AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ

RTGS, NEFT, IMPS payment systems: ಬ್ಯಾಂಕುಗಳಲ್ಲಿ ಹಣ ವರ್ಗಾವಣೆ ಮಾಡಲು ಆರ್​ಟಿಜಿಎಸ್, ಎನ್​ಇಎಫ್​ಟಿ, ಐಎಂಪಿಎಸ್ ಇತ್ಯಾದಿ ವಿಧಾನಗಳಿವೆ. ಇತ್ತೀಚೆಗೆ ಹಲವು ಬ್ಯಾಂಕುಗಳು ಈ ಪೇಮೆಂಟ್​ಗಳಿಗೆ ಶುಲ್ಕಗಳನ್ನು ಪರಿಷ್ಕರಿಸಿವೆ. ಎನ್​ಇಎಫ್​ಟಿ ರಿಯಲ್ ಟೈಮ್​ನಲ್ಲಿ ಹಣ ಕ್ರೆಡಿಟ್ ಮಾಡೋದಿಲ್ಲ. ಆನ್​ಲೈನ್​ನಲ್ಲಿ ಇದು ಪೂರ್ಣ ಉಚಿತ. ಆದರೆ, ಆನ್​ಲೈನ್​ನಲ್ಲಿ ಮಾತ್ರವೇ ಮಾಡಬಹುದಾದ ಐಎಂಪಿಎಸ್ ಪಾವತಿಗೆ ಶುಲ್ಕಗಳಿರುತ್ತವೆ.

ಬ್ಯಾಂಕ್​ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ
ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2025 | 4:04 PM

Share

ಇತ್ತೀಚೆಗೆ ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ತಮ್ಮ ವಿವಿಧ ಸರ್ವಿಸ್ ಚಾರ್ಜ್​ಗಳನ್ನು ಪರಿಷ್ಕರಿಸಿವೆ. ಎನ್​ಇಎಫ್​ಟಿ, ಐಎಂಪಿಎಸ್ ಇತ್ಯಾದಿ ಪೇಮೆಂಟ್ ಸರ್ವಿಸ್​ಗಳಿಗೆ ಶುಲ್ಕವನ್ನು (Service charge) ಹೆಚ್ಚಿಸಿವೆ. ಅಷ್ಟಕ್ಕೂ ಯಾವ್ಯಾವ ವಿಧದ ಪೇಮೆಂಟ್ ಸಿಸ್ಟಂಗಳಿವೆ, ಇವುಗಳಿಗೆ ಎಷ್ಟು ಶುಲ್ಕ, ಟ್ರಾನ್ಸ್​ಫರ್ ಮಿತಿ ಇದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.

ಬ್ಯಾಂಕ್​ನಲ್ಲಿ ವಿವಿಧ ಪೇಮೆಂಟ್ ವಿಧಗಳು

  • ಎನ್​ಇಎಫ್​ಟಿ
  • ಐಎಂಪಿಎಸ್
  • ಆರ್​ಟಿಜಿಎಸ್
  • ಇಸಿಎಸ್/ಎಸಿಎಚ್

ನೆಟ್​ಬ್ಯಾಂಕಿಂಗ್​ನಲ್ಲಿ ನೀವು ಹಣ ಕಳುಹಿಸುವುದಾದರೆ ಹೆಚ್ಚಾಗಿ ಎನ್​ಇಎಫ್​ಟಿ ಮತ್ತು ಐಎಂಪಿಎಸ್ ಅನ್ನು ಬಳಸುತ್ತೀರಿ. ಎರಡಕ್ಕೂ ವ್ಯತ್ಯಾಸ ಇದೆ. ಎನ್​ಇಎಫ್​ಟಿ ಎಂದರೆ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್. ಬ್ಯಾಚ್​ಗಳಲ್ಲಿ ಇವುಗಳ ಪೇಮೆಂಟ್ ಅನ್ನು ಸೆಟಲ್ಮೆಂಟ್ ಮಾಡಲಾಗುತ್ತದೆ.

ಎನ್​ಇಎಫ್​ಟಿಯಲ್ಲಿ ನೀವು ಟ್ರಾನ್ಸಾಕ್ಷನ್ ಮಾಡಿದಾಗ, ಅದನ್ನು ಬೇರೆಯವರ ಕೆಲ ಟ್ರಾನ್ಸಾಕ್ಷನ್​ಗಳ ಜೊತೆ ಒಂದು ಬ್ಯಾಚ್​ಗೆ ಸೇರಿಸಲಾಗುತ್ತದೆ. ಒಂದು ಬ್ಯಾಚ್ ನಂತರ ಮತ್ತೊಂದು ಬ್ಯಾಚ್ ಹೀಗೆ ಗುಂಪಾಗಿ ಪೇಮೆಂಟ್ ಸೆಟಲ್ಮೆಂಟ್ ಮಾಡಲಾಗುತ್ತದೆ. ಹೀಗಾಗಿ, ತತ್​ಕ್ಷಣಕ್ಕೆ ಪೇಮೆಂಟ್ ಆಗೋದಿಲ್ಲ. ಹಣ ಕ್ರೆಡಿಟ್ ಆಗಲು 30 ನಿಮಿಷದಿಂದ ಹಿಡಿದು ಒಂದು ಗಂಟೆಯವರೆಗೆ ಕಾಯಬೇಕಾಗಬಹುದು.

ಇದನ್ನೂ ಓದಿ: ಸಣ್ಣ ಉದ್ದಿಮೆಗಳು ಜಿಎಸ್​ಟಿಗೆ ನೊಂದಾಯಿಸುವುದು ಕಡ್ಡಾಯವಾ? ನಿಯಮವೇನಿದೆ? ಯಾರಿಗೆ ಕಡ್ಡಾಯ?

ನೀವು ಆನ್​ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಬ್ಯಾಂಕ್ ಶಾಖೆಯಲ್ಲಿ ಎನ್​ಇಎಫ್​ಟಿ ಮಾಡಬಹುದು. ಆನ್​ಲೈನ್​ನಲ್ಲಿ ಎನ್​ಇಎಫ್​ಟಿ ಮೂಲಕ ಹಣ ಕಳುಹಿಸಲು ಶುಲ್ಕ ಇರುವುದಿಲ್ಲ. ಬ್ಯಾಂಕ್ ಶಾಖೆಗಳಲ್ಲಿ ಶುಲ್ಕ ಇರುತ್ತದೆ. ಸಾಮಾನ್ಯವಾಗಿ ಎರಡು ರೂನಿಂದ ಹಿಡಿದು 25 ರೂವರೆಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಕೂಡಲೇ ಹಣ ಕಳುಹಿಸಲು ಐಎಂಪಿಎಸ್

ಐಎಂಪಿಎಸ್ ಎಂದರೆ ಇಮ್ಮೀಡಿಯೇಟ್ ಪೇಮೆಂಟ್ ಸರ್ವಿಸ್. ಎನ್​ಪಿಸಿಐನಿಂದ ಅಭಿವೃದ್ಧಿಗೊಂಡ ಪೇಮೆಂಟ್ ಸಿಸ್ಟಂ. ತತ್​ಕ್ಷಣಕ್ಕೆ ಹಣ ಕ್ರೆಡಿಟ್ ಆಗುತ್ತದೆ. ಯುಪಿಐ ಅನ್ನು ಇದೇ ಪ್ಲಾಟ್​ಫಾರ್ಮ್ ಅಡಿ ಅಭಿವೃದ್ಧಪಡಿಸಲಾಗಿದೆ.

ಐಎಂಪಿಎಸ್​ನಲ್ಲಿ ನೀವು 5 ಲಕ್ಷ ರೂವರೆಗೆ ಮಾತ್ರ ಹಣ ಕಳುಹಿಸಲು ಪರಿಮಿತಿ ಇದೆ. ಆನ್​ಲೈನ್​ನಲ್ಲಿ ಮಾತ್ರವೇ ಇದರ ಪಾವತಿ ಇರುತ್ತದೆ. ಬ್ಯಾಂಕ್ ಶಾಖೆಯಲ್ಲಿ ಎನ್​ಇಎಫ್​ಟಿ, ಆರ್​​ಟಿಜಿಎಸ್ ಪೇಮೆಂಟ್ ವಿಧಾನಗಳಿರುತ್ತವೆ.

ಐಎಂಪಿಎಸ್ ಮೂಲಕ ಹಣ ಪಾವತಿಸಲು ಶುಲ್ಕ ಎರಡು ರೂನಿಂದ ಹಿಡಿದು 15 ರೂವರೆಗೆ ಇರುತ್ತದೆ.

ಆರ್​ಟಿಜಿಎಸ್ ಪೇಮೆಂಟ್ ಸಿಸ್ಟಂ

ಆರ್​ಟಿಜಿಎಸ್ ಎಂದರೆ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್. ಐಎಂಪಿಎಸ್ ರೀತಿಯಲ್ಲಿ ಇದೂ ಕೂಡ ರಿಯಲ್ ಟೈಮ್​ನಲ್ಲಿ ಹಣ ಕ್ರೆಡಿಟ್ ಮಾಡುತ್ತದೆ. ಎನ್​ಇಎಫ್​ಟಿ ರೀತಿ ಬ್ಯಾಚ್ ಪ್ರೋಸಸಿಂಗ್ ಆಗಲು ಕಾಯಬೇಕಿಲ್ಲ. ಆದರೆ, 2 ಲಕ್ಷ ರೂಗಿಂತ ಹೆಚ್ಚು ಮೊತ್ತದ ಹಣ ಕಳುಹಿಸಬೇಕಾದರೆ ಮಾತ್ರ ಆರ್​ಟಿಜಿಎಸ್ ಬಳಸಲು ಸಾಧ್ಯ. ಇದಕ್ಕೆ ಶುಲ್ಕ 15 ರೂನಿಂದ 45 ರೂ ಇದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್, ಗೂಗಲ್​ಗೆ ಸ್ಪರ್ಧೆಯೊಡ್ಡುವ ಭಾರತೀಯ ಸಂಸ್ಥೆ ಝೋಹೋ ಈಗ ಟ್ರೆಂಡಿಂಗ್​ನಲ್ಲಿ; ಹಳ್ಳಿಯಲ್ಲಿರುವ ಈ ಕಂಪನಿಯ ವಿಶೇಷತೆಗಳೇನು?

ಬ್ಯಾಂಕ್ ಗ್ರಾಹಕರು ಯಾವ ಪೇಮೆಂಟ್ ವಿಧಾನ ಬಳಸಬಹುದು?

ಸದ್ಯ ಯುಪಿಐನಲ್ಲಿ ಹಣ ಪಾವತಿಸಲು ಶುಲ್ಕ ಇಲ್ಲ. ಆದರೆ, ದಿನದ ಮಿತಿ ಇದೆ. ಒಂದು ಲಕ್ಷ ರೂ ಮೇಲ್ಪಟ್ಟು, ಮತ್ತು ಐದು ಲಕ್ಷ ರೂ ಒಳಗಿರುವ ಮೊತ್ತವನ್ನು ಪಾವತಿಸಬೇಕೆಂದರೆ ಆನ್​ಲೈನ್​ನಲ್ಲಿ ಐಎಂಪಿಎಸ್ ಬಳಸಬಹುದು. ತತ್​ಕ್ಷಣಕ್ಕೆ ಹಣ ಕ್ರೆಡಿಟ್ ಆಗುವ ಅವಶ್ಯಕತೆ ಇಲ್ಲ ಎನ್ನುವ ಸಂದರ್ಭ ಇದ್ದರೆ ಎನ್​ಇಎಫ್​ಟಿ ಮಾಡಬಹುದು.

ಆದರೆ, 5 ಲಕ್ಷ ರೂಗೂ ಹೆಚ್ಚಿನ ಮೊತ್ತ ಇದ್ದು, ಅದು ತತ್​ಕ್ಷಣವೇ ಅಕೌಂಟ್​ಗೆ ಕ್ರೆಡಿಟ್ ಆಗಬೇಕೆಂದರೆ ಆರ್​ಟಿಜಿಎಸ್ ಮಾಡುವುದು ಉತ್ತಮ. ಇಲ್ಲದಿದ್ದರೆ ಆನ್​ಲೈನ್​ನಲ್ಲೇ ಎನ್​ಇಎಫ್​ಟಿ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ