AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Passive Income: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?

Generating big passive income: ತಿಂಗಳಿಗೆ ಒಂದು ಲಕ್ಷ ರೂ ಪಾಸಿವ್ ಇನ್ಕಮ್ ಸೃಷ್ಟಿಸಲು ಹಲವು ಆಯ್ಕೆಗಳಿವೆ. ಫಿಕ್ಸೆಡ್ ಡೆಪಾಸಿಟ್, ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಮ್ಯುಚುವಲ್ ಫಂಡ್ ಇತ್ಯಾದಿ ಇವೆ. ಶೇ. 6ರಷ್ಟು ವಾರ್ಷಿಕ ರಿಟರ್ನ್ ಕೊಡಬಲ್ಲ ಎಫ್​ಡಿಗಳಿಂದ ನೀವು 1 ಲಕ್ಷ ರೂ ಮಾಸಿಕ ಆದಾಯ ಪಡೆಯಲು 2 ಕೋಟಿ ರೂ ಬೇಕಾಗುತ್ತದೆ. ಶೇ. 8ರಷ್ಟು ಬಡ್ಡಿ ಕೊಡುವ ಎಫ್​ಡಿಗಳಲ್ಲಿ 1.5 ಕೋಟಿ ರೂ ಇಟ್ಟರೆ ತಿಂಗಳಿಗೆ 1 ಲಕ್ಷ ರು ಇನ್ಕಮ್ ಸೃಷ್ಟಿಸಬಹುದು.

Passive Income: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2025 | 12:27 PM

Share

ನೀವು ಆರ್ಥಿಕವಾಗಿ ಸುದೃಢಗೊಳ್ಳಬೇಕೆಂದರೆ ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳಿರುವುದು ಅಗತ್ಯ. ಸ್ಯಾಲರಿ ಇತ್ಯಾದಿ ನಿಮ್ಮ ರೆಗ್ಯುಲರ್ ಇನ್ಕಮ್ ಜೊತೆಗೆ ಮನೆ ಬಾಡಿಗೆ ಇತ್ಯಾದಿ ಪಾಸಿವ್ ಇನ್ಕಮ್ ಸೃಷ್ಟಿಸಿಕೊಳ್ಳುವುದೂ ಮುಖ್ಯ. ಪ್ರತೀ ತಿಂಗಳು ನಿಮಗೆ ಕೂತಲ್ಲೇ ಒಂದು ಲಕ್ಷ ರೂ ಆದಾಯ ಬರುವಂತಾಗಲು ಏನು ಮಾಡಬಹುದು? ಇವತ್ತು ರೆಗ್ಯುಲರ್ ಇನ್ಕಮ್ ಸೃಷ್ಟಿಸಲು ಅವರವರ ರಿಸ್ಕ್​ಗೆ ಅನುಗುಣವಾಗಿ ಹಲವು ಆಯ್ಕೆಗಳಿವೆ. ಫಿಕ್ಸೆಡ್ ಡೆಪಾಸಿಟ್ (Fixed Deposit), ಡಿಜಿಟಲ್ ಗೋಲ್ಡ್, ಇಟಿಎಫ್, ಮ್ಯೂಚುವಲ್ ಫಂಡ್ ಇತ್ಯಾದಿಗಳಿವೆ.

ಫಿಕ್ಸೆಡ್ ಡೆಪಾಸಿಟ್​ನಿಂದ ತಿಂಗಳಿಗೆ ಒಂದು ಲಕ್ಷ ರೂ ಆದಾಯ ಹೇಗೆ?

ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸದವರಿಗೆ ಫಿಕ್ಸೆಡ್ ಡೆಪಾಸಿಟ್ ಒಳ್ಳೆಯ ಆಯ್ಕೆ. ಇದರಲ್ಲಿ ನೀವು ತಿಂಗಳಿಗೆ ಒಂದು ಲಕ್ಷ ರೂ ಆದಾಯ ಪಡೆಯಬೇಕೆಂದರೆ, ಶೇ. 6ರಷ್ಟು ವಾರ್ಷಿಕ ರಿಟರ್ನ್ ಕೊಡುವ ವಿವಿಧ ಡೆಪಾಸಿಟ್​ಗಳಲ್ಲಿ ಒಟ್ಟು 2 ಕೋಟಿ ರೂ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ನಿಮಗೆ ವರ್ಷಕ್ಕೆ 12 ಲಕ್ಷ ರೂ ರಿಟರ್ನ್ ಸಿಗುತ್ತದೆ.

ಇದನ್ನೂ ಓದಿ: ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್​ಡಿ ದರಗಳು

ಶೇ. 8ರಷ್ಟು ಬಡ್ಡಿ ಅಥವಾ ರಿಟರ್ನ್ ನೀಡಬಲ್ಲ ಫಿಕ್ಸೆಡ್ ಡೆಪಾಸಿಟ್ ಅಥವಾ ಇನ್ಯಾವುದಾದರೂ ಫಂಡ್​ಗಳಲ್ಲಿ ಹೂಡಿಕೆ ಮಾಡುವುದಾರೆ ತಿಂಗಳಿಗೆ ಒಂದು ಲಕ್ಷ ರೂ ಆದಾಯ ಗಳಿಸಲು ಒಂದೂವರೆ ಕೋಟಿ ರೂ ಹೂಡಿಕೆ ಸಾಕಾಗಬಹುದು.

ಪೋಸ್ಟ್ ಆಫೀಸ್​ನ ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಶೇ. 8.25 ಬಡ್ಡಿ ಸಿಗುತ್ತದೆ. ಬ್ಯಾಲನ್ಸ್ಡ್ ಹೈಬ್ರಿಡ್ ಫಂಡ್, ಈಕ್ವಿಟಿ ಸೇವಿಂಗ್ಸ್ ಫಂಡ್ ಇತ್ಯಾದಿ ಮ್ಯೂಚುವಲ್ ಫಂಡ್​ಗಳೂ ಕೂಡ ಶೇ. 8ಕ್ಕಿಂತಲೂ ಹೆಚ್ಚು ರಿಟರ್ನ್ ಕೊಡಬಲ್ಲುವು.

ಎಂದಿಗೂ ಕರಗದಂತಹ ಫಂಡ್ ಸೃಷ್ಟಿಸಿ…

ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಅವಕಾಶ ಇರುವ ಮ್ಯೂಚುವಲ್ ಫಂಡ್​ಗಳಿವೆ. ಸಾಮಾನ್ಯವಾಗಿ ನಿಮ್ಮ ಫಂಡ್​ನ ಶೇ. 4ರಿಂದ 5ರಷ್ಟು ಹಣವನ್ನು ವರ್ಷಕ್ಕೆ ವಿತ್​ಡ್ರಾ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಈ ರೇಟ್​ನಲ್ಲಿ ನೀವು ಹಣ ವಿತ್​ಡ್ರಾ ಮಾಡಿದರೆ, ಫಂಡ್​ನಲ್ಲಿರುವ ಹಣವೂ ಕೂಡ ಬತ್ತುವುದಿಲ್ಲ. ಹಲವಾರು ವರ್ಷಗಳ ಕಾಲ ನೀವು ಹಣ ವಿತ್​ಡ್ರಾ ಮಾಡಿದರೂ ಫಂಡ್ ಖಾಲಿಯಾಗುವುದೇ ಇಲ್ಲ.

ಇದನ್ನೂ ಓದಿ: ಪೋಸ್ಟ್ ಆಫೀಸ್: 20 ವರ್ಷಕ್ಕೆ 4 ಪಟ್ಟು ರಿಟರ್ನ್ ಕೊಡಬಲ್ಲ ಟಿಡಿ ಪ್ಲಾನ್

ಈ ರೀತಿ ನೀವು ತಿಂಗಳಿಗೆ 1 ಲಕ್ಷ ರೂ ವಿತ್​ಡ್ರಾ ಮಾಡುತ್ತೀರಿ ಎಂದರೆ, ನಿಮ್ಮ ಫಂಡ್​ನಲ್ಲಿ 2-3 ಕೋಟಿ ರೂ ಇರಬೇಕು. ಇಂಥ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್​ಗೆ ಯಾವುದು ಸೂಕ್ತವಾದ ಫಂಡ್? ತಜ್ಞರ ಪ್ರಕಾರ, ಯಾವುದಾದರೂ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್​ಗಳು ಅಥವಾ ಹೈಬ್ರಿಡ್ ಫಂಡ್​ಗಳು ಸೂಕ್ತವಂತೆ. ಯಾಕೆಂದರೆ, ಈ ಫಂಡ್​ಗಳು ಮಾರುಕಟ್ಟೆಯ ಅವಸ್ಥೆಗೆ ತಕ್ಕಂತೆ ಹೂಡಿಕೆಗಳನ್ನು ಬದಲಿಸುತ್ತವೆ. ಹೀಗಾಗಿ, ಮಾರುಕಟ್ಟೆ ಬಿದ್ದಾಗ ನಿಮ್ಮ ಫಂಡ್ ಪ್ರಪಾತಕ್ಕೆ ಬೀಳೋದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ