AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಹಾರ್ಮುಜ್ ಜಲಸಂಧಿ ಬಂದ್: ತೈಲ ಕೊರತೆ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಮತ್ತೆ ಆಪತ್ಭಾಂಧವ!

ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿ ಬಂದ್‌ನಿಂದ ಭಾರತದ ತೈಲ ಪೂರೈಕೆಗೆ ಆತಂಕ ಎದುರಾಗಿದೆ. ದೇಶವು ಕೇವಲ 25 ದಿನಗಳ ತೈಲ ಸಂಗ್ರಹ ಹೊಂದಿರುವಾಗ, ಭಾರತಕ್ಕೆ ರಷ್ಯಾ ಹೆಚ್ಚುವರಿ 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪೂರೈಸಲು ಸಿದ್ಧವಾಗಿದೆ. ಇದು ಮಧ್ಯಪ್ರಾಚ್ಯದಿಂದಾಗುವ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಿ, ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ.

ಇರಾನ್ ಹಾರ್ಮುಜ್ ಜಲಸಂಧಿ ಬಂದ್: ತೈಲ ಕೊರತೆ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಮತ್ತೆ ಆಪತ್ಭಾಂಧವ!
ತೈಲ ಕೊರತೆ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಮತ್ತೆ ಆಪತ್ಭಾಂಧವ!Image Credit source: TV9 Network
ಗಣಪತಿ ಶರ್ಮಾ
|

Updated on:Mar 04, 2026 | 6:48 PM

Share

ನವದೆಹಲಿ, ಮಾರ್ಚ್​ 4: ಇರಾನ್-ಇಸ್ರೇಲ್ ಸೇನಾ ಸಂಘರ್ಷದ (Iran Isreal Conflict) ಕಾರಣ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಇದರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮೇಲೂ ಆಗಿದೆ. ಇರಾನ್ ಹಾರ್ಮುಜ್ ಜಲಸಂಧಿ ಬಂದ್ ಮಾಡಿರುವ ಕಾರಣ ಕಚ್ಚಾ ತೈಲ ಪೂರೈಕೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಸಿದ್ಧವಾಗಿದೆ ಎಂದು ವರದಿಯಾಗಿದೆ. ಉದ್ಯಮ ವಲಯದ ಮೂಲಗಳ ಪ್ರಕಾರ, ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಸಮೀಪದಲ್ಲಿರುವ ಹಡಗುಗಳಲ್ಲಿ ಲಭ್ಯವಿದ್ದು, ಇದು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಈ ಮೂಲಕ ಮಧ್ಯಪ್ರಾಚ್ಯದಿಂದ ಉಂಟಾದ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಸಾಧ್ಯವಾಗಬಹುದು ಎನ್ನಲಾಗಿದೆ.

ಭಾರತವು ಪ್ರಸ್ತುತ ಕೇವಲ 25 ದಿನಗಳ ಬೇಡಿಕೆಗೆ ತಕ್ಕಷ್ಟು ಕಚ್ಚಾ ತೈಲ ಸಂಗ್ರಹ ಹೊಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಇತರೆ ಇಂಧನಗಳ ಸಂಗ್ರಹವೂ ಸೀಮಿತವಾಗಿದೆ. ಹೀಗಾಗಿ ಭಾರತಕ್ಕೆ ಪೂರೈಕೆ ಆತಂಕ ಎದುರಾಗಿದೆ.

ಭಾರತದ ಸುಮಾರು ಶೇಕಡಾ 40ರಷ್ಟು ಕಚ್ಚಾ ತೈಲ ಆಮದು ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಇದು ಬಂದ್ ಆಗಿರುವುದರಿಂದ ಭಾರತ ಪರ್ಯಾಯ ಮೂಲಗಳನ್ನು ಹುಡುಕಲು ಮುಂದಾಗಿದೆ. ಭಾರತೀಯ ರಿಫೈನರಿಗಳು ದಿನಕ್ಕೆ ಸುಮಾರು 5.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತಿವೆ.

ರಷ್ಯಾದಿಂದ ಕಚ್​ಚಾ ತೈಲ ಆಮದು ಕಡಿಮೆ ಮಾಡಿದ್ದ ಭಾರತ

ಉದ್ಯಮ ಮೂಲಗಳ ಪ್ರಕಾರ, ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ ಶೇಕಡಾ 40 ರವರೆಗೆ ಪೂರೈಸಲು ರಷ್ಯಾ ಸಿದ್ಧವಿದೆ. ಜನವರಿಯಲ್ಲಿ ರಷ್ಯಾದಿಂದ ಭಾರತಕ್ಕೆ ಪ್ರತಿ ದಿನ ಸುಮಾರು 1.1 ಮಿಲಿಯನ್ ಬ್ಯಾರೆಲ್ ಆಮದು ಮಾಡಲಾಗಿತ್ತು. ಅದು 2022 ರ ನವೆಂಬರ್ ನಂತರದ ಕನಿಷ್ಠ ಮಟ್ಟವಾಗಿತ್ತು. ಆದರೆ ಫೆಬ್ರವರಿಯಲ್ಲಿ ಈ ಪ್ರಮಾಣವು ಮತ್ತೆ 30 ಶೇಕಡಾ ಮಟ್ಟಕ್ಕೆ ಏರಿಕೆಯಾಗಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ರಷ್ಯಾ ತೈಲ ಖರೀದಿಗೆ ಅಡ್ಡಿಯಾಗಿದ್ದ ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ

ಭಾರತೀಯ ತೈಲ ಸಂಸ್ಕರಣಾಗಾರಗಳು ರಷ್ಯಾದ ತೈಲ ಮಾರಾಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ, ಆಮದು ಪ್ರಮಾಣ ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳೂ ಈ ನಿರ್ಧಾರಕ್ಕೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇರಾನ್ ಹಾರ್ಮುಜ್ ಜಲಸಂಧಿ ಮುಚ್ಚಿದ ಪರಿಣಾಮ: ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿದ ಭಾರತದ 37 ಹಡಗು

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ತೈಲ ಖರೀದಿಯನ್ನು ನಿಲ್ಲಿಸುವ ಭರವಸೆ ನೀಡಿದೆ ಎಂದು ಹೇಳಿದ್ದರು. ಆದರೆ, ಭಾರತ ಮಾತ್ರ ತನ್ನ ತೈಲ ಖರೀದಿ ತಂತ್ರವು ಮಾರುಕಟ್ಟೆ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಆಧಾರದಲ್ಲಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಇನ್ನೂ ಕೆಲವು ದಿನಗಳ ಮಟ್ಟಿಗೆ ಹೀಗೆಯೇ ಮುಂದುವರಿದರೆ, ಭಾರತ ತನ್ನ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಪರ್ಯಾಯ ಪೂರೈಕೆ ಮಾರ್ಗಗಳನ್ನು ವಿಸ್ತರಿಸುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:36 pm, Wed, 4 March 26

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು