AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BAN vs PAK: ಆಘಾ ಶತಕ ವ್ಯರ್ಥ; ಪಾಕ್ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ

BAN vs PAK: ಮಿರ್‌ಪುರದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು 11 ರನ್‌ಗಳಿಂದ ಸೋಲಿಸಿ, 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ. ತಂಜಿದ್ ಹಸನ್ ಅವರ ಭರ್ಜರಿ 107 ರನ್ ಮತ್ತು ಪಾಕ್‌ನ ಸಲ್ಮಾನ್ ಅಲಿ ಆಘಾ ಅವರ 106 ರನ್ ಪಂದ್ಯದ ಮುಖ್ಯಾಂಶಗಳಾಗಿದ್ದವು. ಈ ಗೆಲುವಿನೊಂದಿಗೆ ಬಾಂಗ್ಲಾದೇಶವು ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

BAN vs PAK: ಆಘಾ ಶತಕ ವ್ಯರ್ಥ; ಪಾಕ್ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ
Ban Vs Pak
ಪೃಥ್ವಿಶಂಕರ
|

Updated on: Mar 15, 2026 | 10:43 PM

Share

ಮಿರ್‌ಪುರದಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 11 ರನ್‌ಗಳಿಂದ ಸೋಲಿಸಿದ ಆತಿಥೇಯ ಬಾಂಗ್ಲಾದೇಶ (Bangladesh vs Pakistan) ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ತಂಜಿದ್ ಹಸನ್ (Tanzid Hasan) ಅವರ 107 ರನ್‌ಗಳ ಇನ್ನಿಂಗ್ಸ್‌ ಆಧಾರದ ಮೇಲೆ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 290 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಪರ ಸಲ್ಮಾನ್ ಅಲಿ ಆಘಾ (Salman Ali Agha) ಕೂಡ 106 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ 279 ರನ್‌ಗಳಿಗೆ ಆಲೌಟ್ ಆಯಿತು.

ತಂಜಿದ್ ಹಸನ್ ಶತಕ

ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, 5 ವಿಕೆಟ್‌ಗೆ 290 ರನ್ ಗಳಿಸಿತು. ತಂಡದ ಪರ ಆರಂಭಿಕ ತಂಜಿದ್ ಹಸನ್ ತಮೀಮ್ 107 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವೂ ಆಗಿದೆ. ತಂಜಿದ್ ಹೊರತುಪಡಿಸಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್ 51 ಎಸೆತಗಳಲ್ಲಿ 41 ರನ್ ಗಳಿಸಿದರೆ, ಕೊನೆಯಲ್ಲಿ, ತೌಹಿದ್ ಹೃದಯ್ 44 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿ ತಂಡದ ಸ್ಕೋರ್ ಅನ್ನು 290ಕ್ಕೆ ತಲುಪಿಸಿದರು. ಇವರ ಜೊತೆಗೆ ಆರಂಭಿಕ ಆಟಗಾರ ಸೈಫ್ ಹಸನ್ 36 ರನ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ 27 ರನ್​ಗಳ ಕಾಣಿಕೆಯನ್ನು ನೀಡಿದರು.

ದುಬಾರಿಯಾದ ಬೌಲರ್ಸ್​

ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 10 ಓವರ್‌ಗಳಲ್ಲಿ 52 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಪಡೆದರೆ, ನಾಯಕ ಶಾಹೀನ್ ಅಫ್ರಿದಿ 10 ಓವರ್‌ಗಳಲ್ಲಿ 55 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಅಬ್ರಾರ್ ಅಹ್ಮದ್ 10 ಓವರ್‌ಗಳಲ್ಲಿ 49 ರನ್‌ ನೀಡಿ ಒಂದು ವಿಕೆಟ್ ಪಡೆದರು. ಶಾದ್ ಮಸೂದ್ 8 ಓವರ್‌ಗಳಲ್ಲಿ 55 ರನ್‌ ಬಿಟ್ಟುಕೊಟ್ಟರು.

ಏಕದಿನ ತಂಡದಿಂದಲೂ ಬಾಬರ್ ಔಟ್; 6 ಹೊಸ ಮುಖಗಳಿಗೆ ಚೊಚ್ಚಲ ಅವಕಾಶ

ಸಲ್ಮಾನ್ ಆಘಾ ಹೋರಾಟ ವ್ಯರ್ಥ

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಆರಂಭಿಕರಿಬ್ಬರು ತಲಾ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅನುಭವಿ ಮೊಹಮ್ಮದ್ ರಿಜ್ವಾನ್ ಕೂಡ 4 ರನ್​ಗಳಿಗೆ ಸುಸ್ತಾದರು. ಆದರೆ ಆ ಬಳಿಕ ಬಂದ ಸಲ್ಮಾನ್ ಆಘಾ, ಅಬ್ದುಲ್ ಸಮದ್ ಜೊತೆಗೂಡಿ ಇನ್ನಿಂಗ್ಸ್ ನಿಭಾಯಿಸಿದರು. ಸಮದ್ 34 ರನ್ ಬಾರಿಸಿ ಔಟಾದರೆ, ಆ ಬಳಿಕ ಬಂದ ಸಾದ್ ಮಸೂದ್ 38 ರನ್​ಗಳ ಕಾಣಿಕೆ ನೀಡಿದರು. ನಾಯಕ ಶಾಹೀನ್ ಅಫ್ರಿದಿ 37 ರನ್ ಬಾರಿಸಿದರು. ಸತತ ವಿಕೆಟ್​ಗಳ ಪತನದ ನಡುವೆಯೂ ಹೋರಾಟ ನೀಡಿದ ಆಘಾ, 98 ಎಸೆತಗಳಲ್ಲಿ 106 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚೆಲ್ಲುವ ಮೂಲಕ ತಂಡವನ್ನು ಸೋಲಿನ ಸುಳಿಗೆ ತಳ್ಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us