AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಪ್ರೇಯಸಿಗಾಗಿ 10 ಕೋಟಿ ಬೆಲೆಯ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

ಹೊಸ ಪ್ರೇಯಸಿಗಾಗಿ 10 ಕೋಟಿ ಬೆಲೆಯ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

ಪೃಥ್ವಿಶಂಕರ
|

Updated on: Mar 15, 2026 | 9:36 PM

Share

Hardik Pandya Buys Ferrari 12 Cilindri: ಹಾರ್ದಿಕ್ ಪಾಂಡ್ಯ ದುಬಾರಿ ಫೆರಾರಿ 12 ಸಿಲಿಂಡ್ರಿ ಕಾರು ಖರೀದಿಸಿದ್ದಾರೆ. 10 ಕೋಟಿ ರೂ. ಬೆಲೆಯ ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಕಪ್ಪು ಬಣ್ಣದ್ದಾಗಿದ್ದು, V12 ಎಂಜಿನ್ ಹೊಂದಿದೆ. ಪ್ರೇಯಸಿ ಮಹಿಕಾ ಶರ್ಮಾ ಜೊತೆ ಕಾರು ಚಾಲನೆ ಮಾಡುವ ವಿಡಿಯೋ ವೈರಲ್ ಆಗಿದೆ. ಪಾಂಡ್ಯ ಅವರ ವಿಶಾಲವಾದ ಕಾರ್ ಕಲೆಕ್ಷನ್‌ಗೆ ಇದು ಹೊಸ ಸೇರ್ಪಡೆಯಾಗಿದೆ, ಇದು ಅವರ ಕಾರು ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

2026 ರ ಟಿ20 ವಿಶ್ವಕಪ್ ಗೆದ್ದು, ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿರುವ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿಯೊಂದಿಗೆ ಹೊಸ ಕಾರನ್ನು ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೊಸ ಕಾರಿನ ಬೆಲೆ 10 ಕೋಟಿ ಗೂ. ಅಧಿಕ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಫೆರಾರಿ 12 ಸಿಲಿಂಡ್ರಿ ಎಂಬ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ಇದರ ಆನ್​- ರೋಡ್ ಬೆಲೆ 10 ಕೋಟಿ ರೂ. ಎಂದು ಹೇಳಲಾಗುತ್ತದೆ. ಈ ಕಾರು ಕಪ್ಪು ಬಣ್ಣದ್ದಾಗಿದ್ದು, V12 ಎಂಜಿನ್, ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಹಾರ್ದಿಕ್ ಈ ಹೊಸ ಕಾರನ್ನು ಚಲಾಯಿಸುತ್ತಿದ್ದು, ಅವರ ಪಕ್ಕದಲ್ಲಿ ಮಹಿಕಾ ಶರ್ಮಾ ಇರುವುದನ್ನು ಕಾಣಬಹುದು.

ಹಾರ್ದಿಕ್ ಪಾಂಡ್ಯಗೆ ಕಾರಿನ ವ್ಯಾಮೋಹ ಹೆಚ್ಚು. ಅವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಆಡಿ A6, ರೇಂಜ್ ರೋವರ್ ವೋಗ್, ಲಂಬೋರ್ಘಿನಿ ಉರಸ್ SE, ಮತ್ತು ಮರ್ಸಿಡಿಸ್-ಬೆನ್ಜ್ ಸೇರಿದಂತೆ ಹಲವು ದುಬಾರಿ ಬೆಲೆಯ ಐಷರಾಮಿ ಕಾರುಗಳಿವೆ. ಇತ್ತೀಚೆಗೆ, ಅವರು ತಮ್ಮ ಮಗ ಅಗಸ್ತ್ಯನಿಗೆ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು, ಇದರ ಬೆಲೆ ಸುಮಾರು 4 ಕೋಟಿ ರೂ. ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us