AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

Sukanya Samriddhi Yojana details: ಸ್ಮಾಲ್ ಸೇವಿಂಗ್ಸ್ ಸ್ಕೀಮ್ ಆದ ಸುಕನ್ಯಾ ಸಮೃದ್ದಿ ಯೋಜನೆ ಹೆಣ್ಮಕ್ಕಳಿಗೆಂದು ರೂಪಿಸಲಾಗಿದೆ. 15 ವರ್ಷ ಪಾವತಿ ಅವಧಿ. 21 ವರ್ಷ ಮೆಚ್ಯೂರಿಟಿ ಅವಧಿ ಇರುವ ಸ್ಕೀಮ್​ನಲ್ಲಿ ಸದ್ಯ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ. 10 ವರ್ಷದೊಳಗಿನ ಯಾವುದೇ ಬಾಲಕಿಯ ಹೆಸರಿನಲ್ಲಿ ಈ ಸ್ಕೀಮ್ ಅಡಿಯಲ್ಲಿ ಅಕೌಂಟ್ ತೆರೆಯಬಹುದು.

ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ
ಸುಕನ್ಯಾ ಸಮೃದ್ಧಿ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2026 | 2:54 PM

Share

ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ದಿ ಸ್ಕೀಮ್ (Sukanya Samriddhi Yojana) ಒಂದು. ಮಹಿಳೆಯರಿಗೆಂದು ಇರುವ ಕೆಲವೇ ಸ್ಕೀಮ್​ಗಳಲ್ಲಿ ಇದೂ ಒಂದು. ಹಾಗೆಯೇ, ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ಪೈಕಿ ಅತಿಹೆಚ್ಚು ಬಡ್ಡಿ ನೀಡುವ ಯೋಜನೆಗಳಲ್ಲೂ ಇದು ಇದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡುವ ಹೂಡಿಕೆ ಮೆಚ್ಯೂರಿಟಿ ಆಗಲು ಕನಿಷ್ಠ 15 ವರ್ಷ ಆಗುವುದರಿಂದ, ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ ಸ್ಕೀಮ್ ಇದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆಯ ಸ್ಕೀಮ್ ಅನ್ನು ಯಾವುದಾದರೂ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ಪಡೆಯಬಹುದು. ನಿಮಗೆ ಹೆಣ್ಮಗು ಇದ್ದು ಅವಳ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇದ್ದರೆ, ಆಕೆಯ ಹೆಸರಿನಲ್ಲಿ ಇದರ ಅಕೌಂಟ್ ತೆರೆಯಬಹುದು.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ವರ್ಷಕ್ಕೆ ಕನಿಷ್ಠ ಹೂಡಿಕೆ 250 ರೂ ಮಾತ್ರವೇ ಇರುವುದು. ಗರಿಷ್ಠ ಹೂಡಿಕೆ ವರ್ಷಕ್ಕೆ 1.5 ಲಕ್ಷ ರೂಗೆ ಸೀಮಿತವಾಗಿರುತ್ತದೆ. ಹೂಡಿಕೆ ಅವಧಿ 15 ವರ್ಷ ಇರುತ್ತದೆ. ಬಾಲಕಿಯ ವಯಸ್ಸು 21 ವರ್ಷ ದಾಟಿದಾಗ ಹೂಡಿಕೆ ಮೆಚ್ಯೂರಿಟಿಗೆ ಬರುತ್ತದೆ. ಉದಾಹರಣೆಗೆ, ಬಾಲಕಿ ವಯಸ್ಸು 1 ವರ್ಷ ಇದ್ದಾಗ ನೀವು ಈ ಅಕೌಂಟ್ ತೆರೆದು 15 ವರ್ಷ ಹಣ ಕಟ್ಟುತ್ತೀರಿ. ನಂತರ ಕಟ್ಟಬೇಕಿಲ್ಲ. ಬಾಲಕಿಯ ವಯಸ್ಸು 21 ವರ್ಷ ಪೂರ್ಣಗೊಳ್ಳುವವರೆಗೂ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಮುಂದುವರಿಯುತ್ತಾ ಇರುತ್ತದೆ. 21 ವರ್ಷ ವಯಸ್ಸಿನ ನಂತರ ಅಕೌಂಟ್​ನಿಂದ ಹಣ ಪೂರ್ಣ ಹಿಂಪಡೆಯಬಹುದು.

ಬಾಲಕಿಯ ವಯಸ್ಸು 18 ವರ್ಷ ಪೂರ್ಣಗೊಂಡಾಗ ಪಾಕ್ಷಿಕವಾಗಿ ಹಣ ಹಿಂಪಡೆಯಲು ಅವಕಾಶ ಇರುತ್ತದೆ. ಆಕೆಯ ಶಿಕ್ಷಣ ಅಥವಾ ಮದುವೆ ವೆಚ್ಚಕ್ಕೆ ಶೇ. 50ರಷ್ಟು ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ತಿಂಗಳಿಗೆ 1,000 ರೂ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್?

ಸುಕನ್ಯಾ ಸಮೃದ್ಧಿ ಯೋಜನೆಯ ಅಕೌಂಟ್​ಗೆ ನೀವು ತಿಂಗಳಿಗೆ 1,000 ರೂಗಳಂತೆ ಠೇವಣಿ ಇಡುತ್ತಾ ಹೋದರೆ, ಅಂದರೆ ವರ್ಷಕ್ಕೆ 12,000 ರೂ ಹೂಡಿಕೆ ಮಾಡುತ್ತಾ ಹೋದರೆ, ಆಗ 15 ವರ್ಷದಲ್ಲಿ ನೀವು ಪಾವತಿಸುವ ಹಣ 1.8 ಲಕ್ಷ ರೂ ಆಗಿರುತ್ತದೆ. ಸದ್ಯ ಇರುವ ಶೇ. 8.2 ಬಡ್ಡಿಯೇ ಮುಂದುವರಿಯುತ್ತದೆ ಎಂದು ಪರಿಗಣಿಸಿ ಲೆಕ್ಕ ಮಾಡಿದರೆ 21 ವರ್ಷದ ಬಳಿಕ 3.74 ಲಕ್ಷ ರೂ ಬಡ್ಡಿ ಸೇರಿ ಒಟ್ಟು ಸಿಗುವ ರಿಟರ್ನ್ 5,54,206 ರೂ ಆಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು