AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಮತ್ತು ಗಣಿತದ ಜುಗಲ್​ಬಂದಿ ಸೀಕ್ರೆಟ್… 5 ವರ್ಷಕ್ಕೆ 1 ಲಕ್ಷ, ಮುಂದಿನ 10 ವರ್ಷಕ್ಕೆ ಆರು ಪಟ್ಟು ರಿಟರ್ನ್

Money compounding effect on investments: ಹೂಡಿಕೆದಾರರು ಶಿಸ್ತು ಮತ್ತು ಸಂಯಮ ಹೊಂದಿದ್ದರೆ ಅದ್ಬುತ ರಿಟರ್ನ್ ನಿರೀಕ್ಷಿಸಬಹುದು. ಹೂಡಿಕೆಯ ಅವಧಿಯನ್ನು ಹೆಚ್ಚಿಸಿದಷ್ಟೂ ಅದಕ್ಕೆ ಸಿಗುವ ರಿಟರ್ನ್ ಕೂಡ ಹೆಚ್ಚೆಚ್ಚುತ್ತಾ ಹೋಗುತ್ತದೆ. ಇದು ಗಣಿತದಲ್ಲಿ ಬರುವ ಮನಿ ಕಾಂಪೌಂಡಿಂಗ್ ಗುಣದ ಪರಿಣಾಮ. ನಿಮ್ಮ ಹೂಡಿಕೆ 1 ವರ್ಷದಲ್ಲಿ ಬೆಳೆಯುತ್ತೆ, 10, 15 ಮತ್ತು 30 ವರ್ಷದಲ್ಲಿ ಎಷ್ಟು ಬೆಳೆಯುತ್ತೆ ಎನ್ನುವ ವಿವರ ಇಲ್ಲಿದೆ...

ಹಣ ಮತ್ತು ಗಣಿತದ ಜುಗಲ್​ಬಂದಿ ಸೀಕ್ರೆಟ್... 5 ವರ್ಷಕ್ಕೆ 1 ಲಕ್ಷ, ಮುಂದಿನ 10 ವರ್ಷಕ್ಕೆ ಆರು ಪಟ್ಟು ರಿಟರ್ನ್
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2025 | 1:01 PM

Share

ಹಾಗೇ ಬಿಟ್ಟ ಹಣದ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಂದುತ್ತಲೇ ಇರುತ್ತದೆ. ಆದ್ದರಿಂದ ನೀವು ಉಳಿಸಿದ ಹಣವನ್ನು ಸರಿಯಾದ ಸ್ಥಳಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಹಣದ ಮಹಿಮೆ ವ್ಯಕ್ತವಾಗಬೇಕಾದರೆ ಹೂಡಿಕೆ ಅಗತ್ಯವೇ ಅಗತ್ಯ. ಬಹಳ ಜನರು ಹೂಡಿಕೆ ಮಾಡುತ್ತಾರಾದರೂ ಬೇಗ ಸಂಯಮ ಕಳೆದುಕೊಳ್ಳುವುದುಂಟು. 20 ವರ್ಷದಲ್ಲಿ 10 ಕೋಟಿ ರೂ ಗಳಿಸಬಹುದು ಎಂದು ಭಾವಿಸಿ ಹೂಡಿಕೆ (Investments) ಆರಂಭಿಸಿದವರು ಐದು ವರ್ಷವಾಗುವಷ್ಟರಲ್ಲಿ ಭ್ರಮ ನಿರಸನಗೊಂಡು ಹೂಡಿಕೆಯಿಂದ ಹೊರಬರುವುದುಂಟು. ಇವರು ಮುಂದಿನ ವರ್ಷಗಳಲ್ಲಿ ಹಣದ ಮ್ಯಾಜಿಕ್ ಪವರ್ ಎಂಥದ್ದು ಎಂದು ಗೊತ್ತೇ ಆಗುವುದಿಲ್ಲ.

ಹಣದ ಕಾಂಪೌಂಡಿಂಗ್ ಮಹಿಮೆ ತಿಳಿದಿರಿ…

ಹಣಕಾಸು ತಜ್ಞರೊಬ್ಬರ ಸಲಹೆ ಮೇರೆಗೆ 20 ವರ್ಷದಲ್ಲಿ 1 ಕೋಟಿ ರೂ ಗಳಿಸುವ ಗುರಿಯೊಂದಿಗೆ 10,000 ರೂಗಳ ಮಾಸಿಕ ಎಸ್​​ಐಪಿ ಆರಂಭಿಸುತ್ತೀರಿ. ನಿಮ್ಮ ಎಸ್​ಐಪಿ ಇರುವ ಮ್ಯೂಚುವಲ್ ಫಂಡ್ ವಾರ್ಷಿಕವಾಗಿ ಸರಾಸರಿ ಶೇ. 12ರಷ್ಟು ರಿಟರ್ನ್ ಕೊಡುತ್ತಾ ಹೋಗುತ್ತದೆ ಎಂದಿಟ್ಟುಕೊಳ್ಳಿ. ನಿಮ್ಮ ಎಸ್​ಐಪಿ ಹೂಡಿಕೆ ಮೌಲ್ಯ 1 ವರ್ಷದಲ್ಲಿ 1.28 ಲಕ್ಷ ರೂ ಆಗಿರುತ್ತದೆ. ನಿಮಗೆ ಸಿಕ್ಕಿರುವ ರಿಟರ್ನ್ ಕೇವಲ 8,093 ರೂ ಮಾತ್ರ.

ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…

ಹಾಗೇ 5 ವರ್ಷ ನೀವು ಎಸ್​ಐಪಿ ಮುಂದುವರಿಸುತ್ತೀರಿ. ನೀವು ಅಲ್ಲಿಯವರೆಗೆ 6,00,000 ರೂ ಕಟ್ಟಿರುತ್ತೀರಿ. ನಿಮ್ಮ ಹೂಡಿಕೆ ಮೌಲ್ಯ 8,24,864 ರೂ ಆಗುತ್ತದೆ. ಹೂಡಿಕೆಗೆ 5 ವರ್ಷದಲ್ಲಿ ಸಿಕ್ಕ ರಿಟರ್ನ್ 2.24 ಲಕ್ಷ ರೂ. ಒಂದು ಕೋಟಿ ರೂನ ಗುರಿ ಮುಟ್ಟುವುದು ಅಸಾಧ್ಯ ಎಂದು ಅನೇಕರು ಹತಾಶೆಗೊಳ್ಳುವ ಹಂತ ಇದು. ಆದರೆ, ಇಲ್ಲಿಂದ ಮುಂದಿನ ಹಾದಿ ಬಹಳ ರೋಚಕ ಮತ್ತು ಅದ್ಭುತವಾಗಿರುತ್ತದೆ ಎಂಬುದು ಬಹಳ ಜನರಿಗೆ ಗೊತ್ತೇ ಇರುವುದಿಲ್ಲ.

ಇದೇ 10,000 ರೂ ಮಾಸಿಕ ಹೂಡಿಕೆಯು 5 ವರ್ಷದಲ್ಲಿ 8.24 ಲಕ್ಷ ರೂ ಆಗುತ್ತದೆ. ಮುಂದಿನ 5 ವರ್ಷದಲ್ಲಿ ಇದು ಬರೋಬ್ಬರಿ 23 ಲಕ್ಷ ರೂ ಆಗುತ್ತದೆ. ನಿಮ್ಮ ಹೂಡಿಕೆ ಹಣ ಬಹುತೇಕ ಡಬಲ್ ಆಗಿರುತ್ತದೆ. ಮತ್ತೂ 5 ವರ್ಷ ನೀವು ಎಸ್​ಐಪಿ ಮುಂದುವರಿಸಿದಲ್ಲಿ ಹೂಡಿಕೆ ಮೌಲ್ಯ 50 ಲಕ್ಷ ರೂ ದಾಟಿ ಹೋಗಿರುತ್ತದೆ. ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಿದರೆ ನಿಮ್ಮ ಹೂಡಿಕೆ ಮೌಲ್ಯ 1 ಕೋಟಿ ರೂ ಮುಟ್ಟಿರುತ್ತದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಯುಎಎನ್ ಮತ್ತು ಇಪಿಎಫ್ ಖಾತೆಗಳು ಇದ್ದರೆ ಏನು ಮಾಡಬೇಕು? ಇಲ್ಲಿವೆ ಕ್ರಮಗಳು

ಅಂದರೆ, 20 ವರ್ಷದವರೆಗೂ ನೀವು ಸಂಯಮದಿಂದ ಮತ್ತು ನಿರಂತರವಾಗಿ ಎಸ್​ಐಪಿ ಮುಂದುವರಿಸುತ್ತಾ ಹೋದರೆ ನಿಮ್ಮ ಗುರಿ ಮುಟ್ಟಿರುತ್ತದೆ. ನೀವು ಆ ಹೂಡಿಕೆಯನ್ನು ಇನ್ನೂ 10 ವರ್ಷ ಮುಂದುವರಿಸಿಕೊಂಡು ಹೋದಲ್ಲಿ 3.50 ಕೋಟಿ ರೂ ಒಡೆಯರಾಗಬಹುದು. ಇದು ದೀರ್ಘಾವಧಿ ಹೂಡಿಕೆಯಿಂದ ನಿಮಗೆ ಸಿಗುವ ಅದ್ಭುತ ರಿಟರ್ನ್. ಇದು ಗಣಿತದಲ್ಲಿ ಹಣದ ಕಾಂಪೌಂಡಿಂಗ್ ಗುಣದ ಪರಿಣಾಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ