AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ

Accepted 41pc tax devolution to states, says Nirmala Sitharaman in her budget speech: 16ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ರಾಜ್ಯಗಳಿಗೆ ಶೇ. 41 ಟ್ಯಾಕ್ಸ್ ಹಂಚಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ 2026-27ರ ವರ್ಷಕ್ಕೆ 1.4 ಲಕ್ಷ ಕೋಟಿ ರೂ ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಜಿಎಸ್​ಟಿ, ಕಾರ್ಪೊರೇಶನ್ ಟ್ಯಾಕ್ಸ್, ಇನ್ಕಮ್ ಟ್ಯಾಕ್ಸ್ ಇತ್ಯಾದಿಗಳಿಂದ ಬರುವ ತೆರಿಗೆ ಆದಾಯವನ್ನು ಕೇಂದ್ರವು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ.

ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ
ಟ್ಯಾಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 01, 2026 | 2:10 PM

Share

ನವದೆಹಲಿ, ಫೆಬ್ರುವರಿ 1: ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ (Tax Devolution) ಕ್ರಮದ ಬಗ್ಗೆ 16ನೇ ಹಣಕಾಸು ಆಯೋಗ (16th Finance Commission) ಮಾಡಿದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಒಪ್ಪಿದೆ. ಇದರೊಂದಿಗೆ, ರಾಜ್ಯಗಳಿಗೆ ಕೇಂದ್ರದ ಶೇ. 41ರಷ್ಟು ತೆರಿಗೆ ಹಂಚಿಕೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ಮಾಹಿತಿಯನ್ನು ತಮ್ಮ ಬಜೆಟ್ ಭಾಷಣದಲ್ಲಿ ನೀಡಿದ್ದಾರೆ.

ಬಜೆಟ್​ಗೆ ಮುನ್ನ ಅವರು 16ನೇ ಹಣಕಾಸು ಆಯೋಗದ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುಪಡಿಸಿದರು. ಈ ಆಯೋಗವು 2025ರ ನವೆಂಬರ್ 17ರಂದೇ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿತ್ತು. ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ ಮಾಡಬೇಕೆಂದು ಈ ವರದಿಯಲ್ಲಿ ಮಾಡಲಾಗಿರುವ ಶಿಫಾರಸನ್ನು ಸರ್ಕಾರ ಸ್ವೀಕರಿಸಿದೆ. ಆಯೋಗದ ಶಿಫಾರಸಿನಂತೆ 2026-27ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿಪತ್ತು ನಿರ್ವಹಣಾ ನಿಧಿಗಳಿಗೆ ನೀಡುವ ಹಣವೂ ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

ಏನಿದು ಶೇ. 41 ತೆರಿಗೆ ಹಂಚಿಕೆ?

16ನೇ ಹಣಕಾಸು ಆಯೋಗ ಮಾಡುವ ಶಿಫಾರಸುಗಳು 2026ರಿಂದ 2031ರವರೆಗೂ ಚಾಲ್ತಿಯಲ್ಲಿರಲಿವೆ. ಅಂದರೆ, ಶೇ. 41ರ ಟ್ಯಾಕ್ಸ್ ಹಂಚಿಕೆ ಸೂತ್ರ ಇನ್ನು ಐದು ವರ್ಷ ಮುಂದುವರಿಯುತ್ತದೆ. ಹಿಂದಿನ 15ನೇ ಫೈನಾನ್ಸ್ ಕಮಿಷನ್ ಕೂಡ ಶೇ. 41 ಟ್ಯಾಕ್ಸ್ ಡೆವಲ್ಯೂಶನ್ ಸೂತ್ರವನ್ನೇ ಶಿಫಾರಸು ಮಾಡಿತ್ತು. 2020ರಿಂದಲೂ ಶೇ. 41 ತೆರಿಗೆ ಹಂಚಿಕೆ ಕ್ರಮ ಚಾಲನೆಯಲ್ಲಿದೆ. ಅದಕ್ಕೆ ಮುನ್ನ 14ನೇ ಹಣಕಾಸು ಆಯೋಗವು ಶೇ. 42 ಟ್ಯಾಕ್ಸ್ ಡೆವಲ್ಯೂಶನ್​ಗೆ ಶಿಫಾರಸು ಮಾಡಿತ್ತು.

ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಕೇಂದ್ರ ಸರ್ಕಾರಕ್ಕೆ ಸಿಗುವ ಎಲ್ಲಾ ಕೇಂದ್ರೀಯ ತೆರಿಗೆಗಳಲ್ಲಿ ಎಷ್ಟು ಪಾಲು ರಾಜ್ಯಗಳಿಗೆ ಹೋಗಬೇಕು ಎಂಬುದನ್ನು ಈ ಟ್ಯಾಕ್ಸ್ ಡೆವೊಲ್ಯೂಶನ್ ಫಾರ್ಮುಲಾ ನಿರ್ಧರಿಸುತ್ತದೆ.

ಜಿಎಸ್​ಟಿಯಲ್ಲಿ ಎಸ್​ಜಿಎಸ್​ಟಿ ಆಯಾ ರಾಜ್ಯಗಳಿಗೆ ಪೂರ್ಣವಾಗಿ ಹೋಗುತ್ತದೆ. ಐಜಿಎಸ್​ಟಿ, ವೈಯಕ್ತಿಕ ಆದಾಯ ತೆರಿಗೆ, ಕಂಪನಿಗಳ ಲಾಭದ ಮೇಲಿನ ಟ್ಯಾಕ್ಸ್, ಆಮದು ಸುಂಕ, ರಫ್ತು ಸುಂಕ ಇತ್ಯಾದಿ ತೆರಿಗೆಯಲ್ಲಿ ಕೇಂದ್ರ ಸರ್ಕಾರವು ಶೇ. 41ರಷ್ಟನ್ನು ರಾಜ್ಯಗಳಿಗೆ ಕೊಡುತ್ತೆ.

ಇದನ್ನೂ ಓದಿ: Budget 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ?

ಈ ಶೇ. 41 ತೆರಿಗೆಯನ್ನು ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಹಂಚಿಕೆ ಮಾಡಬೇಕು ಎಂಬುದಕ್ಕೆ ಒಂದಿಷ್ಟು ಮಾನದಂಡಗಳಿವೆ. ಜನಸಂಖ್ಯೆ, ಆದಾಯ ಅಂತರ ಇತ್ಯಾದಿ ಮಾನದಂಡಗಳ ಅನುಸಾರ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಹೆಚ್ಚಿನ ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಕಡಿಮೆ ತೆರಿಗೆ ಹಂಚಿಕೆ ಮಾಡಲಾಗುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ