AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್

Finn Allen Records; ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 169 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಫಿನ್ ಅಲೆನ್ ಸ್ಫೋಟಕ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ 12.5 ಎಸೆತಗಳಲ್ಲಿ ಗುರಿ ಮುಟ್ಟುವ ಮೂಲಕ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Mar 05, 2026 | 7:54 AM

Share
ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿ ನ್ಯೂಝಿಲೆಂಡ್ ದಾಂಡಿಗ ಫಿನ್ ಅಲೆನ್ (Finn Allen) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಬಾರಿಸಿದ ಈ ಭರ್ಜರಿ ಶತಕದೊಂದಿಗೆ ಹಲವು ವಿಶ್ವ ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಆ ಎಲ್ಲಾ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

1 / 12

 ಅತಿ ವೇಗದ ಶತಕ: ಟಿ20 ವಿಶ್ವಕಪ್​ ಇತಿಹಾಸದಲ್ಲೇ ಅತೀ ವೇಗದ ಶತಕದ ಸಿಡಿಸಿದ ದಾಖಲೆ ಫಿನ್ ಅಲೆನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (47 ಎಸೆತ) ಹೆಸರಿನಲ್ಲಿತ್ತು. ಇದೀಗ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿ ಅಲೆನ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 12
ಮೊದಲ ಶತಕ: ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್​ನಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಫಿನ್ ಅಲೆನ್ ಪಾತ್ರರಾಗಿದ್ದಾರೆ.

3 / 12
ಅತಿ ವೇಗದ ಅರ್ಧಶತಕ: ಟಿ20 ವಿಶ್ವಕಪ್​ನ ನಾಕೌಟ್ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ಅಲೆನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಯುವರಾಜ್ ಸಿಂಗ್ (20 ಎಸೆತಗಳು) ಹೆಸರಿನಲ್ಲಿತ್ತು. ಇದೀಗ ಕೇವಲ 19 ಎಸೆತಗಳಲ್ಲಿ 50 ರನ್ ಪೂರೈಸುವ ಮೂಲಕ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.

4 / 12
 ಅತಿ ವೇಗದ ಟಿ20 ಶತಕ: ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ಅವರ ವಿಶ್ವ ದಾಖಲೆಯನ್ನು ಫಿನ್ ಅಲೆನ್ 33 ಎಸೆತಗಳಲ್ಲಿ ಅಳಿಸಿ ಹಾಕಿದ್ದಾರೆ.

5 / 12
ಅತಿ ಹೆಚ್ಚು ಸಿಕ್ಸರ್: ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆಯನ್ನು ಅಲೆನ್ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 20 ಸಿಕ್ಸರ್ ಸಿಡಿಸುವ ಮೂಲಕ ಶಿಮ್ರಾನ್ ಹೆಟ್ಮೆಯರ್ (19 ಸಿಕ್ಸರ್​) ಅವರ ದಾಖಲೆಯನ್ನು ಮುರಿದಿದ್ದಾರೆ.

6 / 12
ಸ್ಫೋಟಕ ಶತಕ: ನ್ಯೂಝಿಲೆಂಡ್ ಪರ ಅತಿ ವೇಗದ ಟಿ20 ಶತಕ ಸಿಡಿಸಿದ ದಾಖಲೆಯನ್ನು ಕೂಡ ಫಿನ್ ಅಲೆನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಗ್ಲೆನ್ ಫಿಲಿಪ್ಸ್ (46 ಎಸೆತ) ಹೆಸರಿನಲ್ಲಿತ್ತು. ಇದೀಗ 33 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

7 / 12
ಬೌಂಡರಿಗಳ ದಾಖಲೆ: ಈ ಪಂದ್ಯದಲ್ಲಿ ಫಿನ್ ಅಲೆನ್ ಒಟ್ಟು 18 ಬೌಂಡರಿಗಳನ್ನು (10 ಫೋರ್ ಮತ್ತು 8 ಸಿಕ್ಸರ್‌ಗಳು) ಬಾರಿಸಿದ್ದರು. ಈ ಮೂಲಕ ಟಿ20 ವಿಶ್ವಕಪ್​ ಇನಿಂಗ್ಸ್​ನಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ  ಬ್ರೆಂಡನ್ ಮೆಕಲಮ್ (18) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

8 / 12
88 ರನ್​ಗಳ ದಾಖಲೆ: ಈ ಮ್ಯಾಚ್​ನಲ್ಲಿ ಫಿನ್ ಅಲೆನ್ ಸಿಕ್ಸ್​-ಫೋರ್​ಗಳ ಮೂಲಕ ಕಲೆಹಾಕಿದ ಒಟ್ಟು ಸ್ಕೋರ್ ಬರೋಬ್ಬರಿ 88 ರನ್​ಗಳು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಬೌಂಡರಿಗಳ ಮೂಲಕ ಅತೀ ಹೆಚ್ಚು ರನ್​​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

9 / 12
ಮೂರನೇ ಶತಕ: ನ್ಯೂಝಿಲೆಂಡ್ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲೂ ಫಿನ್ ಅಲೆನ್ ಅಗ್ರಸ್ಥಾನಕ್ಕೇರಿದ್ದಾರೆ. ಅದು ಕೂಡ 3 ಶತಕ ಬಾರಿಸುವ ಮೂಲಕ ಎಂಬುದು ವಿಶೇಷ. ಅಲ್ಲದೆ ಟಿ20 ವಿಶ್ವಕಪ್​ನಲ್ಲಿ ಶತಕ ಬಾರಿಸಿದ ಮೂರನೇ ಕಿವೀಸ್ ದಾಂಡಿಗ ಎನಿಸಿಕೊಂಡಿದ್ದಾರೆ.

10 / 12
4 ಡಾಟ್​ ಬಾಲ್​: ಫಿನ್ ಅಲೆನ್ ಅವರ ಈ ಭರ್ಜರಿ ಇನಿಂಗ್ಸ್​ನಲ್ಲಿ ಕೇವಲ 4 ಡಾಟ್ ಬಾಲ್​ಗಳು ಮಾತ್ರ ಇತ್ತು. ಅಂದರೆ 33 ಎಸೆತಗಳಲ್ಲಿ ಅವರು ರನ್​ಗಳಿಸದಿರುವುದು ಕೇವಲ 4 ಎಸೆತಗಳಲ್ಲಿ ಮಾತ್ರ. ಈ ಮೂಲಕ ಟಿ20ನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಕನಿಷ್ಠ ಡಾಟ್ ಬಾಲ್​ಗಳೊಂದಿಗೆ ಗರಿಷ್ಠ ಸ್ಕೋರ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

11 / 12
ಗರಿಷ್ಠ ಸ್ಕೋರರ್: ಟಿ20 ವಿಶ್ವಕಪ್ ಇತಿಹಾಸದಲ್ಲೇ ನಾಕೌಟ್ ಪಂದ್ಯದಲ್ಲಿ ಸಿಕ್ಸ್​-ಫೋರ್​ಗಳ ಮೂಲಕವೇ ಗರಿಷ್ಠ ಸ್ಕೋರ್​ ಕಲೆಹಾಕಿದ ವಿಶ್ವ ದಾಖಲೆ ಕೂಡ ಫಿನ್ ಅಲೆನ್ ಪಾಲಾಗಿದೆ. ಈ ಪಂದ್ಯದಲ್ಲಿ 10 ಫೋರ್ ಹಾಗೂ 8 ಸಿಕ್ಸರ್​​ನೊಂದಿಗೆ ಅಲೆನ್ ಬರೋಬ್ಬರಿ 88 ರನ್ ಚಚ್ಚುವ ಮೂಲಕ ಈ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.

12 / 12
Follow Us
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ

'ಉಚಿತ ವಿದ್ಯುತ್' ಯೋಜನೆಗೆ ಸಹಿ ಹಾಕಿದ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್

Live: ಆರ್ಟ್ ಆಫ್ ಲಿವಿಂಗ್​ನಲ್ಲಿ ಪ್ರಧಾನಿ ಮೋದಿ ಭಾಷಣ, ನೇರ ಪ್ರಸಾರ

ಮೋದಿಗೆ 13ಕೆಜಿ ತೂಕದ ಬೆಳ್ಳಿ ಪ್ರತಿಮೆ ನೀಡಿ ಸನ್ಮಾನಿಸಿದ ಬಿಜೆಪಿ ನಾಯಕರು

ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಬಂದು ಮೊದಲ ಸಾಲಿನಲ್ಲೇ ಕುಳಿತ ತ್ರಿಶಾ

ಬಿಎಸ್​ವೈ ಕೈ ಹಿಡಿದು ಮಾತನಾಡಿಸಿದ ನರೇಂದ್ರ ಮೋದಿ!

ವಿಜಯ್ ಪ್ರಮಾಣವಚನ: ನಗುನಗುತ್ತಾ ಆಗಮಿಸಿದ ನಟಿ ತ್ರಿಶಾ ವಿಡಿಯೋ ವೈರಲ್

Live: ಹೆಚ್​ಎಎಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ, ನೇರ ಪ್ರಸಾರ