Wedding Gift Tax: ಮದುವೆಗೆ ಕೊಡುವ ಗಿಫ್ಟ್ಗೆ ಟ್ಯಾಕ್ಸ್ ಕಟ್ಟಬೇಕಾ?
Wedding gift tax rules in India: ಭಾರತದ ಗಿಫ್ಟ್ಗಳಿಗೆ ಟ್ಯಾಕ್ಸ್ ಅನ್ವಯ ಆಗುತ್ತದೆ. ಗಿಫ್ಟ್ ಟ್ಯಾಕ್ಸ್ ನಿಯಮಗಳಿವೆ. ಬಂಧುಗಳಿಂದ ಬರುವ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ಇತರರಿಂದ ಬಂದ ಗಿಫ್ಟ್ಗೆ ಟ್ಯಾಕ್ಸ್ ಇರುತ್ತದೆ. ಗಿಫ್ಟ್ನ ಮೌಲ್ಯ 50,000 ರೂಗಿಂತ ಹೆಚ್ಚಿದ್ದರೆ ಟ್ಯಾಕ್ಸ್ ರೂಲ್ಸ್ ಅನ್ವಯ ಆಗುತ್ತದೆ.

ಮದುವೆ ಮಹೋತ್ಸವ ಇಬ್ಬರು ವ್ಯಕ್ತಿಗಳ ಜೀವಮಾನದಲ್ಲಿ ಘಟಿಸುವ ಅತ್ಯಂತ ಮಹತ್ವಪೂರ್ಣ ಮತ್ತು ಅವಿಸ್ಮರಣೀಯ ಕ್ಷಣಗಳನ್ನು ಒಳಗೊಂಡಿರುತ್ತದೆ. ಭಾರತದ ಹೆಚ್ಚಿನ ಮದುವೆಗಳಲ್ಲಿ ನೆಂಟರಿಷ್ಟರು, ಸ್ನೇಹಿತರು ಉಡುಗೊರೆಗಳನ್ನು ಕೊಡುವ ಪದ್ದತಿ ರೂಢಿಯಲ್ಲಿದೆ. ಆದರೆ, ನಿಯಮಗಳ ಪ್ರಕಾರ ಉಡುಗೊರೆಗಳಿಗೆ ತೆರಿಗೆ ಅನ್ವಯ ಆಗುತ್ತದೆ. ಗಿಫ್ಟ್ ಟ್ಯಾಕ್ಸ್ ನಿಯಮಗಳ (Gift tax rules) ಪ್ರಕಾರ ಸಂಬಂಧಿಕರಲ್ಲದ ವ್ಯಕ್ತಿಗಳಿಂದ ಬರುವ 50,000 ರೂಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳಿಗೆ ಟ್ಯಾಕ್ಸ್ ಇರುತ್ತದೆ.
ಭಾರತೀಯ ಮದುವೆಗಳಲ್ಲಿ ವರನಿಗೆ ಅಥವಾ ವಧುವಿಗೆ ಚಿನ್ನದ ಉಂಗುರವೋ, ಓಲೆಯೋ, ಮೂಗುತಿಯೋ ಇನ್ನೇನಾದರೂ ಉಡುಗೊರೆ ಕೊಡುವುದು ಸಾಮಾನ್ಯ. 5 ಗ್ರಾಮ್ ಚಿನ್ನವೆಂದರೂ ಮೌಲ್ಯ 50,000 ರೂಗಿಂತ ಹೆಚ್ಚೇ ಆಗುತ್ತದೆ. ಹೀಗಾಗಿ, ಇಂಥವಕ್ಕೆ ಟ್ಯಾಕ್ಸ್ ಅನ್ವಯ ಆಗಬಹುದು.
ಇದನ್ನೂ ಓದಿ: 20-25 ವರ್ಷದ ಯುವಕರು ಕಲಿಯಬೇಕಾದ ಪ್ರಮುಖ ಹಣಕಾಸು ಪಾಠಗಳು
ಟ್ಯಾಕ್ಸ್ ಯಾವಾಗ ಕಟ್ಟಬೇಕು?
ಗಿಫ್ಟ್ ಆಗಿ ಬಂದ ಆಸ್ತಿಯನ್ನು ಐಟಿಆರ್ ಸಲ್ಲಿಸುವಾಗ ‘ಇನ್ಕಮ್ ಫ್ರಂ ಅದರ್ ಸೋರ್ಸಸ್’ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಹತ್ತಿರದ ಬಂಧುಗಳಿಂದ ಗಿಫ್ಟ್ ಬಂದಿದ್ದರೆ ಇದನ್ನು ನಮೂದಿಸುವ ಅಗತ್ಯ ಇರದು.
ಮದುವೆ ವೇಳೆ ಬಂಧುಗಳಿಂದ ಗಿಫ್ಟ್ ಬಂದಿದ್ದರೆ ಅದಕ್ಕೆ ತೆರಿಗೆ ವಿನಾಯಿತಿಗೆ ಕೋರಿಕೆ ಸಲ್ಲಿಸಬಹುದು. ಅಗತ್ಯ ಬಿದ್ದರೆ, ಅದಕ್ಕೆ ಪೂರಕವಾದ ದಾಖಲೆಗಳು ನಿಮ್ಮಲ್ಲಿ ಇರಬೇಕಾಗುತ್ತದೆ. ಉದಾಹರಣೆಗೆ, ಇನ್ವಿಟೇಶನ್ ಕಾರ್ಡ್, ಡೋನರ್ ಲಿಸ್ಟ್, ಮೆಸೇಜ್, ಇಮೇಲ್, ಬ್ಯಾಂಕ್ ಸ್ಟೇಟ್ಮೆಂಟ್, ಸಮಾರಂಭದಲ್ಲಿ ಗಿಫ್ಟ್ ಕೊಟ್ಟ ವ್ಯಕ್ತಿಯ ಫೋಟೋ ಅಥವಾ ವಿಡಿಯೋ ಇತ್ಯಾದಿ ಪುರಾವೆಗಳು ಇರಬೇಕು. ಅಕಸ್ಮಾತ್ ತೆರಿಗೆ ಅಧಿಕಾರಿಗಳು ಕೇಳಿದರೆ ಇವುಗಳನ್ನು ನೀಡಬಹುದು.
ಇದನ್ನೂ ಓದಿ: ಹಣ ಮತ್ತು ಗಣಿತದ ಜುಗಲ್ಬಂದಿ ಸೀಕ್ರೆಟ್… 5 ವರ್ಷಕ್ಕೆ 1 ಲಕ್ಷ, ಮುಂದಿನ 10 ವರ್ಷಕ್ಕೆ ಆರು ಪಟ್ಟು ರಿಟರ್ನ್
ಗಿಫ್ಟ್ ಆರ್ಟಿಕಲ್ಗಳನ್ನು ನೀವು ಮುಂದೆ ಮಾರಿದಾಗ ಅದರಿಂದ ಲಾಭ ಸಿಕ್ಕರೆ ಅದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ ಎನ್ನಲಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




