AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಪೇಟೆ ಮೇಲೆ ಪರಿಣಾಮ ಬೀರಬಲ್ಲ ಪ್ರಮುಖ ಬಜೆಟ್ ಘೋಷಣೆಗಳು

Union Budget 2026-27, key announcements having impact on markets: ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಮಂಡಿಸಿದ ಬಜೆಟ್​ನಲ್ಲಿ ಹಲವು ಪ್ರಮುಖ ಘೋಷಣೆಗಳಿವೆ. ಎಫ್ ಅಂಡ್ ಒ ಟ್ರೇಡಿಂಗ್​​ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅಥವಾ ಎಸ್​​ಟಿಟಿಯನ್ನು ಏರಿಸಲಾಗಿದೆ. ಸ್ಟಾಕ್ ಬಯ್​ಬ್ಯಾಕ್ ಮಾಡಿದಾಗ ಅದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹಾಕಲಾಗುತ್ತದೆ. ಸೆಮಿಕಂಡಕ್ಟರ್, ಟೆಕ್, ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಗಳಿಗೆ ಒತ್ತುಕೊಡಲಾಗಿದೆ. ಅಲ್ಲಿರುವ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಬಹುದು.

ಷೇರುಪೇಟೆ ಮೇಲೆ ಪರಿಣಾಮ ಬೀರಬಲ್ಲ ಪ್ರಮುಖ ಬಜೆಟ್ ಘೋಷಣೆಗಳು
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 01, 2026 | 3:24 PM

Share

ನವದೆಹಲಿ, ಫೆ. 1: ಈ ಬಾರಿಯ ಬಜೆಟ್​ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಸರ್ಕಾರದ ಬಂಡವಾಳ ವೆಚ್ಚವನ್ನು (Capital Expenditure) ಗಣನೀಯವಾಗಿ ಹೆಚ್ಚಿಸಲಾಗಿದೆ. ಕೆಲ ಆದಾಯ ತೆರಿಗೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಬಂಡವಾಳ ಹಿಂತೆಗೆತದ ಗುರಿಯನ್ನು (Divestment target) ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ 9ನೇ ಬಜೆಟ್​ನಲ್ಲಿ (2026-27) ಷೇರು ಹೂಡಿಕೆದಾರರಿಗೆ ಮುಖ್ಯವೆನಿಸುವ ಕೆಲ ಘೋಷಣೆಗಳು ಇಂತಿವೆ:

  • ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅಥವಾ ಎಸ್​ಟಿಟಿಯನ್ನು ಶೇ. 0.05ಕ್ಕೆ ಏರಿಸಲಾಗಿದೆ. ಎಫ್ ಅಂಡ್ ಓ ಟ್ರೇಡಿಂಗ್ ಮಾಡುತ್ತಿರುವವರಿಗೆ ನಿರುತ್ಸಾಹ ಮೂಡಬಹುದು.
  • ಸ್ಟಾಕ್ ಬಯ್​ಬ್ಯಾಕ್ (ಷೇರು ಮರುಖರೀದಿ) ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಕಂಪನಿ ಮಾಲೀಕರಾದರೆ ಈಕ್ವಿಟಿ ಬಯ್​ಬ್ಯಾಕ್ ಮೇಲೆ ಶೇ. 22 ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇದೆ. ನಾನ್-ಕಾರ್ಪೊರೇಟ್ ಷೇರುದಾರರಾದರೆ ಶೇ. 30 ಟ್ಯಾಕ್ಸ್ ಇರುತ್ತದೆ.

ಇದನ್ನೂ ಓದಿ: ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ

  • ಎನ್​ಆರ್​ಐಗಳ ಈಕ್ವಿಟಿ ಮಾಲಕತ್ವ ಮಿತಿಯನ್ನು ಶೇ. 5ರಿಂದ ಶೇ. 10ಕ್ಕೆ ಏರಿಸಲಾಗಿದೆ. ವಿದೇಶಗಳಲ್ಲಿ ಇವರ ರೀಟೇಲ್ ಹೋಲ್ಡಿಂಗ್ ಅನ್ನು ಶೇ. 10ರಿಂದ ಶೇ. 24ಕ್ಕೆ ವಿಸ್ತರಿಸಲಾಗಿದೆ.
  • ಇನ್​ಫ್ರಾಸ್​ಟ್ರಕ್ಚರ್ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಸರ್ಕಾರ ಮಾಡುವ ಕ್ಯಾಪೆಕ್ಸ್ ಅಥವಾ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರೂಗೆ ಏರಿಕೆ ಮಾಡಲಾಗಿದೆ.
  • ವಿತ್ತೀಯ ಕೊರತೆಯ ಗುರಿ 2025-26ರಲ್ಲಿ ಶೇ. 4.4 ಇತ್ತು. ಮುಂದಿನ ವರ್ಷಕ್ಕೆ ಅದನ್ನು ಶೇ. 4.3ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

  • ಸೆಮಿಕಂಡಕ್ಟರ್ಸ್, ರೇರ್ ಅರ್ಥ್ ವಸ್ತುಗಳು, ಬಯೋಸಿಮಿಲರ್​ಗಳು, ಕ್ಲೀನ್ ಟೆಕ್ನಾಲಜಿ ಅಭಿವೃದ್ಧಿಗೆ ಒ್ತು ಕೊಡಲಾಗಿದೆ. ಈ ಕ್ಷೇತ್ರದಲ್ಲಿರುವ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಬಹುದು.
  • 2026-27ರ ವರ್ಷಕ್ಕೆ ಬಂಡವಾಳ ಹಿಂತೆಗೆತದ ಗುರಿಯನ್ನು 80,000 ಕೋಟಿ ರೂಗೆ ಇರಿಸಲಾಗಿದೆ. ಹಿಂದಿನ ವರ್ಷದಲ್ಲಿ 33,837 ಕೋಟಿ ರೂ ಗುರಿ ಇಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್