Income Tax
ಆದಾಯ ತೆರಿಗೆ ಎಂಬುದು ವ್ಯಕ್ತಿ ಹಾಗೂ ಸಂಸ್ಥೆಗಳು ಗಳಿಸುವ ಆದಾಯಕ್ಕೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ. ಇದು ನೇರ ತೆರಿಗೆಗಳ ಗುಂಪಿಗೆ ಸೇರುತ್ತದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಎಂದು ವರ್ಗೀಕರಿಸಬಹುದು. ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇದೂ ಒಂದು. 2023-24ರ ಸಾಲಿನ ವರ್ಷದಲ್ಲಿ ಭಾರತದಲ್ಲಿ ಆದಾಯ ತೆರಿಗೆ ಸೇರಿದಂತೆ ಒಟ್ಟಾರೆ ನೇರ ತೆರಿಗೆಗಳ ಪ್ರಮಾಣ 18.90 ಲಕ್ಷ ಕೋಟಿ ರೂ ಇತ್ತು. ಸರ್ಕಾರ ಆದಾಯ ತೆರಿಗೆಯನ್ನು ಸ್ಲ್ಯಾಬ್ ದರಗಳಲ್ಲಿ ವಿಧಿಸುತ್ತದೆ. ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ದರ ಇರುತ್ತದೆ. ತೀರಾ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಯ ಹೆಚ್ಚಿದಂತೆ ತೆರಿಗೆಯೂ ಹೆಚ್ಚುತ್ತಾ ಹೋಗುತ್ತದೆ. ಸಮಾಜದಲ್ಲಿ ಆರ್ಥಿಕ ಬೆಳವಣಿಗೆಯ ಅಸಮತೋಲನ ಕಡಿಮೆ ಮಾಡಲು ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ.