂತೆ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಹಲವು ಬಾರಿ ಆಕ್ಷೇಪ ಎದುರಾಗಿದೆ. ಆದರೆ ಈಗ ಮಂಜನಿಗೆ ಮಿತಿ ಮೀರಿ ಮಾತನಾಡಲು ಪರವಾನಗಿ ಸಿಕ್ಕಂತೆ ಆಗಿದೆ! ಹೌದು, ಗಂಧರ್ವರು ಮತ್ತು ರಾಕ್ಷಸರು ಎಂಬ ಎರಡು ಗುಂಪುಗಳನ್ನು ಮಾಡಿ ಟಾಸ್ಕ್ ನೀಡಲಾಗಿದೆ. ಈ ಆಟದಲ್ಲಿ ಮಂಜ ಅವರು ರಾಕ್ಷಸರ ಟೀಮ್​ನಲ್ಲಿ ಇದ್ದಾರೆ. ಮನಸ್ಸಿಗೆ ಬಂದಂತೆ ವರ್ತಿಸಲು ರಾಕ್ಷಸರಿಗೆ ಅವಕಾಶ ಇದೆ. ಹಾಗಾಗಿ ಮಂಜ ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ.

ಗಂಧರ್ವರ ಟೀಮ್​ನಲ್ಲಿ ಇರುವ ಕಾವ್ಯಾ ಅವರ ಕೂದಲಿಗೆ ಮಂಜ ಸ್ಪ್ರೇ ಹಾಕಿದ್ದಾರೆ. ಕೂದಲು ಹಾಳಾಗುತ್ತದೆ ಎಂದು ಕಾವ್ಯಾ ಮನವಿ ಮಾಡಿಕೊಂಡರೂ ಕೂಡ ಅವರು ನಿಲ್ಲಿಸಿಲ್ಲ. ಬಳಿಕ, ಗಂಧರ್ವರಿಗೆ ಮೆಣಸಿನಕಾಯಿ ತಿನ್ನುವಂತೆ ಒತ್ತಾಯಿಸಿದ್ದಾರೆ. ಕಾವ್ಯಾ, ಯಶಸ್ ಮುಂತಾದವರಿಗೆ ಮೆಣಸಿನಕಾಯಿ ತಿನ್ನಿಸಲಾಗಿದೆ. ಇಷ್ಟೇ ಅಲ್ಲದೇ, ಅತಿಯಾಗಿ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕೆಲವರನ್ನು ಕಂಡರೆ ಮಂಜ ಅವರಿಗೆ ಆಗೋದಿಲ್ಲ. ಯಶಸ್, ಕಿರಣ್ ಶಾಸ್ತ್ರಿ ಬಗ್ಗೆ ಈ ಮೊದಲು ಕೂಡ ಮಂಜ ಮಿತಿ ಮೀರಿ ಮಾತನಾಡಿದ್ದರು. ಈಗ ಅವರು ಇನ್ನಷ್ಟು ನಾಲಿಗೆ ಹರಿಬಿಟ್ಟಿದ್ದಾರೆ. ರಾಕ್ಷಸನ ಪಾತ್ರ ನಿರ್ವಹಿಸುತ್ತಿದ್ದೇನೆ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ವೈಯಕ್ತಿಕವಾಗಿ ಚಾರಿತ್ರ್ಯಹರಣ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ.

ಸ್ವಿಮಿಂಗ್ ಪೂಲ್​ನಲ್ಲಿ ಯಶಸ್ ಅವರು ಇದ್ದಾಗ ಅವರನ್ನು ಮಂಜ ಕೆಣಕಿದರು. ‘ಲೇ ಮೂಲಂಗಿ.. ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ. ಕ್ಯಾಮರಾಗೆ ತೋರಿಸಲು ಸಾಧ್ಯವಾಗದ ಕಳ್ಳ ನನ್ನ ಮಗ ನೀನು’ ಎಂದು ಮಂಜ ಹೇಳಿದರು. ಇದರಿಂದ ಯಶಸ್ ಅವರಿಗೆ ತೀರಾ ಬೇಸರ ಆಯಿತು. ಪರ್ಸನಲ್ ಆಗಿ ಮಾತನಾಡಬೇಡಿ ಎಂದು ಅವರು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಮಂಜು ಮಾಡಿದ ತಪ್ಪಿಗೆ ಇಡೀ ಮನೆಗೆ ಶಿಕ್ಷೆ; ನಗುತ್ತಾ ಎಲ್ಲರನ್ನೂ ಹಂಗಿಸಿದ ಮಾಡರ್ನ್ ಮಹಾಕವಿ

ಮಂಜ ಈಗ ರಾಕ್ಷಸರ ಗುಂಪಿನಲ್ಲಿ ಇರುವುದರಿಂದ ಆಟದ ನಿಯಮದ ಪ್ರಕಾರ ಗಂಧರ್ವರು ಮಂಜನ ವಿರುದ್ಧ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ. ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಮಂಜ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ‘ನಾಟಕದ ನನ್ ಮಗನೇ. ಥು ನಿನ್ನ ಜನ್ಮಕ್ಕೆ’ ಎಂದು ಕಿರಣ್ ಶಾಸ್ತ್ರಿಗೆ ಮಂಜ ಅವಾಜ್ ಹಾಕಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಖಂಡಿತಾ ಚರ್ಚೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ