Mutual Funds
ಮ್ಯೂಚುವಲ್ ಫಂಡ್ ಎಂಬುದು ಎಂಬುದು ಹಲವು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಅದನ್ನು ಷೇರು ಮಾರುಕಟ್ಟೆ, ಸಾಲದ ಮಾರುಕಟ್ಟೆ (Debt Market) ಇತ್ಯಾದಿ ಕಡೆ ಹೂಡಿಕೆ ಮಾಡುವ ಒಂದು ಟ್ರಸ್ಟ್ ಸಂಸ್ಥೆ. ಈ ರೀತಿಯ ಹೂಡಿಕೆಗಳಿಂದ ಮ್ಯೂಚುವಲ್ ಫಂಡ್ ಸಂಸ್ಥೆ ಗಳಿಸುವ ಆದಾಯ ಅಥವಾ ಆಗುವ ನಷ್ಟ ಹೂಡಿಕೆದಾರರಿಗೂ ರವಾನೆಯಾಗುತ್ತದೆ. ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ಎಎಂಸಿ) ಈ ಮ್ಯೂಚುವಲ್ ಫಂಡ್ ಅನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಎಕ್ಸಿಸ್ ಮ್ಯೂಚುವಲ್ ಫಂಡ್, ಎಚ್ಡಿಎಫ್ಸಿ ಮ್ಯೂಚುವಲ್ ಫಂಡ್, ಎಸ್ಬಿಐ ಮ್ಯೂಚುವಲ್ ಫಂಡ್ ಹೀಗೆ ಹಲವು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿವೆ. ಒಂದೊಂದು ಎಎಂಸಿಯೂ ಕೂಡ ಒಂದಕ್ಕಿಂತ ಹೆಚ್ಚು ಮ್ಯೂಚುವಲ್ ಫಂಡ್ಗಳನ್ನು ನಿರ್ವಹಿಸಬಹುದು. ಒಂದು ಮ್ಯೂಚುವಲ್ ಫಂಡ್ನಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ ಆ ಫಂಡ್ನಲ್ಲಿ ನಿರ್ದಿಷ್ಟ ಪಾಲನ್ನು ಖರೀದಿಸಿದಂತೆ. ಆ ಫಂಡ್ ಕಂಪನಿ ಲಾಭ ಮಾಡಿದರೆ ಹೂಡಿಕೆದಾರರಿಗೆ ಅವರ ಹೂಡಿಕೆಯ ಹಣಕ್ಕೆ ಅನುಗುಣವಾಗಿ ಲಾಭ ಸಿಗುತ್ತದೆ.