ಎನ್ಪಿಎಸ್ ಟಯರ್-1, ಟಯರ್-2 ಅಕೌಂಟ್ಗಳು; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್
National Pension System, tier-1 and tier-2 accounts: ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಟಯರ್-1 ಮತ್ತು ಟಯರ್-2 ಎಂದು ಎರಡು ರೀತಿಯ ಅಕೌಂಟ್ ಇದೆ. ಎನ್ಪಿಎಸ್ ಸ್ಕೀಮ್ ಪಡೆಯಬೇಕಾದರೆ ಟಯರ್-1 ಅಕೌಂಟ್ ತೆರೆಯುವುದು ಕಡ್ಡಾಯ. ಇದು ಪೆನ್ಷನ್ ಉದ್ದೇಶಕ್ಕಿರುವ ಅಕೌಂಟ್. ಆದರೆ, ಟಯರ್-2 ಅಕೌಂಟ್ ಐಚ್ಛಿಕ. ಇದು ಮ್ಯೂಚುವಲ್ ಫಂಡ್ನಂತೆ ಫ್ಲೆಕ್ಸಿಬಲ್ ನಿರ್ವಹಣೆಗೆ ಅವಕಾಶ ಕೊಡುತ್ತದೆ.

ನ್ಯಾಷನಲ್ ಪೆನ್ಷನ್ ಸಿಸ್ಟಂ (NPS- National Pension System) ಇವತ್ತು ಹೆಚ್ಚೆಚ್ಚು ಜನರಿಗೆ ಹೂಡಿಕೆ ಆಯ್ಕೆ ಎನಿಸಿದೆ. ಹೂಡಿಕೆ ಮತ್ತು ಪೆನ್ಷನ್ ಎರಡೂ ಉದ್ದೇಶಗಳನ್ನು ಈಡೇರಿಸುವ ವ್ಯವಸ್ಥೆ ಇದು. ಈ ವರ್ಷ ಎನ್ಪಿಎಸ್ನಲ್ಲಿ ಸರ್ಕಾರ ಕೆಲ ನಿಯಮ ಬದಲಾವಣೆ ಮಾಡಿದೆ. ಅದಾದ ಬಳಿಕ ಇದು ಅಪ್ಪಟ ಮ್ಯೂಚುವಲ್ ಫಂಡ್ನಂತೆ ರಿಟರ್ನ್ ತಂದುಕೊಡಲು ಸಾಧ್ಯವಾಗಲಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಎರಡು ರೀತಿಯ ಅಕೌಂಟ್ಗಳಿವೆ. ಟಯರ್ 1 ಮತ್ತು ಟಯರ್ 2 ಅಕೌಂಟ್ಗಳನ್ನು ತೆರೆಯಬಹುದು. ಟಯರ್ 1 ಅಕೌಂಟ್ ಶುದ್ಧ ಪಿಂಚಣಿ ಉದ್ದೇಶ ಹೊಂದಿದೆ. ಟಯರ್-2 ಅಕೌಂಟ್ ಬಹಳ ಫ್ಲೆಕ್ಸಿಬಲ್ ಎನಿಸಿದೆ.
ಎನ್ಪಿಎಸ್ ಟಯರ್ 1 ಅಕೌಂಟ್ ಹೇಗೆ?
ನ್ಯಾಷನಲ್ ಪೆನ್ಷನ್ ಸಿಸ್ಟಂನ ಟಯರ್-1 ಅಕೌಂಟ್ ಅನ್ನು ಪೆನ್ಷನ್ ಉದ್ದೇಶಕ್ಕೆ ರಚಿಸಲಾಗುತ್ತದೆ. ಇದರಲ್ಲಿ ಮಾಡಿದ ಹೂಡಿಕೆಯನ್ನು ನಿವೃತ್ತಿವರೆಗೂ ಹಿಂಪಡೆಯಲು ಆಗಲ್ಲ. 60 ವರ್ಷ ವಯಸ್ಸಾದ ಬಳಿಕ ಈ ಅಕೌಂಟ್ನಲ್ಲಿನ ಶೇ. 60ರಷ್ಟು ಹಣವನ್ನು ವಿತ್ಡ್ರಾ ಮಾಡಬಹುದು. ಉಳಿದ ಶೇ. 40ರಷ್ಟು ಹಣದಲ್ಲಿ ಆ್ಯನುಟಿ ಪ್ಲಾನ್ ಖರೀದಿಸಬೇಕಾಗುತ್ತದೆ. ಇದು ಹೂಡಿಕೆದಾರರಿಗೆ ಪಿಂಚಣಿ ಕೊಡುತ್ತಾ ಹೋಗುತ್ತದೆ.
ಇದನ್ನೂ ಓದಿ: ಈ ಲಾರ್ಜ್ ಕ್ಯಾಪ್ ಫಂಡ್ನಲ್ಲಿ 2008ರಲ್ಲಿ ಕೇವಲ 10 ಲಕ್ಷ ರೂ ಹೂಡಿಕೆ ಮಾಡಿದವರು ಇವತ್ತು ಕೋಟ್ಯಾಧೀಶ್ವರ
ಈ ಟಯರ್-1 ಅಕೌಂಟ್ನಲ್ಲಿ ನಿಮ್ಮ ಹಣದಲ್ಲಿ ಈಕ್ವಿಟಿ ಸ್ವತ್ತುಗಳ ಮೇಲೆ ಮಾಡಲಾಗುವ ಹೂಡಿಕೆ ಶೇ. 75 ಅನ್ನು ಮೀರುವುದಿಲ್ಲ. ಉಳಿದವನ್ನು ಕಡ್ಡಾಯವಾಗಿ ಬಾಂಡ್ ಇತ್ಯಾದಿ ಡೆಟ್ ಅಸೆಟ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಇದರಲ್ಲಿ ರಿಸ್ಕ್ ಕಡಿಮೆ, ರಿಟರ್ನ್ ಕೂಡ ಕಡಿಮೆ.
ಆಕರ್ಷಣೆ ಇರುವುದು ಎನ್ಪಿಎಸ್ನ ಟಯರ್-2 ಅಕೌಂಟ್ನಲ್ಲಿ…
ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ನೀವು ಹೂಡಿಕೆ ಮಾಡುವಾಗ ಟಯರ್-1 ಅಕೌಂಟ್ ತೆರೆಯುವುದು ಕಡ್ಡಾಯ. ಇದರ ಜೊತೆಗೆ ಟಯರ್-2 ಅಕೌಂಟ್ ಅನ್ನು ಬೇಕಾದರೆ ತೆರೆಯಲು ಅವಕಾಶ ಇರುತ್ತದೆ. ಈ ಟಯರ್-2 ಅಕೌಂಟ್ ಒಂದು ರೀತಿಯಲ್ಲಿ ಮ್ಯೂಚುವಲ್ ಫಂಡ್ನಂತೆ ಕಾರ್ಯನಿರ್ವಹಿಸುತ್ತದೆ.
ಇದರಲ್ಲಿ ನೂರಕ್ಕೆ ನೂರು ಹಣ ಈಕ್ವಿಟಿಗಳಲ್ಲಿ ಹೂಡಿಕೆ ಆಗುತ್ತದೆ. ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ಕಾರ್ಪಸ್ ಅನ್ನು ಹಿಂಪಡೆಯಲು ಅವಕಾಶ ಇರುತ್ತದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗುವುದು ಹೇಗೆ? ಆದಾಯ ಎಷ್ಟು? ಪರೀಕ್ಷೆ ಶುಲ್ಕ, ಕಮಿಷನ್ ಇತ್ಯಾದಿ ವಿವರ
ಮ್ಯೂಚುವಲ್ ಫಂಡ್ನಲ್ಲಿ ನಿರ್ವಹಣಾ ವೆಚ್ಚ ಶೇ. 1ರ ಆಸುಪಾಸಿನಲ್ಲಿ ಇರುತ್ತದೆ. ಆದರೆ, ಎನ್ಪಿಎಸ್ನಲ್ಲಿ ಎಕ್ಸ್ಪೆನ್ಸ್ ರೇಶಿಯೋ ಶೇ. 0.1 ಕ್ಕಿಂತಲೂ ಕಡಿಮೆ. ಇದರಿಂದ ಹೂಡಿಕೆದಾರರಿಗೆ ಹೆಚ್ಚು ರಿಟರ್ನ್ಸ್ ಸಿಗಲು ಸಾಧ್ಯವಾಗುತ್ತದೆ. ದೀರ್ಘಾವಧಿ ದೃಷ್ಟಿಯಿಂದ ನೋಡಿದರೆ ಎನ್ಪಿಎಸ್ನ ಈಕ್ವಿಟಿ ಪ್ಲಾನ್ಗಳು ಶೇ. 10-12ರ ಸಿಎಜಿಆರ್ನಲ್ಲಿ ರಿಟರ್ನ್ಸ್ ತಂದುಕೊಟ್ಟಿವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




