AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಯಾರಾ ಅಡ್ವಾಣಿ, ಹುಮಾ ಖುರೇಷಿಗೆ ವಿಶೇಷ ಸಂದೇಶ ಕೊಟ್ಟ ಯಶ್

Yash about Kiara Advani: ‘ಟಾಕ್ಸಿಕ್’ ಟ್ರೈಲರ್ ಇವೆಂಟ್​​ನಲ್ಲಿ ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಇನ್ನೂ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಎಲ್ಲರಿಗೂ ಧನ್ಯವಾದ ಹೇಳಿದರು. ಆದರೆ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರುಗಳಿಗೆ ವಿಶೇಷ ಸಂದೇಶ ನೀಡಿದರು.

ಕಿಯಾರಾ ಅಡ್ವಾಣಿ, ಹುಮಾ ಖುರೇಷಿಗೆ ವಿಶೇಷ ಸಂದೇಶ ಕೊಟ್ಟ ಯಶ್
Kiara Yash Huma
ಮಂಜುನಾಥ ಸಿ.
|

Updated on: Aug 09, 2026 | 10:53 AM

Share

ಮುಖ್ಯಾಂಶಗಳು

  • ನಟ ಯಶ್, ಕಿಯಾರಾ ಹಾಗೂ ಹುಮಾ ಖುರೇಷಿಗೆ ಸಂದೇಶ ನೀಡಿದ್ದಾರೆ.
  • ‘ಟಾಕ್ಸಿಕ್’ ಸಿನಿಮಾದಿಂದ ಕಿಯಾರಾ ಅಡ್ವಾಣಿ ಸಾಕಷ್ಟು ಟ್ರೋಲಿಂಗ್ ಅನುಭವಿಸಿದ್ದಾರೆ.
  • ಹುಮಾ ಖುರೇಷಿಗೆ ಸಹ ಕೆಲ ಸಮಸ್ಯೆಗಳು ಎದುರಾಗಿದ್ದವು.

ಟಾಕ್ಸಿಕ್’ (Toxic) ಟ್ರೈಲರ್ ರಿಲೀಸ್ ನಿನ್ನೆ (ಆಗಸ್ಟ್ 08) ನಡೆದಿದ್ದು, ಟ್ರೈಲರ್​​ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನಾಲ್ಕು ನಿಮಿಷದ ಟ್ರೈಲರ್​​ನಲ್ಲಿ ಆಕ್ಷನ್, ರೊಮೊನ್ಯಾಸ್, ಸೆಂಟಿಮೆಂಟ್, ದ್ರೋಹ, ಅಪ್ಪ-ಮಗನ ಸೆಂಟಿಮೆಂಟ್, ದ್ವೇಷ, ಮಾನವೀಯತೆ ಇನ್ನೂ ಹಲವು ಅಂಶಗಳು ಇವೆ. ನಿನ್ನೆ ಎಎಂಬಿ ಮಾಲ್​​ನಲ್ಲಿ ನಡೆದ ‘ಟಾಕ್ಸಿಕ್’ ಟ್ರೈಲರ್ ಇವೆಂಟ್​​ನಲ್ಲಿ ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಇನ್ನೂ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಎಲ್ಲರಿಗೂ ಧನ್ಯವಾದ ಹೇಳಿದರು. ಆದರೆ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರುಗಳಿಗೆ ವಿಶೇಷ ಸಂದೇಶ ನೀಡಿದರು.

ನಯನತಾರಾ ಅವರ ಸ್ಟಾರ್​​ಡಮ್, ಅವರಿಗಿರುವ ಮಾರುಕಟ್ಟೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಶ್, ರುಕ್ಮಿಣಿ ಅವರು ಲಂಡನ್​​ನಲ್ಲಿ ಕಲಿತಿರುವುದು, ಅವರು ಮಾಡುತ್ತಿರುವ ಸಾಧನೆ, ಕನ್ನಡಿಗನಾಗಿ ಹೆಮ್ಮೆ ಎನಿಸಿದೆ ಎಂದರು. ತಾರಾ ಸುತಾರಿಯಾ ಅವರ ಸೌಂದರ್ಯ ಮತ್ತು ಪ್ರತಿಭೆಯನ್ನು ಕೊಂಡಾಡಿದರು. ಕಿಯಾರಾ ಮತ್ತು ಹುಮಾ ಅವರಿಗೆ ತುಸು ಭಿನ್ನವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಅವರು ಅನುಭವಿಸಿದ ಕಷ್ಟಕ್ಕೆ ಮರುಕವನ್ನು, ಸಾಂತ್ವನವನ್ನೂ ಹೇಳಿದರು.

‘ತಬಾಹಿ’ ಹಾಡಿನ ಬಿಡುಗಡೆ ಬಳಿಕ ಕಿಯಾರಾ ಅಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿ ಆಗಿದ್ದಾರೆ. ಕಿಯಾರಾ ಅವರನ್ನು ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ. ತೀರ ನೀಚವಾಗಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕಮೆಂಟ್​​ಗಳನ್ನು ಹಾಕಲಾಗುತ್ತಿದೆ. ಕಿಯಾರಾ, ವೃತ್ತಿಜೀವನದಲ್ಲಿಯೇ ಕೆಟ್ಟದಾಗಿ ಟೀಕೆಗೆ ಒಳಗಾಗಿದ್ದರು.

ಇದನ್ನೂ ಓದಿ:ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್

ನಿನ್ನೆಯ ಕಾರ್ಯಕ್ರಮದಲ್ಲಿ ಕಿಯಾರಾ ಬಗ್ಗೆ ಮಾತನಾಡಿದ ಯಶ್, ‘ನೀವು ಅದೆಷ್ಟು ಶ್ರಮಹಾಕಿ ಕೆಲಸ ಮಾಡುತ್ತೀರಿ ಎಂಬುದನ್ನು ನೋಡಿ ಆಶ್ಚರ್ಯವಾಗುತ್ತದೆ. ಸಾಕಷ್ಟು ಸ್ಟಾರ್​​ಗಳನ್ನು ನಾವು ಒಟ್ಟಿಗೆ ಸೇರಿಸಿದ್ದೇವೆ, ಇದರಿಂದ ಸೆಟ್​​ನಲ್ಲಿ ಸಮಸ್ಯೆ ಆಗಬಹುದು ಎಂದುಕೊಂಡಿದ್ದೆವು. ಆದರೆ ಕಿಯಾರಾ ಅದೆಷ್ಟು ಸರಳವಾದ ವ್ಯಕ್ತಿ ಎಂದರೆ ನಮಗೆ ಅವರೊಟ್ಟಿಗೆ ಎಂದಿಗೂ ಸಮಸ್ಯೆ ಆಗಲಿಲ್ಲ. ಅವರು ನೀಡಿರುವ ನಟನೆ ಅತ್ಯದ್ಬುತ. ಆದರೆ ಒಬ್ಬ ನಟಿಯಾಗಿ ಅವರು ಅನಿವಾರ್ಯವಾಗಿ ಅನುಭವಿಸ ಬೇಕಾದ ಮಾನಸಿಕ ಹಿಂಸೆಯ ಬಗ್ಗೆ ನನಗೆ ಬಹಳ ನೋವಿದೆ, ಆದರೆ ಅದನ್ನೆಲ್ಲ ಕೇರ್ ಮಾಡುವುದು ಬೇಡ, ಮುನ್ನುಗ್ಗುತ್ತಲೇ ಇರಿ’ ಎಂದಿದ್ದಾರೆ ಯಶ್.

ಇನ್ನು ನಟಿ ಹುಮಾ ಖುರೇಷಿ ಸಹ ಇತ್ತೀಚೆಗೆ ‘ಟಾಕ್ಸಿಕ್’ ಕಾರಣಕ್ಕೆ ತುಸು ಸಮಸ್ಯೆ ಎದುರಿಸಿದ್ದರು. ಹುಮಾ ಅವರು ಸ್ವತಃ ನಿರ್ಮಾಣ ಮಾಡಿ ನಟಿಸಿದ್ದ ‘ಬೇಬಿ ಡೂ ಡೈ ಡು’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿತ್ತು. ಆ ಸಿನಿಮಾದ ಪ್ರಚಾರದ ವೇಳೆ ಅವರಿಗೆ ಪದೇ ಪದೇ ‘ಟಾಕ್ಸಿಕ್’ ಸಿನಿಮಾದ ಪ್ರಶ್ನೆಗಳೇ ಎದುರಾಗಿದ್ದವು. ಸಾಕಷ್ಟು ಕಷ್ಟಪಟ್ಟು ಅವರು ಸಿನಿಮಾದ ಪ್ರಚಾರ ಮಾಡಿದರು. ಈ ಬಗ್ಗೆಯೂ ಮಾತನಾಡಿದ ಯಶ್, ‘ಹುಮಾ ದಿಟ್ಟ ಮಹಿಳೆ, ಟ್ರೈಲರ್​​ನಲ್ಲಿ ಅವರು ಕಡಿಮೆ ಕಾಣಿಸಿದ್ದಾರೆ ಆದರೆ ಸಿನಿಮಾನಲ್ಲಿ ಅವರು ಗಮನ ಸೆಳೆಯಲಿದ್ದಾರೆ. ಹುಮಾ ಒಬ್ಬ ಅದ್ಭುತ ನಟಿ, ಅವರು ಇತ್ತೀಚೆಗೆ ನಿರ್ಮಾಣ ಸಹ ಮಾಡಿದ್ದಾರೆ. ಜೊತೆಗೆ ಇಂಡಿಪೆಂಡೆಂಟ್ ಸಿನಿಮಾಗಳನ್ನು ಸಹ ಮಾಡುತ್ತಿದ್ದಾರೆ. ನಿರ್ಮಾಪಕರಾಗಿ ಸಿನಿಮಾದ ಕಷ್ಟ ಸುಖಗಳನ್ನು ಅವರು ಕಲಿಯುತ್ತಿದ್ದಾರೆ, ಅವರು ಇದನ್ನು ಹೀಗೆಯ ಮುಂದುವರೆಸಲಿ, ಒಳ್ಳೆಯ ಸಿನಿಮಾಗಳನ್ನು ಮಾಡಲಿ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ