ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಅಂಬೆಗಾಲಿಡುವ ಮುನ್ನವೇ ಇನ್ವೆಸ್ಟರ್ ಆದ ಮಗು!
ಮುಖ್ಯಾಂಶಗಳು
- 28 ದಿನದ ಕಂದಮ್ಮನ ಹೆಸರಲ್ಲಿ ಡಿಮ್ಯಾಟ್ ಖಾತೆ ಓಪನ್
- ನಿತಿನ್ ಕಾಮತ್ ಹಂಚಿಕೊಂಡ ಅಚ್ಚರಿಯ ಪೋಸ್ಟ್ ವೈರಲ್!
- ಮಗುವಿನ ಹೆಸರಲ್ಲಿ ಖಾತೆ ತೆರೆಯೋ ಮುನ್ನ ತೆರಿಗೆ ನಿಯಮ ತಿಳಿದುಕೊಳ್ಳಿ
28 ದಿನ ಹಸುಗೂಸಿನ ಹೆಸರಲ್ಲಿ ಜೆರೋದಾದಲ್ಲಿ ಡಿಮ್ಯಾಟ್ ಖಾತೆ ತೆರೆಯಲಾಗಿದೆ. ಇದು ಭಾರತೀಯ ಪೋಷಕರಲ್ಲಿ ಹಣಕಾಸು ಸಾಕ್ಷರತೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಆರಂಭಿಕ ಹೂಡಿಕೆಯ ಮಹತ್ವ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಅಪ್ರಾಪ್ತರ ಖಾತೆ ನಿಯಮಗಳು, ಹೂಡಿಕೆ ವಿಧಾನಗಳು ಮತ್ತು ತೆರಿಗೆ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.
ಬೆಂಗಳೂರು, ಅಕ್ಟೋಬರ್ 07: ದೇಶದ ಪ್ರಮುಖ ಬ್ರೋಕರೇಜ್ ಸಂಸ್ಥೆ ಜೆರೋದಾದಲ್ಲಿ ಕೇಲವ 28 ದಿನದ ಮಗುವಿನ ಹೆಸರಿನಲ್ಲಿ ಅಪ್ರಾಪ್ತರ ಡಿಮ್ಯಾಟ್ ಖಾತೆ ತೆರೆಯಲಾಗಿದ್ದು, ಸಂಸ್ಥೆಯ ಇತಿಹಾಸದಲ್ಲೇ ಇದು ಅತ್ಯಂತ ಕಿರಿಯ ಹೂಡಿಕೆದಾರ ಎಂಬ ಹೆಗ್ಗಳಿಕೆಗೆ ಈ ಕಂದಮ್ಮ ಪಾತ್ರವಾಗಿದೆ. ಇದು ದೇಶದ ಪೋಷಕರಲ್ಲಿ ಹೆಚ್ಚುತ್ತಿರುವ ಆರ್ಥಿಕ ಜ್ಞಾನ ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮಾಡುವ ಮಹತ್ವವನ್ನು ಎತ್ತಿ ತೋರಿಸುತ್ತಿದೆ. ಜೆರೋದಾ ಸಹಸಂಸ್ಥಾಪಕ ನಿತಿನ್ ಕಾಮತ್ ಅವರು ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಪ್ರಾಪ್ತರ ಡಿಮ್ಯಾಟ್ ಖಾತೆಯ ಮೂಲಕ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಆದರೆ, ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಈ ಖಾತೆಯನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಡೆರಿವೇಟಿವ್ಸ್ ಅಥವಾ ಇಂಟ್ರಾಡೇ ಟ್ರೇಡಿಂಗ್‌ಗೆ ಅವಕಾಶವಿರುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ

