AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಗಡುವು ಅಕ್ಟೋಬರ್ 31ರವರೆಗೂ ವಿಸ್ತರಣೆ

Deadline to submit TAR is extended to Oct 31st: ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಡಿಟಿ ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಕಾಲಾವಕಾಶ ವಿಸ್ತರಿಸಿದೆ. ಸೆಪ್ಟೆಂಬರ್ 30ಕ್ಕೆ ಇದ್ದ ಡೆಡ್​ಲೈನ್ ಅನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲಾಗಿದೆ. ನೈಸರ್ಗಿಕ ವಿಕೋಪ ಮತ್ತಿತರ ಕಾರಣಕ್ಕೆ ಬ್ಯುಸಿನೆಸ್ ಚಟುವಟಿಕೆ ಧಕ್ಕೆಯಾದ ಕಾರಣ ಸಕಾಲಕ್ಕೆ ಟಿಎಆರ್ ಸಲ್ಲಿಸಲು ಆಗುತ್ತಿಲ್ಲ ಎಂದು ವಿವಿಧ ಸಂಘಟನೆಗಳು ಕೋರ್ಟ್ ಮೊರೆ ಹೋಗಿದ್ದವು.

ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಗಡುವು ಅಕ್ಟೋಬರ್ 31ರವರೆಗೂ ವಿಸ್ತರಣೆ
ಟ್ಯಾಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2025 | 7:12 PM

Share

ನವದೆಹಲಿ, ಸೆಪ್ಟೆಂಬರ್ 25: ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳನ್ನು (TAR- Tax Audit Report) ಸಲ್ಲಿಸಲು ಸೆಪ್ಟೆಂಬರ್ 30ಕ್ಕೆ ಇದ್ದ ಗಡುವನ್ನು ಒಂದು ತಿಂಗಳು ವಿಸ್ತರಿಸಲಾಗಿದೆ. ಇದೀಗ ಟಿಎಆರ್​ಗಳನ್ನು ಸಲ್ಲಿಸಲು ಅಕ್ಟೋಬರ್ 31ರವರೆಗೂ ಕಾಲಾವಕಾಶ ಸಿಕ್ಕಂತಾಗಿದೆ. ಆದಾಯ ತೆರಿಗೆಗಳ ಕಾನೂನು ನಿಯಂತ್ರಕವಾದ ಸಿಬಿಡಿಟಿ ಎರಡು ಹೈಕೋರ್ಟ್​ಗಳ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಂಡಿದೆ. ರಾಜಸ್ಥಾನ್ ಹೈಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳನ್ನು ಸಲ್ಲಿಸಲು ಡೆಡ್​ಲೈನ್ ಅನ್ನು ಅ. 31ರವರೆಗೆ ವಿಸ್ತರಿಸುವಂತೆ ಸಿಬಿಡಿಟಿಗೆ ನಿರ್ದೇಶನ ನೀಡಿದ್ದವು.

ತೆರಿಗೆ ಪಾವತಿದಾರರು ಹಾಗೂ ಪ್ರಾಕ್ಟೀಶನರ್​ಗಳಿಗೆ ಆಡಿಟ್ ರಿಪೋರ್ಟ್ ಅನ್ನು ಸರಿಯಾದ ಸಮಯಕ್ಕೆ ಮುಗಿಸಲು ಕೆಲ ಸಮಸ್ಯೆಗಳಿವೆ ಎಂದು ಹೇಳಿ ಚಾರ್ಟರ್ಡ್ ಅಕೌಂಟೆಂಟ್ ಸಂಘಟನೆಗಳು ಒಳಗೊಂಡಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಿಬಿಡಿಟಿಯನ್ನು ಸಂಪರ್ಕಿಸಿದ್ದುವಂತೆ. ದೇಶದ ಕೆಲ ಭಾಗಗಳಲ್ಲಿ ಪ್ರವಾಹ ಹಾಗು ಇತರ ನೈಸರ್ಗಿಕ ವಿಕೋಪಗಳಿಂದ ಬ್ಯುಸಿನೆಸ್ ಚಟುವಟಿಕೆಗೆ ಧಕ್ಕೆಯಾಗಿದೆ. ಇದರಿಂದ ಆಡಿಟ್ ಮಾಡುವುದು ವಿಳಂಬವಾಗಿದೆ ಎಂಬುದು ಈ ಸಂಘಟನೆಗಳ ವಾದವಾಗಿದೆ.

ಇದನ್ನೂ ಓದಿ: ಬ್ಯಾಂಕ್​ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ

ಸಿಬಿಡಿಟಿ ಬಳಿ ಮನವಿ ಮಾಡಿದ್ದು ಮಾತ್ರವಲ್ಲ, ಈ ವಿಚಾರವು ವಿವಿಧ ಹೈಕೋರ್ಟ್​ಗಳಲ್ಲೂ ದಾಖಲಾಗಿದೆ. ಸದ್ಯ ರಾಜಸ್ಥಾನ್ ಹೈಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಡೆಡ್​ಲೈನ್ ವಿಸ್ತರಿಸುವಂತೆ ಸಿಬಿಡಿಟಿಗೆ ನಿರ್ದೇಶನ ನೀಡಿವೆ.

ಇದೇ ವೇಳೆ, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಸುದ್ದಿಯನ್ನು ಸಿಬಿಡಿಟಿ ಅಲ್ಲಗಳೆದಿದೆ. ಪೋರ್ಟಲ್​ನಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲ. ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳು ಸರಿಯಾಗಿ ಅಪ್​ಲೋಡ್ ಆಗುತ್ತಿವೆ ಎಂದು ಸಿಬಿಡಿಟಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಭಾರತದ ಮೊಬೈಲ್ ರಫ್ತು ಕಡಿಮೆ ಆಗಿಲ್ಲ; ಆಗಸ್ಟ್​ನಲ್ಲಿ ಗಣನೀಯ ಏರಿಕೆ: ಐಸಿಇಎ ದತ್ತಾಂಶ ಬಿಡುಗಡೆ

ಸೆಪ್ಟೆಂಬರ್ 24ರಂದು ಒಂದೇ ದಿನ 60,000ಕ್ಕೂ ಅಧಿಕ ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳು ಅಪ್​ಲೋಡ್ ಆಗಿವೆ. ಇಲ್ಲಿಯವರೆಗೆ ಅಪ್​ಲೋಡ್ ಆದ ಟಿಎಆರ್​ಗಳ ಸಂಖ್ಯೆ 4 ಲಕ್ಷಕ್ಕೂ ಅಧಿಕ. ಇದೇ ವೇಳೆ, ಸೆಪ್ಟೆಂಬರ್ 23ರವರೆಗೂ ಸಲ್ಲಿಕೆಯಾದ ಐಟಿ ರಿಟರ್ನ್​ಗಳ ಸಂಖ್ಯೆ 7.57 ಕೋಟಿಗೂ ಅಧಿಕ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!