ದಿನ ಭವಿಷ್ಯ: ಇಂದು ಈ ರಾಶಿಯವರು ಅತಿಯಾದ ಹೂಡಿಕೆಯಿಂದ ಹಳೆಯದನ್ನೂ ಕಳೆದುಕೊಳ್ಳುವರು…
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಗುರುವಾರದಂದು ಪೈಪೋಟಿಯಲ್ಲಿ ಸೋಲು, ಸ್ವಯಂ ಪ್ರಜ್ಞೆ, ಸಂಗಾತಿಯ ದೂರು, ಕಾರ್ಯದಲ್ಲಿ ಗೊಂದಲ, ಪ್ರತಿಷ್ಠೆಗೆ ಕಲಹ, ವೃತ್ತಿಯ ಸ್ಥಳ ಬದಲು ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಕಾರಣವನ್ನು ದೈಜ್ಞರಿಂದ ಪಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಓದು ಅಸಮಾಧಾನ ತರಿಸಬಹುದು. ತಪ್ಪು ಕಲ್ಪನೆಗಳನ್ನು ನೀವೇ ಬದಲಿಸಿಕೊಳ್ಳಿ ಅಥವಾ ಬಗೆಹರಿಯುವ ತನಕ ಏನನ್ನೂ ಹೇಳಿಕೊಳ್ಳಬೇಡಿ. ಸಂಗಾತಿಯ ದೂರನ್ನು ಸರಿಯಾಗಿ ತಿಳಿಯುವಿರಿ. ನಿಮ್ಮ ಮೇಲೆ ಕೆಟ್ಟ ದೃಷ್ಟಿಯಿಂದ ಆರೋಗ್ಯ ಕೆಡುವುದು. ರಾಜಕಾರಣದ ಸ್ಪರ್ಶದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕು ಸಿಗಬಹುದು.
ವೃಷಭ ರಾಶಿ:
ವ್ಯವಹಾರದ ಮೋಸವನ್ನು ನೀವು ಸಹಿಸಲಾರಿರಿ. ಉಳಿದಿದ್ದ ಎಲ್ಲ ಸಾಲವನ್ನೂ ತೀರಿಸುವಿರಿ. ಸಹೋದರನ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯವು ಉಂಟಾದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಆಸ್ತಿಯ ರಕ್ಷಣೆಯನ್ನು ಮಾಡುವುದು ನಿಮಗೆ ಬಹಳ ಕ್ಲಿಷ್ಟ ಎನಿಸಬಹುದು. ಮಧ್ಯಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು.
ಮಿಥುನ ರಾಶಿ:
ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಇಷ್ಟವಾಗುವುದು. ಲಾಭಕ್ಕಾಗಿ ಎಂದು ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಬೇಕಾದೀತು. ಸಾವಧಾನತೆಯಿಂದ ಇದ್ದರೆ ನಿಮಗೆ ಶುಭವಾಗುವುದು. ನಿಮ್ಮ ಮಾತು ಕೋಪವನ್ನು ತರಿಸಬಹುದು.
ಕರ್ಕಾಟಕ ರಾಶಿ:
ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಲು ಇಷ್ಟಪಡುವಿರಿ. ನಿಮ್ಮನ್ನೇ ನೀವು ಪರೀಕ್ಷಿಸಿಕೊಳ್ಳಬೇಕಾಗಬಹುದು. ನಿಮ್ಮ ಯೋಚನೆಯನ್ನು ಬಲಿಷ್ಠವಾಗಿದ್ದರೂ ಅದನ್ನು ಕ್ರಿಯಾರೂಪಕ್ಕೆ ತರುವುದು ಕಷ್ಟವಾದೀತು. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.
ಸಿಂಹ ರಾಶಿ:
ಸಂಬಂಧಗಳನ್ನು ನಿರ್ವಹಿಸುವುದು ಕಷ್ಟವಾದೀತು. ನಿಮಗೆ ಸ್ನೇಹಿತರಿಂದ ಧನಸಹಾಯವು ಸಿಗಲಿದೆ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲು ಕಷ್ಟವಾದೀತು. ಅದಕ್ಕೆ ಏನಾದರೂ ತೊಂದರೆಯಾದೀತು. ಪ್ರಯಾಣಕ್ಕೆ ಇಂದು ಅನುಕೂಲವಿಲ್ಲ. ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಹಣವನ್ನು ನೀಡಬೇಕಾದೀತು. ಪುಣ್ಯಕ್ಷೇತ್ರಕ್ಕೆ ನೀವು ಬಂಧುಗಳ ಜೊತೆಗೆ ಹೋಗುವಿರಿ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ.
ಕನ್ಯಾ ರಾಶಿ:
ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯದಂತೆ ಇರುವುದು. ಅತಿಯಾದ ವಿಶ್ವಾಸದಿಂದ ನಿಮಗೆ ವಂಚನೆಯಾಗಲಿದೆ. ನಿಮಗೂ ಸರ್ಕಾರದ ನಡುವೆಯೂ ವಿವಾದಗಳು ನಡೆಯಬಹುದು. ದಾಂಪತ್ಯದಲ್ಲಿ ನಡೆಯುತ್ತಿರುವ ಶೀತಲಸಮರವು ಸ್ಫೋಟವಾಗಬಹುದು. ಮಕ್ಕಳಿಗೆ ಬೇಕಾದ ತಿಳಿವಳಿಕೆಯನ್ನು ಕೊಡಲಿದ್ದೀರಿ. ದೇಹದಂಡನೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ.
ತುಲಾ ರಾಶಿ:
ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ. ಯಾವ ಸಂದರ್ಭದಲ್ಲಿಯೂ ನೀವು ನಿಮ್ಮ ಮಾರ್ಗವನ್ನು ಬಿಟ್ಟುಹೋಗಲಾರಿರಿ. ಬಂಧುಗಳ ವಿಚಾರದಲ್ಲಿ ಅಸಮಾಧಾನವು ಇರುವುದು. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ.
ವೃಶ್ಚಿಕ ರಾಶಿ:
ನಿಮ್ಮನ್ನು ಸ್ಥಾನದಿಂದ ಕೆಳಗೆ ದೂಡಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಯಂತ್ರೋಪಕರಣದ ಬಳಕೆಯನ್ನು ಹೆಚ್ಚು ಮಾಡುಬಿರಿ. ನಿಮಗೆ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ಇಷ್ಟದವರ ಭೇಟಿಯಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಯಾರ ಬೆಂಬಲವೂ ಇಲ್ಲದ ಕಾರ್ಯವನ್ನು ಮಾಡುವುದು ಬೇಡ.
ಧನು ರಾಶಿ:
ಮಾನಸಿಕ ಅಸ್ಥಿರತೆಯಿಂದ ಜೊತೆಗಾರರಿಗೆ ಕಷ್ಟವಾಗಲಿದೆ. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ನಿಮಗೆ ಯಾರ ಮಾತಿನ ಮೇಲೂ ಪೂರ್ಣ ನಂಬಿಕೆ ಇರದು. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ವಿವಾಹ ಸಂಬಂಧದಿಂದ ನಿಮಗೆ ತೊಂದರೆಯಾಗಬಹುದು. ಕೆಲಸದಲ್ಲಿ ಮಂದಗತಿಯಲ್ಲಿ ಇರುವಿರಿ. ಬಂಧುಗಳನ್ನು ನೀವು ದೂರ ಮಾಡಿಕೊಳ್ಳುವಿರಿ.
ಮಕರ ರಾಶಿ:
ಇಂದು ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಬಹುದು. ನೀವು ಅಂದುಕೊಂಡ ಕಾರ್ಯವನ್ನು ಮಾಡಲು ಸಮಯವೇ ಸಿಗದು. ಪ್ರೇಯಸಿಯ ಜೊತೆ ಕಾಲಹರಣ ಮಾಡಬಹುದು. ವಿಶ್ವಾಸ ಗಳಿಕೆಯು ನಿಮ್ಮ ಇಂದಿನ ಉದ್ದೇಶವಾಗಲಿದೆ. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ.
ಕುಂಭ ರಾಶಿ:
ಒತ್ತಡದಿಂದ ಕಾರ್ಯವನ್ನು ಮಾಡುವುದು ನಿಮಗೆ ಅಭ್ಯಾಸವಾಗಿದೆ. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ನೀವು ಕಾರ್ಯದಲ್ಲಿ ತದೇಕಚಿತ್ತದಿಂದ ಇರುವಿರಿ. ಕೂಡಿಟ್ಟ ಹಣದಿಂದ ನಿಮಗೆ ಇಂದು ಪ್ರಯೋಜನವು ಸಿಗುವುದು. ಜಟಿಲ ಸಮಸ್ಯೆಯನ್ನು ಬಿಡಿಸಿಕೊಳ್ಳಲು ಕಷ್ಟವಾದೀತು. ಆರ್ಥಿಕಭದ್ರತೆಯ ಕಡೆ ಅಧಿಕ ಗಮನವನ್ನು ಕೊಡುವಿರಿ. ಮನಸ್ಸಿಗೆ ನಕಾರಾತ್ಮಕ ಆಲೋಚನೆಯು ಬರದಂತೆ ನೋಡಿಕೊಳ್ಳಿ.
ಮೀನ ರಾಶಿ:
ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು. ಯಾವುದನ್ನೂ ಕಲ್ಪಿಸಿಕೊಂಡು ದುಃಖಿಸುವುದು ಬೇಡ. ಹಣದ ಪ್ರಾಬಲ್ಯವನ್ನು ತೋರಿಸುವಿರಿ. ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ನಿಮಗೆ ಬರುವ ಎಚ್ಚರಿಕೆಯ ಕರೆಯನ್ನು ಗಮನಿಸದೇ ಮುನ್ನಡೆಯುವಿರಿ. ಉತ್ತಮವಾದ ಸಮಯವನ್ನು ಎದುರು ನೋಡುವಿರಿ. ಹಣದ ಒಳ ಹರಿವು ನಿಮಗೆ ನೆಮ್ಮದಿಯನ್ನು ಕೊಟ್ಟೀತು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶುಭ, ಕರಣ : ತೈತಿಲ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:36 – 15:05, ಯಮಗಂಡ ಕಾಲ 06:10 – 07:39, ಗುಳಿಕ ಕಾಲ 09:09 – 10:38
– ಲೋಹಿತ್ ಹೆಬ್ಬಾರ್ – 8762924271 (what’s app only)




