Mutual Funds: ಭಾರತದ ಮ್ಯೂಚುವಲ್ ಫಂಡ್ಗಳಲ್ಲಿದೆ ಪಾಕ್ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಹಣ
AUM of India's Mutual Fund Industry crosses Rs 80 lakh crore: ಭಾರತದ ಎಲ್ಲಾ ಮ್ಯೂಚುವಲ್ ಫಂಡ್ಗಳಿಂದ ನಿರ್ವಹಿತವಾಗುತ್ತಿರುವ ಆಸ್ತಿಯ ಗಾತ್ರ 80.80 ಲಕ್ಷ ಕೋಟಿ ರೂ ಆಗಿದೆ. ಇದು ನವೆಂಬರ್ನ ಡತ್ತಾಂಶ. ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆ ಈ ಮಾಹಿತಿ ಬಿಡುಗಡೆ ಮಾಡಿದೆ. ಅಕ್ಟೋಬರ್ನಲ್ಲಿ ಇಳಿಮುಖವಾಗಿದ್ದ ಒಳಹರಿವು, ನವೆಂಬರ್ನಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

ನವದೆಹಲಿ, ಡಿಸೆಂಬರ್ 12: ಭಾರತದ ಮ್ಯುಚುವಲ್ ಫಂಡ್ (Mutual Fund) ಉದ್ಯಮದ ಗಾತ್ರ ನವೆಂಬರ್ ತಿಂಗಳಲ್ಲಿ 80 ಲಕ್ಷ ಕೋಟಿ ರೂ ಗಡಿ ದಾಟಿದೆ. ಕೆಲ ತಿಂಗಳಿಂದ ಇಳಿಮುಖಗೊಳ್ಳುತ್ತಿದ್ದ ಈಕ್ವಿಟಿ ಫಂಡ್ಗಳು ನವೆಂಬರ್ನಲ್ಲಿ ಬಹಳ ಹೆಚ್ಚು ಒಳಹರಿವು ಕಂಡಿವೆ. ಮ್ಯೂಚುವಲ್ ಫಂಡ್ ಸಂಘಟನೆಯಾದ ಎಎಂಎಫ್ಐ (AMFI- Association of Mutual Funds in India) ಬಿಡುಗಡೆ ಮಾಡಿದ ದತ್ತಂಶದ ಪ್ರಕಾರ ಭಾರತೀಯ ಮ್ಯೂಚುವಲ್ ಫಂಡ್ಗಳು ನಿರ್ವಹಿಸುತ್ತಿರುವ ಆಸ್ತಿಯ ಮೌಲ್ಯ (AUM- Asssets Under Management) 80.80 ಲಕ್ಷ ಕೋಟಿ ರೂನಷ್ಟಿದೆ.
ನವೆಂಬರ್ ತಿಂಗಳಲ್ಲಿ ಡೆಟ್ ಫಂಡ್ಗಳಿಂದ (Debt funds) ಹೊರಹೋದ ನಿವ್ವಳ ಹಣ 25,692.63 ಕೋಟಿ ರೂ. ಆದರೆ, ಈಕ್ವಿಟಿ ಫಂಡ್ಗಳಿಗೆ ಶೇ. 21ರಷ್ಟು ಹೆಚ್ಚು ಒಳಹರಿವು ಬಂದಿದೆ. ಒಟ್ಟು 29,911 ಕೋಟಿ ರೂ ಬಂಡವಾಳವನ್ನು ಈಕ್ವಿಟಿ ಫಂಡ್ಗಳು ಪಡೆದಿವೆ. ಒಟ್ಟಾರೆ ಮ್ಯೂಚುವಲ್ ಫಂಡ್ಗಳಲ್ಲಿ ನವೆಂಬರ್ನಲ್ಲಿ ಬಂದ ನಿವ್ವಳ ಒಳಹರಿವು 32,755.36 ಕೋಟಿ ರೂ. ಇದು ಒಟ್ಟು ನಿರ್ವಹಿತ ಆಸ್ತಿಯನ್ನು 80.80 ಲಕ್ಷ ಕೋಟಿ ರೂಗೆ ಏರಿಸಿದೆ.
ಇದನ್ನೂ ಓದಿ: ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆ್ಯಪಲ್ ಯೋಜನೆ: ವಿ ಅನಂತನಾಗೇಶ್ವರನ್
ಪಾಕಿಸ್ತಾನದ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಗಾತ್ರ
80.84 ಲಕ್ಷ ಕೋಟಿ ರೂ ಎಂದರೆ ಸುಮಾರು 890 ಬಿಲಿಯನ್ ಡಾಲರ್ ಆಗುತ್ತದೆ. 2025ರಲ್ಲಿ ಪಾಕಿಸ್ತಾನದ ಜಿಡಿಪಿ 410 ಬಿಲಿಯನ್ ಡಾಲರ್ ಇರುವ ಅಂದಾಜಿದೆ. ಭಾರತದ ಮ್ಯೂಚುವಲ್ ಫಂಡ್ಗಳಲ್ಲಿ ಇರುವ ಹಣವು ಪಾಕಿಸ್ತಾನದ ಜಿಡಿಪಿಯ ಎರಡು ಪಟ್ಟು ಹೆಚ್ಚು ಮೊತ್ತಕ್ಕಿಂತ ಅಧಿಕ ಆಗುತ್ತದೆ.
ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಬಂಡವಾಳ ಕೊಡುತ್ತಿದೆ ಎಸ್ಐಪಿ
ಮ್ಯೂಚುವಲ್ ಫಂಡ್ಗಳಿಗೆ ಹಣದ ಹರಿವು ಹೆಚ್ಚಾಗಿ ಬರುತ್ತಿರುವುದು ಎಸ್ಐಪಿ ಮೂಲಕ ಎಂಬುದು ದತ್ತಾಂಶದಿಂದ ತಿಳಿದುಬರುತ್ತದೆ. ನವೆಂಬರ್ನಲ್ಲಿ 29,445 ಕೋಟಿ ರೂ ಹಣವು ಎಸ್ಐಪಿ ಮೂಲಕ ಫಂಡ್ಗಳಿಗೆ ಸಂದಾಯವಾಗಿವೆ. ಅಕ್ಟೋಬರ್ನಲ್ಲಿ ಒಟ್ಟಾರೆ ಮ್ಯೂಚುವಲ್ ಫಂಡ್ಗಳಿಗೆ ಹರಿದುಬಂದ ಬಂಡವಾಳ ಕಡಿಮೆ ಆಗಿತ್ತಾದರೂ ಎಸ್ಐಪಿ 29,529 ಕೋಟಿ ರೂ ಹಣ ಕೊಟ್ಟಿತ್ತು. ನವೆಂಬರ್ನಲ್ಲಿ ತುಸು ಕಡಿಮೆ ಎಸ್ಐಪಿಯಾದರೂ, ಗಮನಾರ್ಹ ಮೊತ್ತವೆನಿಸಿದೆ.
ಇದನ್ನೂ ಓದಿ: ಅಮೆರಿಕದ ಪಕ್ಕದ ದೇಶದಿಂದಲೂ ಭಾರತದ ಮೇಲೆ ಶೇ. 50 ಟ್ಯಾರಿಫ್; ಏನಿದರ ಪರಿಣಾಮ?
ನವೆಂಬರ್ನಲ್ಲಿ ಈಕ್ವಿಟಿ ಫಂಡ್ಗಳ ಪೈಕಿ ಫ್ಲೆಕ್ಸಿಕ್ಯಾಪ್ ಫಂಡ್ಗಳಿಗೆ ಅತಿಹೆಚ್ಚು ಹಣದ ಹರಿವು ಸಿಕ್ಕಿದೆ. 8,000 ಕೋಟಿ ರೂ ಹಣವು ಫ್ಲೆಕ್ಸಿಕ್ಯಾಪ್ ಫಂಡ್ಗಳಿಗೆ ನವೆಂಬರ್ನಲ್ಲಿ ಸಿಕ್ಕಿದೆ. ಮಿಡ್ಕ್ಯಾಪ್, ಸ್ಮಾಲ್ಕ್ಯಾಪ್, ಹಾಗು ಲಾರ್ಜ್ ಮಿಡ್ಕ್ಯಾಪ್ ಈ ಮೂರು ರೀತಿಯ ಫಂಡ್ಗಳಿಗೂ ತಲಾ 4,400-4,500 ಕೋಟಿ ರೂ ಒಳಹರಿವು ಸಿಕ್ಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




