AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Children’s Mutual Fund: ಜನಪ್ರಿಯತೆ ಹೆಚ್ಚುತ್ತಿರುವ ಮಕ್ಕಳ ಮ್ಯೂಚುವಲ್ ಫಂಡ್​ಗಳು; ಹೂಡಿಕೆಯಲ್ಲಿ ಶೇ. 160 ಹೆಚ್ಚಳ

Children's Mutual Funds: ಮಕ್ಕಳ ಮ್ಯೂಚುವಲ್ ಫಂಡ್​ಗಳ ಜನಪ್ರಿಯತೆ ಹೆಚ್ಚುತ್ತಿದೆ. ಇದರಲ್ಲಿ ಮಾಡಲಾಗಿರುವ ಹೂಡಿಕೆ 25,675 ಕೋಟಿ ರೂ ಆಗಿದೆ. ಐದು ವರ್ಷದ ಹಿಂದೆ ಈ ಮಕ್ಕಳ ಫಂಡ್​ಗಳ ಎಯುಎಂ 9,866 ಕೋಟಿ ರೂ ಇತ್ತು. ಗಮನಾರ್ಹ ಸಂಗತಿ ಎಂದರೆ, ಹೆಚ್ಚಿನ ಮಕ್ಕಳ ಮ್ಯೂಚುವಲ್ ಫಂಡ್​ಗಳು ಐದು ವರ್ಷದಲ್ಲಿ ಉತ್ತಮ ಸಿಎಜಿಆರ್​ನಲ್ಲಿ ಬೆಳೆದಿವೆ.

Children's Mutual Fund: ಜನಪ್ರಿಯತೆ ಹೆಚ್ಚುತ್ತಿರುವ ಮಕ್ಕಳ ಮ್ಯೂಚುವಲ್ ಫಂಡ್​ಗಳು; ಹೂಡಿಕೆಯಲ್ಲಿ ಶೇ. 160 ಹೆಚ್ಚಳ
ಮಕ್ಕಳ ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2025 | 6:07 PM

Share

ಮಕ್ಕಳ ಮ್ಯೂಚುವಲ್ ಫಂಡ್​ಗಳಿಂದ (Mutual Funds) ನಿರ್ವಹಿತವಾಗುತ್ತಿರುವ ಆಸ್ತಿ 25,675 ಕೋಟಿ ರೂ ಮುಟ್ಟಿದೆ. ಕಳೆದ ಐದು ವರ್ಷದಲ್ಲಿ ಎಯುಎಂನಲ್ಲಿ ಗಣನೀಯ ಹೆಚ್ಚಳ ಆಗಿದೆ. 2020ರ ನವೆಂಬರ್​ನಲ್ಲಿ ಮಕ್ಕಳ ಮ್ಯುಚುವಲ್ ಫಂಡ್​ಗಳ ಎಯುಎಂ 9,866 ಕೋಟಿ ರೂ ಇತ್ತು. ಈಗ ಅದು 25,675 ಕೋಟಿ ರೂ ಮುಟ್ಟಿದೆ. ಈ ವರ್ಷದಲ್ಲಿ ಶೇ. 160ರಷ್ಟು ಎಯುಎಂ ಏರಿದೆ. ಭಾರತದಲ್ಲಿ ಮಕ್ಕಳ ಭವಿಷ್ಯಕ್ಕೆ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ಗಮನಾರ್ಹ.

2020ರ ನವೆಂಬರ್​ನಲ್ಲಿ ಮಕ್ಕಳ ಮ್ಯೂಚುವಲ್ ಫಂಡ್​ಗಳಲ್ಲಿ 29 ಲಕ್ಷ ಫೋಲಿಯೋಗಳಿದ್ದವು. 2025ರ ನವೆಂಬರ್​ನಲ್ಲಿ ಫೋಲಿಯೋಗಳ ಸಂಖ್ಯೆ 32 ಲಕ್ಷಕ್ಕೆ ಏರಿದೆ.

ಇದನ್ನೂ ಓದಿ: Mutual Fund Charges: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…

ಮಕ್ಕಳ ಫಂಡ್​ಗಳಿಂದ ಉತ್ತಮ ಸಾಧನೆ

ಮಕ್ಕಳ ಮ್ಯೂಚುವಲ್ ಫಂಡ್​ಗಳು ಕಳೆದ ಐದು ವರ್ಷದಲ್ಲಿ ಸರಾಸರಿ ಶೇ. 21.08 ಸಿಎಜಿಆರ್​ನಲ್ಲಿ ಲಾಭ ತಂದಿವೆ. ಇದರೊಂದಿಗೆ, ಮಕ್ಕಳಿಗೆಂದು ಮಾಡಲಾಗುತ್ತಿರುವ ಹೂಡಿಕೆಗಳು ತಮ್ಮ ಗುರಿ ತಲುಪುತ್ತಿವೆ. ಶೇ. 10-15ರಷ್ಟು ವೇಗದಲ್ಲಿ ಶಿಕ್ಷಣ ವೆಚ್ಚ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಮ್ಯೂಚುವಲ್ ಫಂಡ್​ಗಳು ಉತ್ತಮ ಲಾಭ ತರುತ್ತಿರುವುದು ಗಮನಾರ್ಹ.

ಭಾರತದಲ್ಲಿ ಸುಮಾರು 12 ಮಕ್ಕಳ ಮ್ಯೂಚುವಲ್ ಫಂಡ್​ಗಳಿವೆ. ಅವುಗಳ ಪೈಕಿ ಎಸ್​ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಐದು ವರ್ಷದಲ್ಲಿ ಶೇ. 34.35 ಸಿಎಜಿಆರ್​ನಲ್ಲಿ ಲಾಭ ತಂದಿದೆ. ಮಕ್ಕಳ ಮ್ಯೂಚುವಲ್ ಫಂಡ್​ಗಳಲ್ಲಿ ಟಾಪ್-5 ಫಂಡ್​ಗಳು ಹಾಗು ಅವುಗಳ 5 ವರ್ಷದ ರಿಟರ್ನ್ ವಿವರ ಈ ಕೆಳಕಂಡಂತಿವೆ:

  1. ಎಸ್​ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್: ಶೇ. 34.35 ಸಿಎಜಿಆರ್
  2. ಐಸಿಐಸಿಐ ಪ್ರುಡೆನ್ಷಿಯಲ್ ಚಿಲ್ಡ್ರನ್ಸ್ ಫಂಡ್: ಶೇ. 19.14 ಸಿಎಜಿಆರ್
  3. ಎಚ್​ಡಿಎಫ್​ಸಿ ಚಿಲ್ಡ್ರನ್ಸ್ ಫಂಡ್: ಶೇ. 18.46
  4. ಟಾಟಾ ಚಿಲ್ಡ್ರನ್ಸ್ ಫಂಡ್: ಶೇ 18.09
  5. ಯುಟಿಐ ಚಿಲ್ಡ್ರನ್ಸ್ ಈಕ್ವಿಟಿ ಫಂಡ್: ಶೇ. 17.65 ಸಿಎಜಿಆರ್

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

ಚಿಲ್ಡ್ರನ್ಸ್ ಮ್ಯೂಚುವಲ್ ಫಂಡ್ ಹೇಗೆ?

18 ವರ್ಷ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಮಕ್ಕಳ ಹೆಸರಿನಲ್ಲಿ ಫಂಡ್ ಆರಂಭಿಸಬೇಕು. ಆದರೆ ಪಾಲಕರು ಅದನ್ನು ನಿರ್ವಹಿಸಬೇಕು. ಮಗು 18 ವರ್ಷ ವಯಸ್ಸಾದ ಬಳಿಕ ಅವರಿಗೆ ನಿರ್ವಹಣೆಯ ಅಧಿಕಾರ ಸಿಗುತ್ತದೆ. ಅಲ್ಲಿಯವರೆಗೂ ಫಂಡ್ ವಿತ್​ಡ್ರಾ ಮಾಡಲು ಅವಕಾಶ ಇರುವುದಿಲ್ಲ. ಹೂಡಿಕೆಗೆ ಮಾತ್ರವೇ ಅವಕಾಶ ಇರುತ್ತದೆ. ಇದು ಬಿಟ್ಟರೆ ಮಕ್ಕಳ ಮ್ಯೂಚುವಲ್ ಫಂಡ್​ಗಳಿಗೂ ರೆಗ್ಯುಲರ್ ಫಂಡ್​ಗಳಿಗೂ ವ್ಯತ್ಯಾಸವೇನೂ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ