AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಭಾರತ ಮಂಟಪದಲ್ಲಿ ನಾಳೆ ಯುಪಿಎಸ್‌ಸಿ ಶತಮಾನೋತ್ಸವ; ಪ್ರಧಾನಿ ನರೇಂದ್ರ ಮೋದಿ ಭಾಗಿ

ಭಾರತದ ಮೊದಲ ಸಾರ್ವಜನಿಕ ಸೇವಾ ಆಯೋಗ 1926ರಲ್ಲಿ ಸ್ಥಾಪನೆಯಾಯಿತು. ಯುಪಿಎಸ್​ಸಿ ಅಕ್ಟೋಬರ್ 1ರಂದು ತನ್ನ ಶತಮಾನೋತ್ಸವ ಪೂರೈಸಲಿದೆ. ಈ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭವು ನಾಳೆ ನವದೆಹಲಿಯ ‘ಭಾರತ ಮಂಟಪ’ದಲ್ಲಿ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಯುಪಿಎಸ್‌ಸಿ ಶತಮಾನೋತ್ಸವದ ಸ್ಮಾರಕ ನಾಣ್ಯ, ವಿಶೇಷ ಅಂಚೆ ಚೀಟಿ ಹಾಗೂ ವಿಶೇಷ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ.

ದೆಹಲಿಯ ಭಾರತ ಮಂಟಪದಲ್ಲಿ ನಾಳೆ ಯುಪಿಎಸ್‌ಸಿ ಶತಮಾನೋತ್ಸವ; ಪ್ರಧಾನಿ ನರೇಂದ್ರ ಮೋದಿ ಭಾಗಿ
ಪ್ರಧಾನಮಂತ್ರಿ ನರೇಂದ್ರ ಮೋದಿImage Credit source: PTI
ಸುಷ್ಮಾ ಚಕ್ರೆ
|

Updated on: Sep 30, 2026 | 5:59 PM

Share

ನವದೆಹಲಿ, ಸೆಪ್ಟೆಂಬರ್ 30: ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (ಯುಪಿಎಸ್​ಸಿ) ಶತಮಾನೋತ್ಸವ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಅಕ್ಟೋಬರ್ 1) ನವದೆಹಲಿಯ ಭಾರತ ಮಂಟಪದಲ್ಲಿ ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಸಂದರ್ಭವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಈ ವೇಳೆ ಅವರು ಯುಪಿಎಸ್‌ಸಿ ಶತಮಾನೋತ್ಸವದ ಸ್ಮಾರಕ ನಾಣ್ಯ, ವಿಶೇಷ ಅಂಚೆ ಚೀಟಿ ಹಾಗೂ ‘ಭಾರತದಲ್ಲಿ ಯುಪಿಎಸ್‌ಸಿ ಮತ್ತು ಲೋಕ ಸೇವಾ ಆಯೋಗಗಳ ನೀತಿಗಳನ್ನು ರೂಪಿಸಿರುವ 100 ಹೆಗ್ಗುರುತು ತೀರ್ಪುಗಳು’ ಎಂಬ ವಿಶೇಷ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

1926ರಲ್ಲಿ ಯುಪಿಎಸ್‌ಸಿ ಸ್ಥಾಪನೆಯಾಗಿದ್ದು, ಇದೀಗ 100 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ಅಕ್ಟೋಬರ್ 1 ರಂದು ಆರಂಭವಾಗಿದ್ದ ವರ್ಷಪೂರ್ತಿಯ ಆಚರಣೆಯು ಈ ಸಮಾರೋಪ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.

ರಾಜ್ಯಗಳ ಲೋಕಸೇವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಯುಪಿಎಸ್‌ಸಿ ಅಧಿಕಾರಿಗಳು ಮತ್ತು ಇತರರು ಸೇರಿದಂತೆ ದೇಶಾದ್ಯಂತದ ಹಲವು ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ರಾಜ್ಯದ ರೈತರಿಗೆ ಸಿಹಿಸುದ್ದಿ​​ ನೀಡಿ ಮೋದಿ ಸರ್ಕಾರ: ಬೆಂಬಲ ಬೆಲೆ ಯೋಜನೆಯಡಿ ಭರ್ಜರಿ ಬೆಳೆ ಖರೀದಿ, ಜೋಶಿ ಧನ್ಯವಾದ

ಯುಪಿಎಸ್‌ಸಿ ಆಯೋಜಿಸಿರುವ ಎರಡು ದಿನಗಳ ಈ ಬೃಹತ್ ಕಾರ್ಯಕ್ರಮವು ಇಂದಿನಿಂದ ನಾಳೆಯವರೆಗೆ ನಡೆಯಲಿದೆ. ಇಂದು ಭಾರತ್ ಮಂಟಪದಲ್ಲಿ ‘ಶತಾಬ್ದಿ ಸಮರೋಹ್ – ಮಂಥನ’ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಭಾಷಣಕಾರರ ಭಾಷಣಗಳು ನಡೆಯಲಿವೆ. ನಂತರ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಲಾರ್ಡ್ ಲೀ ಅಧ್ಯಕ್ಷತೆಯ ‘ರಾಯಲ್ ಕಮಿಷನ್ ಆನ್ ದಿ ಸುಪೀರಿಯರ್ ಸಿವಿಲ್ ಸರ್ವಿಸಸ್ ಇನ್ ಇಂಡಿಯಾ’ ಶಿಫಾರಸಿನ ಮೇರೆಗೆ 1926ರ ಅಕ್ಟೋಬರ್ 1ರಂದು ಮೊದಲ ಸಾರ್ವಜನಿಕ ಸೇವಾ ಆಯೋಗವನ್ನು ಸ್ಥಾಪಿಸಲಾಯಿತು. ಸರ್ ರೌಸ್ ಬಾರ್ಕರ್ ಇದರ ಮೊದಲ ಅಧ್ಯಕ್ಷರಾಗಿದ್ದರು. ಭಾರತ ಸರ್ಕಾರದ ಕಾಯ್ದೆ 1935ರ ಪ್ರಕಾರ ಇದನ್ನು ‘ಫೆಡರಲ್ ಪಬ್ಲಿಕ್ ಸರ್ವಿಸ್ ಕಮಿಷನ್’ ಎಂದು ಮರು ನಾಮಕರಣ ಮಾಡಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಇದು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್​ಸಿ) ಎಂದು ಬದಲಾಯಿತು. 1950ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದಾಗ ಯುಪಿಎಸ್‌ಸಿಗೆ ಅಧಿಕೃತ ಸಂವಿಧಾನಾತ್ಮಕ ಸಂಸ್ಥೆಯ ಸ್ಥಾನಮಾನ ದೊರೆಯಿತು.

ಇದನ್ನೂ ಓದಿ: ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ ಎಂದ ಪ್ರಲ್ಹಾದ್ ಜೋಶಿ: ಸಮಸ್ಯೆಗಳ ಬಗ್ಗೆ ಚರ್ಚೆಗೆ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಸೇವೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂದರ್ಶನಗಳ ಮೂಲಕ ನೇರ ನೇಮಕಾತಿ ಮಾಡುವುದು, ಸಿವಿಲ್ ಸೇವಕರ ಬಡ್ತಿ, ನಿಯೋಜನೆ, ವರ್ಗಾವಣೆ, ನೇಮಕಾತಿ ನಿಯಮಗಳು ಮತ್ತು ಶಿಸ್ತು ಕ್ರಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಅಗತ್ಯ ಸಲಹೆ ನೀಡುವುದು ಯುಪಿಎಸ್​ಸಿಯ ಜವಾಬ್ದಾರಿ. ಯುಪಿಎಸ್‌ಸಿ ನಡೆಸುವ ಅತ್ಯಂತ ಪ್ರಮುಖ ಪರೀಕ್ಷೆಯೆಂದರೆ ‘ಸಿವಿಲ್ ಸರ್ವಿಸಸ್ ಎಕ್ಸಾಮಿನೇಷನ್’. ಇದರ ಜೊತೆಗೆ ಎಂಜಿನಿಯರಿಂಗ್ ಸೇವೆಗಳು, ಸಂಯೋಜಿತ ರಕ್ಷಣಾ ಸೇವೆಗಳು (ಸಿಡಿಎಸ್), ಎನ್‌ಡಿಎ (ಎನ್​ಡಿಎ), ಮೆಡಿಕಲ್ ಸರ್ವಿಸಸ್, ಸಿಎಪಿಎಫ್ (ಸಿಎಪಿಎಫ್), ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್​ಎಸ್​) ಪರೀಕ್ಷೆಗಳನ್ನು ಯುಪಿಎಸ್‌ಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More