ಶಿವಗಂಗೆ ಬೆಟ್ಟದಲ್ಲಿ ಕಾಣೆಯಾದ ಟೆಕ್ಕಿ; ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಟ್ರಕ್ಕಿಂಗ್‌ಗಾಗಿ ಶಿವಗಂಗೆ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಕಾಡುಗೋಡಿಯ ಸಾಫ್ಟ್‌ವೇರ್ ಎಂಜಿನಿಯರ್ ಅದ್ವೈತ್ ಉಪಾಧ್ಯಾಯ (ಮಧ್ಯಪ್ರದೇಶ ಮೂಲದವರು) ಕಳೆದ ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರ ಪತ್ನಿ ಪ್ರಾಪ್ತಿ ಚೌಹಾಣ್ ನೀಡಿದ ದೂರಿನನ್ವಯ ಡಾಬಸ್‌ಪೇಟೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದ್ದು, ಅವರು ಬಾಡಿಗೆಗೆ ಪಡೆದಿದ್ದ ಬುಲೆಟ್ ಬೈಕ್ ಪಾರ್ಕಿಂಗ್‌ನಲ್ಲಿ ಪತ್ತೆಯಾಗಿದೆ.
ನೆಲಮಂಗಲ, ಆಗಸ್ಟ್ 09: ಟ್ರಕ್ಕಿಂಗ್‌ಗಾಗಿ ಶಿವಗಂಗೆ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಕಾಡುಗೋಡಿಯ ಸಾಫ್ಟ್‌ವೇರ್ ಎಂಜಿನಿಯರ್ ಅದ್ವೈತ್ ಉಪಾಧ್ಯಾಯ (ಮಧ್ಯಪ್ರದೇಶ ಮೂಲದವರು) ಕಳೆದ ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರ ಪತ್ನಿ ಪ್ರಾಪ್ತಿ ಚೌಹಾಣ್ ನೀಡಿದ ದೂರಿನನ್ವಯ ಡಾಬಸ್‌ಪೇಟೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದ್ದು, ಅವರು ಬಾಡಿಗೆಗೆ ಪಡೆದಿದ್ದ ಬುಲೆಟ್ ಬೈಕ್ ಪಾರ್ಕಿಂಗ್‌ನಲ್ಲಿ ಪತ್ತೆಯಾಗಿದೆ. ಶನಿವಾರ ಸಂಜೆ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಜಂಟಿ ಕಾರ್ಯಾಚರಣೆ ಇಂದು (ಆ. 9) ಮತ್ತೆ ಮುಂದುವರಿದಿದೆ. ನಾಪತ್ತೆಯಾಗಿರುವ ಟೆಕ್ಕಿಯ ಪತ್ತೆಗಾಗಿ ಪೊಲೀಸರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಬಾಡಿ ಫೌಂಡ್ ಮೆಟಲ್ ಡಿಟೆಕ್ಟರ್ ಹಾಗೂ ಹೈ-ರೆಸಲ್ಯೂಷನ್ ಡ್ರೋನ್ ಕ್ಯಾಮೆರಾಗಳನ್ನು ತರಿಸುತ್ತಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 09, 2026 11:05 AM
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಫ್ಲೈಓವರ್ನಿಂದ ಕೆಳಗೆ ಬಿದ್ದ ಕಾರು

