stock market

stock market

ಸ್ಟಾಕ್ ಮಾರ್ಕೆಟ್ ಎಂದರೆ ಷೇರುಪೇಟೆ. ಅಥವಾ ಷೇರು ವಿನಿಮಯ ಮಾರುಕಟ್ಟೆ. ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ. ಭಾರತದ ಷೇರು ಮಾರುಕಟ್ಟೆ ವಿಶ್ವದಲ್ಲೇ ಐದನೇ ಅತಿದೊಡ್ಡದು. 4 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ಗಮನಿಸಿ… ನವೆಂಬರ್ 15 ಮತ್ತು 20ರಂದು ವಾರದ ದಿನವಾದರೂ ಷೇರು ಮಾರುಕಟ್ಟೆಗೆ ರಜೆ

Stock market holiday on November: ನವೆಂಬರ್ 1ರಂದು ದೀಪಾವಳಿ ಹಬ್ಬಕ್ಕೆ ಬಂದ್ ಆಗಿದ್ದ ಷೇರು ಮಾರುಕಟ್ಟೆ ಈ ತಿಂಗಳು ಇನ್ನೂ ಎರಡು ದಿನ ಮುಚ್ಚಿರುತ್ತದೆ. ನವೆಂಬರ್ 15, ಶುಕ್ರವಾರ ಗುರುನಾನಕ್ ಜಯಂತಿ ಇದೆ. ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಬೈನಲ್ಲಿ ಮತದಾನ ಇದೆ. ಈ ಎರಡು ದಿನ ಮಾರುಕಟ್ಟೆ ಬಂದ್ ಆಗಿರುತ್ತದೆ.

ಟ್ರಂಪ್ ಬಂದದ್ದೇ ರಿನಿವಬಲ್ ಎನರ್ಜಿ ಷೇರುಗಳಿಗೆ ನಡುಕ; ಸೂಪರ್​ಹಿಟ್ ವಾರೀ ಎನರ್ಜೀಸ್​ಗೂ ಹೊಡೆತ

Know why Donald Trump opposing renewable energy: ಡೊನಾಲ್ಡ್ ಟ್ರಂಪ್ ಕಂಬ್ಯಾಕ್ ಮಾಡಿದ ಬಳಿಕ ವಾರೀ ಎನರ್ಜೀಸ್ ಷೇರುಬೆಲೆ ಸತತವಾಗಿ ಕುಸಿಯುತ್ತಿದೆ. ರಿವಿಬಲ್ ಎನರ್ಜಿ ಉತ್ಪಾದನೆಯ ಉಪಕರಣಗಳನ್ನು ವಾರೀ ಸಂಸ್ಥೆ ಅಮೆರಿಕಕ್ಕೆ ಸರಬರಾಜು ಮಾಡುತ್ತದೆ. ಟ್ರಂಪ್ ಅವರು ರಿನಿವಬಲ್ ಎನರ್ಜಿ ಪ್ರಾಜೆಕ್ಟ್​ಗಳನ್ನು ನಿಲ್ಲಿಸುತ್ತೇವೆಂದು ಈ ಹಿಂದೆ ಹೇಳುತ್ತಿದ್ದರಾದ್ದರಿಂದ ವಾರೀಗೆ ಹಿನ್ನಡೆಯಾಗಬಹುದು.

ಜೆಟ್ ಏರ್ವೇಸ್ ಮುಚ್ಚಿದರೆ ಅದರ ಷೇರುದಾರರಿಗೆ ಸಿಗೋದೇನು? ಷೇರಿನ ಫೇಸ್​ವ್ಯಾಲ್ಯೂ ಕೂಡ ಸಿಗಲ್ವಾ?

Jet Airways shareholders: ಜೆಟ್ ಏರ್ವೇಸ್​ನ ಆಸ್ತಿ ಮಾರಿ ಕಂಪನಿಯನ್ನು ಪೂರ್ಣ ವಿಸರ್ಜನೆಗೊಳಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಜೆಟ್ ಏರ್ವೇಸ್ ಷೇರುಬೆಲೆ ಶೇ. 5ರಷ್ಟು ಕಡಿಮೆ ಆಗಿ 34.04 ರೂ ತಲುಪಿದೆ. 1.43 ಲಕ್ಷ ರೀಟೇಲ್ ಹೂಡಿಕೆದಾರರಿದ್ದು, ಅವರಿಗೆ ವೈಟ್ ವಾಶ್ ಆಗುವ ಭೀತಿ ಇದೆ. ಆಸ್ತಿ ಮಾರಿ ಬಂದ ಹಣವನ್ನು ಸಾಲಗಾರರು ಮತ್ತು ಷೇರುದಾರರಿಗೆ ಹಂಚಲಾಗುತ್ತದೆ. ಇದರಲ್ಲಿ ಕೊನೆಯ ಸರದಿಯಲ್ಲಿರುವವರು ಷೇರುದಾರರು.

ಎಲ್ಸಿಡ್; ಭಾರತದ ಅತ್ಯಂತ ದುಬಾರಿ ಷೇರು ಈಗ ಮತ್ತಷ್ಟು ದುಬಾರಿ; ಬೆಲೆ 3 ಲಕ್ಷ ರೂಗೂ ಹೆಚ್ಚು; ಏನು ಕಾರಣ?

Elcid Investments share price: ಪೆನ್ನಿ ಸ್ಟಾಕ್ ಎನಿಸಿದ್ದ ಎಲ್ಸಿಡ್ ಇನ್ವೆಸ್ಟ್​ಮೆಂಟ್ ಈಗ ಭಾರತದ ಅತ್ಯಂತ ದುಬಾರಿ ಸ್ಟಾಕ್ ಎನಿನಿಸಿದೆ. 3 ಲಕ್ಷ ರೂ ಬೆಲೆ ದಾಟಿದ ಭಾರತದ ಮೊದಲ ಷೇರು ಎನಿಸಿದೆ. ಅಕ್ಟೋಬರ್ 29ರಂದು 2.36 ಲಕ್ಷ ರೂ ಬೆಲೆ ಪಡೆದುಕೊಂಡಿದ್ದ ಇದು ಅಂದಿನಿಂದ ಸತತವಾಗಿ ಹೆಚ್ಚುತ್ತಿದೆ. ಇದಕ್ಕೆ ಏನು ಕಾರಣ ಎನ್ನುವ ವಿವರ ಇಲ್ಲಿದೆ....

ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

Demat Account closure methods: ಷೇರು, ಮ್ಯುಚುವಲ್ ಫಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇಟ್ಟುಕೊಳ್ಳಲು ಇರುವ ಡೀಮ್ಯಾಟ್ ಅಕೌಂಟ್ ಅನ್ನು ಈಗ ಹೆಚ್ಚು ರಗಳೆ ಇಲ್ಲದೇ ಮುಚ್ಚಲು ಸಾಧ್ಯ. ಕ್ಲೋಷರ್ ಫಾರ್ಮ್ ಭರ್ತಿ ಮಾಡಿ, ಸಂಬಂಧಿತ ದಾಖಲೆಗಳ ಸಮೇತ ಡಿಪಿ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ 20 ಕೋಟಿ ಕ್ಲೈಂಟ್ ಅಕೌಂಟ್​ಗಳ ಮೈಲಿಗಲ್ಲು; ಷೇರುಮಾರುಕಟ್ಟೆಗೊಂದು ಹೊಸ ಗರಿ

NSE client accounts milestone: ಭಾರತದ ಷೇರು ಮಾರುಕಟ್ಟೆ ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಎನ್​ಎಸ್​ಇನಲ್ಲಿ ಇರುವ ಒಟ್ಟು ಕ್ಲೈಂಟ್ ಅಕೌಂಟ್​ಗಳ ಸಂಖ್ಯೆ 20 ಕೋಟಿ ದಾಟಿದೆ. ಕೆಲ ತಿಂಗಳ ಹಿಂದಷ್ಟೇ ನೊಂದಾಯಿತ ಯೂನಿಕ್ ಇನ್ವೆಸ್ಟರ್​ಗಳ ಸಂಖ್ಯೆ 10.50 ಕೋಟಿ ದಾಟಿತ್ತು. ಕಳೆದ ಎಂಟು ತಿಂಗಳಲ್ಲಿ ಮೂರು ಕೋಟಿಗೂ ಅಧಿಕ ಕ್ಲೈಂಟ್ ಅಕೌಂಟ್​ಗಳು ಸ್ಥಾಪನೆ ಆಗಿದೆ.

ಒಂದೇ ದಿನದಲ್ಲಿ 3.53 ರೂನಿಂದ 2,36,250 ರೂ; ಎಲ್ಸಿಡ್ ಷೇರುಬೆಲೆ ಧಮಾಕ ಕಾಣಲು ಏನು ಕಾರಣ?

Elcid Investments share price: ಎಲ್ಸಿಡ್ ಇನ್ವೆಸ್ಟ್​ಮೆಂಟ್ ಷೇರುಬೆಲೆ ಏಕ್​ದಂ ಹೈಜಂಪ್ ಮಾಡಿದೆ. 3.53 ರೂ ಇದ್ದ ಅದರ ಷೇರುಬೆಲೆ ನಿನ್ನೆ ಮಂಗಳವಾರ 2,36,250 ರೂ ತಲುಪಿದೆ. ಈ ಪರಿ ಬೆಲೆ ಏರಲು ಕಾರಣವಾಗಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.

ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು

IPO market in India: ಭಾರತದ ಐಪಿಒ ಮಾರುಕಟ್ಟೆ ಪ್ರಬಲವಾಗಿದೆ. ಕಳೆದ ಬಾರಿಯ ದೀಪಾವಳಿಯಿಂದ ಇಲ್ಲಿಯವರೆಗೆ 82 ಕಂಪನಿಗಳು ಐಪಿಒಗೆ ಬಂದು ಒಂದು ಲಕ್ಷ ಕೋಟಿ ರೂಗೂ ಅಧಿಕ ಬಂಡಾಳ ಸಂಗ್ರಹಿಸಿಕೊಂಡಿವೆ. ಹಲವು ಐಪಿಒಗಳಿಗೆ ರೀಟೇಲ್ ಹೂಡಿಕೆದಾರರಿಂದ ಸಖತ್ ಸ್ಪಂದನೆ ಸಿಕ್ಕಿದೆ. ಇನ್ನೂ 63 ಕಂಪನಿಗಳು ಐಪಿಒಗಾಗಿ ಸೆಬಿ ಬಳಿ ಅರ್ಜಿ ಸಲ್ಲಿಸಿವೆ.

ಅತಿದೊಡ್ಡ ಐಪಿಒಗಳಲ್ಲಿ ಗೆದ್ದವೆಷ್ಟು, ಸೋತವೆಷ್ಟು? ಪ್ರಾಥಮಿಕ ಮಾರುಕಟ್ಟೆಯಲ್ಲಿ ಹಣ ಹಾಕುವ ಮುನ್ನ ಹುಷಾರ್

Performance report of top-30 IPOs: ಐಪಿಒ ಎಂಬುದು ಕಂಪನಿಗಳು ಸಾರ್ವಜನಿಕವಾಗಿ ಷೇರುಗಳನ್ನು ಹಂಚಿ ಬಂಡವಾಳ ಸಂಗ್ರಹಿಸುವ ಪ್ರಾಥಮಿಕ ಮಾರುಕಟ್ಟೆ. ಇಲ್ಲಿ ಅಡಿ ಇಡುತ್ತಿರುವ ಕಂಪನಿಗಳ ಸಂಖ್ಯೆ ಹೆಚ್ಚುತ್ತಿದೆ. ಐಪಿಒ ಮೂಲಕ ಅತಿಹೆಚ್ಚು ಬಂಡವಾಳ ಸಂಗ್ರಹಿಸಿದ 30 ಕಂಪನಿಗಳ ಷೇರುಗಳಲ್ಲಿ ನಿರೀಕ್ಷೆ ಹುಸಿಗಳಿಸದವು ಎಷ್ಟು? ಗೆದ್ದವೆಷ್ಟು ಎನ್ನುವ ಮಾಹಿತಿಯನ್ನು ಕ್ಯಾಪಿಟಲ್ ಮೈಂಡ್ ಕಲೆಹಾಕಿದೆ.

ಮಾರುಕಟ್ಟೆ ಬೀಳ್ತಿದೆ, ಖರೀದಿಸುವ ಸಮಯವಾ? ಇದು ಸಾಕಾಗಲ್ಲ, ಇನ್ನೂ ಬೀಳಬೇಕು ಎನ್ನುತ್ತಾರೆ ದೀಪಕ್ ಶೆಣೈ

Deepak Shenoy opinion on stock market: ಷೇರುಪೇಟೆಯಲ್ಲಿ ಈಗ ದೊಡ್ಡದಾಗಿ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆಯಾ? ಕಳೆದ ಮೂರ್ನಾಲ್ಕು ತಿಂಗಳಿಂದ ಷೇರು ಮಾರುಕಟ್ಟೆ ಒಂದಷ್ಟು ಹಿನ್ನಡೆ ಕಂಡಿದೆ. ಆದರೆ, ಕ್ಯಾಪಿಟಲ್ ಮೈಂಡ್ ಸಂಸ್ಥಾಪಕ ದೀಪಕ್ ಶೆಣೈ ಪ್ರಕಾರ ಇಷ್ಟು ಮಾರ್ಕೆಟ್ ಕರೆಕ್ಷನ್ ಸಾಕಾಗಲ್ಲ, ಇನ್ನಷ್ಟು ಕುಸಿಯಬೇಕು. ಆಗ ಷೇರು ಖರೀದಿಸಬಹುದು ಎನ್ನುತ್ತಾರೆ.

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?