ಸಣ್ಣ ಉದ್ದಿಮೆಗಳು ಜಿಎಸ್ಟಿಗೆ ನೊಂದಾಯಿಸುವುದು ಕಡ್ಡಾಯವಾ? ನಿಯಮವೇನಿದೆ? ಯಾರಿಗೆ ಕಡ್ಡಾಯ?
GST registration rules in India: ಬಹಳ ಸಣ್ಣ ಉದ್ದಿಮೆಗಳು ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸುವುದು ಕಡ್ಡಾಯವೇನಿಲ್ಲ. ಆದರೆ, ಉದ್ದಿಮೆಯ ವಿಶ್ವಾಸಾರ್ಹತೆ ಹೆಚ್ಚಿಸಲು ಜಿಎಸ್ಟಿ ನೊಂದಣಿ ಸಹಾಯವಾಗುತ್ತದೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇತ್ಯಾದಿ ಸೌಲಭ್ಯವನ್ನೂ ಬಳಸಿಕೊಳ್ಳಬಹುದು. ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸುವುದು ಹೇಗೆ, ಯಾರಿಗೆ ಕಡ್ಡಾಯ ಇತ್ಯಾದಿ ವಿವರ ಇಲ್ಲಿದೆ.

ಎಲ್ಲಾ ಉದ್ದಿಮೆಗಳು ಜಿಎಸ್ಟಿಗೆ (GST) ನೊಂದಾಯಿಸಬೇಕಾ ಎನ್ನುವ ಅನುಮಾನ ಬಹಳಷ್ಟು ಮಂದಿಗೆ ಇದೆ. ಕಮರ್ಷಿಯಲ್ ಆದಾಯ ಗಳಿಸುತ್ತಿರುವವರೆಲ್ಲರೂ ಜಿಎಸ್ಟಿ ನೊಂದಾಯಿಸಿಕೊಳ್ಳುವುದು ಉತ್ತಮ. ಆದರೆ, ಎಲ್ಲರಿಗೂ ಕಡ್ಡಾಯವೇನಿಲ್ಲ. ಆದರೆ ಜಿಎಸ್ಟಿ ರಿಜಿಸ್ಟ್ರೇಶನ್ (GST Registration) ಮಾಡಿಸುವುದರಿಂದ ನಿಮ್ಮ ವ್ಯವಹಾರ ಸಣ್ಣದಿರಲಿ, ದೊಡ್ಡದಿರಲಿ, ಅಧಿಕೃತತೆ ಮತ್ತು ವಿಶ್ವಾಸಾರ್ಹತೆ ಹೆಚ್ಚುತ್ತದೆ.
ಜಿಎಸ್ಟಿ ನೊಂದಾವಣಿ ಕಡ್ಡಾಯ ಇರುವವರು
- ವರ್ಷಕ್ಕೆ 40 ಲಕ್ಷ ರೂ ಮೊತ್ತದ ವಹಿವಾಟು ಇರುವ ಉದ್ದಿಮೆಗಳು (ಸರಕುಗಳ ಮಾರಾಟ)
- ವರ್ಷಕ್ಕೆ 20 ಲಕ್ಷ ರೂ ಸರ್ವಿಸ್ ವಹಿವಾಟು ಹೊಂದಿರುವ ಉದ್ದಿಮೆಗಳು.
- ಈಶಾನ್ಯ ರಾಜ್ಯಗಳಂತಹ ವಿಶೇಷ ವಿಭಾಗದ ಪ್ರದೇಶಗಳಲ್ಲಿ 10 ಲಕ್ಷ ರೂಗಿಂತ ಹೆಚ್ಚು ಬ್ಯುಸಿನೆಸ್ ಹೊಂದಿರುವವರು.
- ಅಂತರರಾಜ್ಯ ಸರಬರಾಜು ಮಾಡುವ ಉದ್ದಿಮೆಗಳು
- ಇಕಾಮರ್ಸ್ ಮಾರಾಟಗಾರರು
- ಆಮದು ರಫ್ತು ಬ್ಯುಸಿನೆಸ್
ಇದನ್ನೂ ಓದಿ: ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್ಗಳನ್ನು ಅನಾವರಣಗೊಳಿಸಿದ ಸರ್ಕಾರ
ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸುವುದರಿಂದ ಅನುಕೂಲಗಳು
ನಿಮ್ಮ ಬ್ಯುಸಿನೆಸ್ ಕಡಿಮೆ ವಹಿವಾಟು ನಡೆಸುತ್ತಿದ್ದರೂ ಜಿಎಸ್ಟಿ ನೊಂದಾಯಿಸುವುದರಿಂದ ಕೆಲ ಅನುಕೂಲಗಳಿವೆ. ನಿಮ್ಮ ಬ್ಯುಸಿನೆಸ್ಗೆ ವಿಶ್ವಾಸಾರ್ಹತೆ ಹೆಚ್ಚುತ್ತದೆ, ಅಧಿಕೃತತೆ ಹೆಚ್ಚುತ್ತದೆ. ಬ್ಯುಸಿನೆಸ್ ಹೆಚ್ಚಿಸಲು ಇದು ನೆರವಾಗುತ್ತದೆ.
ಜಿಎಸ್ಟಿ ರಿಜಿಸ್ಟ್ರೇಶನ್ ಇದ್ದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಮಾಡಲು ಸಾಧ್ಯ. ನೀವು ಖರೀದಿಸುವ ವಸ್ತುಗಳಿಗೆ ಜಿಎಸ್ಟಿ ಪಾವತಿಸುತ್ತೀರಿ. ಇದನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಮೂಲಕ ಹಿಂಪಡೆಯಲು ಅವಕಾಶ ಇರುತ್ತದೆ.
ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸಿದಾಗ ನಿಮ್ಮ ವ್ಯವಹಾರದಲ್ಲಿ ಖರೀದಿ, ಖರ್ಚು, ಇನ್ವಾಯ್ಸ್, ಮಾರಾಟ ಇತ್ಯಾದಿ ಎಲ್ಲಾ ಲೆಕ್ಕಗಳನ್ನು ದಾಖಲೆ ಸಮೇತ ಇಟ್ಟಿರಬೇಕು.
ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸುವುದು ಹೇಗೆ?
ಈಗ ಆನ್ಲೈನ್ನಲ್ಲಿ ಸುಲಭವಾಗಿ ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸಬಹುದು. ಅದರ ವಿಳಾಸ: www.gst.gov.in
ಇಲ್ಲಿ ಎಲ್ಲಾ ಅಗತ್ಯ ಮಾಹಿತಿ ಭರ್ತಿ ಮಾಡಿ ಸುಲಭವಾಗಿ ಜಿಎಸ್ಟಿ ರಿಜಿಸ್ಟ್ರೇಶನ್ ಮಾಡಿಸಬಹುದು.
ಚಾರ್ಟರ್ಡ್ ಅಕೌಂಟೆಂಟ್ ನೆರವಿನಿಂದಲೂ ಒಂದಷ್ಟು ಶುಲ್ಕ ನೀಡಿ ಜಿಎಸ್ಟಿ ನೊಂದಾಯಿಸಬಹುದು.
ಸರ್ಕಾರವು ಜಿಎಸ್ಟಿ ನೊಂದಾವಣಿಗೆ ಯಾವುದೇ ಶುಲ್ಕ ಪಡೆಯುವುದಿಲ್ಲ. ಆನ್ಲೈನ್ನಲ್ಲಿ ಉಚಿತವಾಗಿ ರಿಜಿಸ್ಟ್ರೇಶನ್ ಮಾಡಬಹುದು ಎಂಬುದು ಗಮನದಲ್ಲಿರಲಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Tue, 23 September 25




