AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ

ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ

ಬಸವರಾಜ್​ ಯರಗಣವಿ
| Edited By: |

Updated on: Oct 07, 2026 | 10:24 PM

Share

ಕೆಎಸ್.ಈಶ್ವರಪ್ಪ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವುದು ಖಚಿತಪಡಿಸಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರು, ಕಾರ್ಯಕರ್ತರು ಮತ್ತು ಹಿತೈಷಿಗಳೊಂದಿಗೆ ಚರ್ಚೆ ನಡೆಸಿದ ಅವರು, ಗೆಲುವಿನ ನಂತರ ಬಿಜೆಪಿ ತಮ್ಮನ್ನು ಮತ್ತೆ ಸೇರಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೇರೆ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ, ಅಕ್ಟೋಬರ್​​ 07: ‘ರಾಷ್ಟ್ರೀಯ ಸ್ವಯಂಸೇವಕ ಸಂಘ ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ ಸಂಸ್ಥೆ, ಆರ್‌ಎಸ್‌ಎಸ್ ಪರಿವಾರದ ಪ್ರಮುಖರು ನನ್ನನ್ನು ಭೇಟಿ ಮಾಡಿ ಬಿಜೆಪಿಗೆ ಮರಳುವಂತೆ ಸಲಹೆ ನೀಡಿದ್ದಾರೆ’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಬಿಜೆಪಿಗೆ ವಾಪಸ್ ಆಗುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ವಿಚಾರವಾಗಿ ಶಿವಮೊಗ್ಗ ನಗರದ ಪ್ರಮುಖರು, ನಗರ ಪದಾಧಿಕಾರಿಗಳು ಹಾಗೂ ನನ್ನನ್ನು ಗೆಲ್ಲಿಸಿದ ವಿವಿಧ ಸಮಾಜದ ಹಿತೈಷಿಗಳೊಂದಿಗೆ ಮೂರು ಹಂತದ ಸಭೆ ನಡೆಸಿ ಚರ್ಚಿಸಿದ್ದು, ಪಕ್ಷದ ರಾಷ್ಟ್ರ ಮಟ್ಟದ ನಾಯಕರು ಅಥವಾ ಪರಿವಾರದ ಹಿರಿಯರು ನೇರವಾಗಿ ಭರವಸೆ ನೀಡಿದರೆ ಮಾತ್ರ ಪಕ್ಷ ಸೇರ್ಪಡೆ ಬಗ್ಗೆ ತೀರ್ಮಾನಿಸುವಂತೆ ಬೆಂಬಲಿಗರು ಸಲಹೆ ನೀಡಿದ್ದಾರೆ’ ಎಂದರು. ‘ಅಲ್ಲದೆ, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದಲೂ ಆಹ್ವಾನ ಬಂದಿತ್ತಾದರೂ, ತಮ್ಮ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿಯಿಂದಲೇ ಆಗಿರುವುದರಿಂದ ಕೊನೆಯುಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ’ ಎಂದಿದ್ದಾರೆ. ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನಾಗಲಿ ಅಥವಾ ಪುತ್ರ ಕಾಂತೇಶ್​ ಆಗಲಿ ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ಬಸವರಾಜ್​ ಯರಗಣವಿ
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More