AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಭೇಟಿ ವೇಳೆಯೇ ಇರಾನ್ ಮೇಲೆ ದಾಳಿಗೆ ನಡೆದಿತ್ತಾ ಪ್ಲಾನ್? ಸೀಕ್ರೆಟ್ ಬಯಲು ಮಾಡಿದ ಇಸ್ರೇಲ್

ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸದಲ್ಲಿದ್ದಾಗಲೇ ಇರಾನ್ ಮೇಲೆ ದಾಳಿಗೆ ಪ್ಲಾನ್ ಆಗಿತ್ತಾ? ಅದು ಮೋದಿಗೂ ತಿಳಿದಿತ್ತಾ? ಇಂಥ ಚರ್ಚೆಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಲ್ಲಿವೆ. ವಿಶೇಷವೆಂದರೆ, ಅಸಲಿಗೆ ಮೋದಿ ಭೇಟಿ ಸಂದರ್ಭದಲ್ಲಿ ಇಸ್ರೇಲ್​ಗೇ ಇರಾನ್ ಮೇಲಿನ ದಾಳಿ ಬಗ್ಗೆ ಗೊತ್ತಿರಲಿಲ್ಲವಂತೆ! ಹೀಗೆಂದಿದ್ದು ಮತ್ಯಾರೂ ಅಲ್ಲ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ. ದಾಳಿ ಹಿಂದಿನ ರಹಸ್ಯವನ್ನು ಅವರು ಬಯಲು ಮಾಡಿದ್ದು, ಆ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ ಭೇಟಿ ವೇಳೆಯೇ ಇರಾನ್ ಮೇಲೆ ದಾಳಿಗೆ ನಡೆದಿತ್ತಾ ಪ್ಲಾನ್? ಸೀಕ್ರೆಟ್ ಬಯಲು ಮಾಡಿದ ಇಸ್ರೇಲ್
ಬೆಂಜಮಿನ್ ನೆತನ್ಯಾಹು ಹಾಗೂ ಪ್ರಧಾನಿ ಮೋದಿImage Credit source: TV9 Network
ಗಣಪತಿ ಶರ್ಮಾ
|

Updated on: Mar 04, 2026 | 2:32 PM

Share

ನವದೆಹಲಿ, ಮಾರ್ಚ್​ 4: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ (Iran) ಮೇಲೆ ಸೇನಾ ದಾಳಿ ನಡೆಸುವುದಕ್ಕೂ ಎರಡು ದಿನ ಮುನ್ನ ಪ್ರಧಾನಿ ನರೇಂದ್ರ ಮೋದಿ (Naendra Modi) ಇಸ್ರೇಲ್ ಪ್ರವಾಸದಲ್ಲಿದ್ದರು. ಇದು ಬಹಳಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ದಾಳಿ ನಡೆಸಲು ಮೋದಿ ಭೇಟಿ ವೇಳೆಯೇ ಇಸ್ರೇಲ್ ಸಿದ್ಧತೆ ನಡೆಸಿಕೊಂಡಿತ್ತಾ? ಇರಾನ್ ಮೇಲಿನ ದಾಳಿ ಕುರಿತು ಮೋದಿ ಜೊತೆ ಚರ್ಚಿಸಿತ್ತಾ? ಈ ರೀತಿಯ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡಿದ್ದವು. ಈಗ ಅವುಗಳಿಗೆ ಸ್ಪಷ್ಟನೆ ದೊರೆತಿದೆ. ಖುದ್ದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಸ್ಪಷ್ಟನೆ ನೀಡಿದ್ದಾರೆ.

ಇಸ್ರೇಲ್ ರಾಯಭಾರಿ ಹೇಳಿದ್ದೇನು?

ಇರಾನ್ ಮೇಲೆ ದಾಳಿ ನಡೆಸುವ ಕುರಿತು ಮೋದಿ ಇಸ್ರೇಲ್ ಭೇಟಿ ವೇಳೆ ನಮಗೇ ಗೊತ್ತಿರಲಿಲ್ಲ. ಮೋದಿ ನಿರ್ಗಮಿಸಿದ ನಂತರವೇ ಸೇನಾ ಕಾರ್ಯಾಚರಣೆಯ ಅವಕಾಶದ ಬಗ್ಗೆ ಚರ್ಚೆಯಾಗಿತ್ತು. ಮೋದಿ ಭೇಟಿ ವೇಳೆ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದೇವೆಯೇ ಹೊರತು ಇನ್ನೇನೂ ಚರ್ಚೆ ಆಗಿಲ್ಲ. ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾವು ಬೇರೆಯವರೊಂದಿಗೆ ಮಾಹಿತಿ ಹಂಚಿಕೊಳ್ಳುವುದು ಸಾಧ್ಯವೇ ಎಂದು ಇಸ್ರೇಲ್ ರಾಯಭಾರಿ ರುವೆನ್ ಅಜರ್ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್​’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೋದಿ ಭಾರತಕ್ಕೆ ತೆರಳಿದ ನಂತರ, ಇರಾನ್ ಮೇಲೆ ದಾಳಿ ಮಾಡುವ ನಿರ್ಧಾರ ತೆಗೆದುಕೊಳ್ಳಲು ಎರಡು ದಿನಗಳು ಬೇಕಾಯಿತು. ಶನಿವಾರ (ಫೆಬ್ರವರಿ 28) ಬೆಳಿಗ್ಗೆ ದಾಳಿ ನಡೆಸುವ ಬಗ್ಗೆ ಸಂಪುಟದ ಭದ್ರತಾ ಸಮಿತಿಯ ಅನುಮೋದನೆ ಪಡೆಯಲಾಯಿತು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 25 ಮತ್ತು 26 ರಂದು ಪ್ರಧಾನಿ ಮೋದಿ ಇಸ್ರೇಲ್​ಗೆ ಎರಡು ದಿನಗಳ ಭೇಟಿ ನೀಡಿದ್ದರು. ದಶಕಗಳ ರಾಜತಾಂತ್ರಿಕ ನಿರ್ಬಂಧವನ್ನು ಕೊನೆಗೊಳಿಸಿ ಭಾರತ-ಇಸ್ರೇಲ್ ಸಂಬಂಧಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದ ಸಂದರ್ಭ 2017 ರಲ್ಲಿ ಮೋದಿ ಅಲ್ಲಿಗೆ ಭೇಟಿ ನೀಡಿದ್ದರು. ಅದಾದ ನಂತರ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ್ದು ಇದೇ ಮೊದಲು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆಗಿನ ಮಾತುಕತೆಯ ನಂತರ ಎರಡೂ ದೇಶಗಳು 17 ಒಪ್ಪಂದಗಳಿಗೆ ಸಹಿ ಹಾಕಿವೆ.

ಇದನ್ನೂ ಓದಿ:ಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ಇದೆಲ್ಲ ಆಗಿ ಮೋದಿ ಭಾರತಕ್ಕೆ ಬಂದ ನಂತರ ಫೆಬ್ರವರಿ 28 ರಂದು, ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್ ಮೇಲೆ ದಾಳಿ ಮಾಡಿವೆ. ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಈಗಲೂ ಮುಂದುವರಿಯುತ್ತಿದೆ. ಅಣ್ವಸ್ತ್ರ ಸಂಬಂಧಿತ ಮಾತುಕತೆ ಸ್ಥಗಿತಗೊಂಡ ನಂತರ ಮತ್ತು ಇರಾನ್ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂಬ ಹೇಳಿಕೆಯ ನಂತರ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಸಲಾದ ಜಂಟಿ ಕಾರ್ಯಾಚರಣೆ ಆರಂಭವಾಯಿತು. ಇರಾನ್ ಮೇಲಿನ ಸೇನಾ ದಾಳಿಯಲ್ಲಿ ಈವರೆಗೆ 700 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ