AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​​ಗಾಗಿ ರೂಲ್ ಬ್ರೇಕ್ ಮಾಡಿದೆ: ಕೊಂಡಾಡಿದ ನಟಿ ನಯನತಾರಾ

Nayanathara in Toxic: ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಇಂದು (ಆಗಸ್ಟ್ 08) ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅವರನ್ನು ಮಾತ್ರವಲ್ಲ, ನಿರ್ದೇಶಕಿ ಗೀತು ಮೋಹನ್​​ದಾಸ್ ಅವರನ್ನೂ ಸಹ ಬಹುವಾಗಿ ಮೆಚ್ಚಿ ಮಾತನಾಡಿದರು.

ಯಶ್​​ಗಾಗಿ ರೂಲ್ ಬ್ರೇಕ್ ಮಾಡಿದೆ: ಕೊಂಡಾಡಿದ ನಟಿ ನಯನತಾರಾ
Yash Nayanthara
ಮಂಜುನಾಥ ಸಿ.
|

Updated on:Aug 08, 2026 | 10:02 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
  • ಟ್ರೈಲರ್ ಬಿಡುಗಡೆಗೆ ನಟಿ ನಯನತಾರಾ ಆಗಮಿಸಿದ್ದರು.
  • ತಾವು ಯಶ್ ಮಾತಿಗಾಗಿ ಇವೆಂಟ್​​ಗೆ ಬಂದೆ ಎಂದು ಹೇಳಿಕೊಂಡಿದ್ದಾರೆ.

ನಯನತಾರಾ (Nayanthara), ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ಬಹಳ ಶಿಸ್ತು, ನಿಷ್ಠುರವಾದಿ ಎಂದು ಸಹ ನಯನತಾರಾ ಹೆಸರಾಗಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿರಲಿ, ಹಿಂದು-ಮುಂದು ನೋಡದೆ ತಮಗನಿಸಿದ್ದು ಹೇಳುತ್ತಾರೆ (ನಟ ಧನುಶ್​ ಜೊತೆಗಿನ ವಿವಾದ ನೆನಪಿರಬೇಕು). ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಇಂದು (ಆಗಸ್ಟ್ 08) ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅವರನ್ನು ಮಾತ್ರವಲ್ಲ, ನಿರ್ದೇಶಕಿ ಗೀತು ಮೋಹನ್​​ದಾಸ್ ಅವರನ್ನೂ ಸಹ ಬಹುವಾಗಿ ಮೆಚ್ಚಿ ಮಾತನಾಡಿದರು.

‘ನಾನು ಹಾಗೂ ಗೀತು ಮೋಹನ್​​ದಾಸ್ 20 ವರ್ಷಗಳ ಹಿಂದೆ ಒಂದು ಸಿನಿಮಾನಲ್ಲಿ ನಟಿಸಿದ್ದೆವು, ಆಗ ಇದ್ದ ಗೀತೂಗೂ ಈಗಿರುವ ಗೀತೂಗು ಸಾಕಷ್ಟು ಅಂತರ ಇದೆ. ನಾನು ಹೆಚ್ಚು ಜನ ನಟ-ನಟಿಯರು ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ನನಗೆ ಅಂಥಹಾ ಸಿನಿಮಾಗಳಲ್ಲಿ ನಟಿಸುವುದಕ್ಕೆ ತುಸು ಹಿಂಜರಿಕೆ. ಹಾಗಾಗಿ ಗೀತೂ ಮೊದಲು ಕರೆ ಮಾಡಿದಾಗ ನಾನು ನಟಿಸುವುದಿಲ್ಲ ಎಂದೇ ಹೇಳಿದ್ದೆ. ಆದರೆ ಗೀತೂ ನನಗೆ 10 ಮಿಲಿಯನ್ ಪ್ರಶ್ನೆಗಳು ಕೇಳಿದರು. ನಾನು ಸರಿ ಒಮ್ಮೆ ಬಂದು ಕತೆ ಹೇಳಿ ಅಂದೆ. ಆಕೆ ಕತೆ ಹೇಳಿದಾಗ ನನಗೆ ಶಾಕ್ ಆಗಿಬಿಟ್ಟಿತು, ಯಾರು ಈ ಮಹಿಳೆ, ನಾವು ನೋಡೇ ಇಲ್ಲವಲ್ಲ ಎನಿಸಿತು. ನಾನು ಕೂಡಲೇ ಸಿನಿಮಾ ಒಪ್ಪಿಕೊಂಡೆ’ ಎಂದಿದ್ದಾರೆ ನಯನತಾರಾ.

‘ಗೀತೂ ಮಾಡಿರುವ ಮೋಡಿ ಸಾಮಾನ್ಯದ್ದಲ್ಲ. ನೀವು ಟ್ರೈಲರ್ ನೋಡಿದ್ದೀರಿ, ಅದು ಅದ್ಭುತವಾಗಿದೆ. ಆದರೆ ಸಿನಿಮಾ ಇದಕ್ಕಿಂತಲೂ ಬಹಳ ದೊಡ್ಡ ಮಟ್ಟದಲ್ಲಿರುತ್ತದೆ. ಇದು ಸಾಮಾನ್ಯ ಸಿನಿಮಾ ಅಲ್ಲವೇ ಅಲ್ಲ. ಗೀತೂ ಒಬ್ಬ ನಿರ್ದೇಶಕಿಯಾಗಿ ಅದ್ಭುತವಾಗಿದ್ದಾರೆ, ಆದರೆ ಒಬ್ಬ ಮಹಿಳೆಯಾಗಿ ಇನ್ನೂ ಅದ್ಭುತವಾದ ವ್ಯಕ್ತಿ ಅವರು. ನಾನು ಎಷ್ಟು ಹೊತ್ತು ಬೇಕಾದರೂ ಗೀತೂ ಬಗ್ಗೆ ಮಾತನಾಡಬಲ್ಲೆ’ ಎಂದರು ನಯನತಾರಾ. ನಟಿ ನಯನತಾರಾ ತಮ್ಮ ಸಹ ನಟರನ್ನು, ತಂತ್ರಜ್ಞರನ್ನು ಇಷ್ಟೋಂದು ಹೊಗಳುವುದು ಬಹಳ ಅಪರೂಪ.

ಇದನ್ನೂ ಓದಿ:ಒಂದು ಪಾರ್ಟಿಯಿಂದ ಹುಟ್ಟಿತು ‘ಟಾಕ್ಸಿಕ್’ ಸಿನಿಮಾ: ನಿರ್ಮಾಪಕ ಹೇಳಿದ್ದೇನು?

ಇನ್ನು, ಯಶ್​​ ಬಗ್ಗೆ ಮಾತನಾಡುತ್ತಾ, ‘ನಾನು ಪ್ರಚಾರ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಏಕೆಂದರೆ ನನಗೆ ಪ್ರಚಾರ ಮಾಡುವುದು, ಭಾಷಣ ಮಾಡುವುದು ತುಸು ಕಷ್ಟದ ಕೆಲಸ. ಆದರೆ ಇಲ್ಲಿಗೆ ಕೇವಲ ಯಶ್​​ಗಾಗಿ ಮಾತ್ರ ಬಂದಿದ್ದೇನೆ. ಯಶ್ ಒಂದು ಕರೆ ಮಾಡಿ ಬರಬೇಕು ಎಂದರು ಹಾಗಾಗಿ ನಾನು ಇಲ್ಲಿಗೆ ಬಂದೆ. ನಾನು ಸಾಕಷ್ಟು ಸ್ಟಾರ್ ನಟರುಗಳ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ ಯಶ್ ಎಲ್ಲರಿಗಿಂತಲೂ ಭಿನ್ನ. ಅವರು ತೆರೆಯ ಮೇಲೆ ಕಾಣಿಸುವಂಥೆಯೇ ‘ಲಾರ್ಜರ್ ದ್ಯಾನ್ ಲೈಫ್’. ಅವರಷ್ಟು ಕಷ್ಟಪಟ್ಟು ಕೆಲಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಆತ ನಿಜಕ್ಕೂ ಮಾನ್​​ಸ್ಟರ್’ ಎಂದು ಕೊಂಡಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Sat, 8 August 26

Follow Us