AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ಇಳಿಕೆ ದಿನವೇ ಕಾರುಗಳ ಬಂಪರ್ ಸೇಲ್; ಒಂದೇ ದಿನದಲ್ಲಿ ಮಾರುತಿಯ 30,000, ಹ್ಯೂಂಡಾಯ್​ನ 11,000 ಕಾರುಗಳ ಮಾರಾಟ

Car sales see huge rise on Sep 22nd: ಹೊಸ ಜಿಎಸ್​ಟಿ ದರ ಬಂದ ಬಳಿಕ ಬಹುತೇಕ ಎಲ್ಲಾ ಕಾರುಗಳ ಬೆಲೆ ಕಡಿಮೆ ಆಗಿದೆ. ಸೆಪ್ಟೆಂಬರ್ 22, ಸೋಮವಾರ ಒಂದೇ ದಿನ ಸಾಕಷ್ಟು ಕಾರುಗಳು ಮಾರಾಟವಾಗಿವೆ. ಸೆ. 22ರಂದು ಮಾರಾಟವಾದ ಮಾರುತಿ ಸುಜುಕಿ ಕಾರುಗಳ ಸಂಖ್ಯೆ 30,000 ದಾಟಿರುವ ಅಂದಾಜಿದೆ. ಹ್ಯೂಂಡಾಯ್ ಒಂದೇ ದಿನ 11,000 ಕಾರುಗಳನ್ನು ಮಾರಿದೆ. ಐದು ವರ್ಷದ ಹಿಂದಿನ ದಾಖಲೆ ಮುರಿದಿದೆ.

ಜಿಎಸ್​ಟಿ ಇಳಿಕೆ ದಿನವೇ ಕಾರುಗಳ ಬಂಪರ್ ಸೇಲ್; ಒಂದೇ ದಿನದಲ್ಲಿ ಮಾರುತಿಯ 30,000, ಹ್ಯೂಂಡಾಯ್​ನ 11,000 ಕಾರುಗಳ ಮಾರಾಟ
ಕಾರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2025 | 1:04 PM

Share

ನವದೆಹಲಿ, ಸೆಪ್ಟೆಂಬರ್ 23: ಜಿಎಸ್​ಟಿ (GST) ಇಳಿಕೆಯ ಪರಿಣಾಮ ನಿರೀಕ್ಷೆಯಂತೆ ಆಟೊಮೊಬೈಲ್ ಮಾರುಕಟ್ಟೆ ಗರಿಗೆದರಿದೆ. ತೆರಿಗೆ ಇಳಿಕೆಗೊಂಡ ದಿನವೇ ಕಾರುಗಳ ಭರ್ಜರಿ ಮಾರಾಟ ಕಂಡಿದೆ. ದೇಶಾದ್ಯಂತ ಬಹುತೇಕ ಎಲ್ಲಾ ಕಾರು ಡೀಲರ್​ಗಳು ಎಂದಿಗಿಂತ ಹೆಚ್ಚು ಸೇಲ್ಸ್ ಮಾಡಿದ್ದಾರೆ. ಸೆಪ್ಟೆಂಬರ್ 22ರಂದು ಸರ್ಕಾರ ಹೊಸ ಜಿಎಸ್​ಟಿ ಕ್ರಮ ಜಾರಿಗೆ ತಂದಿತು. ಅದರಲ್ಲಿ ಹೆಚ್ಚಿನ ಸರಕುಗಳ ಬೆಲೆ ಕಡಿಮೆ ಆಗಿದೆ. ಕಾರುಗಳ ಮೇಲಿನ ತೆರಿಗೆ ಶೇ. 28 ಇದ್ದದ್ದು ಶೇ. 18ಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ಕಾರುಗಳ ಬೆಲೆ ಸಾಕಷ್ಟು ಕಡಿಮೆ ಆಗಿದೆ.

ಭಾರತದ ಅಗ್ರಮಾನ್ಯ ವಾಹನ ತಯಾರಕರಾದ ಮಾರುತಿ ಸುಜುಕಿಯ 30,000 ಕಾರುಗಳು ಸೆಪ್ಟೆಂಬರ್ 22ರಂದು ಮಾರಾಟವಾಗಿರುವ ಅಂದಾಜು ಇದೆ. ಹ್ಯೂಂಡಾಯ್ ಮೋಟಾರ್ ಸಂಸ್ಥೆಯಂತೂ ಕಳೆದ 5 ವರ್ಷದಲ್ಲಿ ಅತಿಹೆಚ್ಚು ಒಂದು ದಿನದ ಸೇಲ್ಸ್ ಕಂಡಿದೆ. ಹ್ಯೂಂಡಾಯ್​ನ 11,000 ಕಾರುಗಳು ಸೆ. 22ರಂದು ಮಾರಾಟವಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜಿಎಸ್​ಟಿ 2.0; ಬೆಲೆ ತಗ್ಗಲಿರುವ ಮತ್ತು ದುಬಾರಿಯಾಗಲಿರುವ ವಸ್ತುಗಳು

ಮಾರುತಿ ಸುಜುಕಿಯ ಡೀಲರ್​ಗಳು ನಿನ್ನೆ ಸೋಮವಾರ ಒಂದೇ ದಿನ 80,000 ಗ್ರಾಹಕರು ವಿಚಾರಿಸಿರುವುದು ದಾಖಲಾಗಿದೆ. ಸಣ್ಣ ಕಾರುಗಳಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ.

ಆಟೊಮೊಬೈಲ್ ಡೀಲರ್​ಗಳ ಒಕ್ಕೂಟವಾದ ಎಫ್​ಎಡಿಎ ಸೋಮವಾರ ದೊಡ್ಡ ಸಂಖ್ಯೆಯಲ್ಲಿ ಜನರು ಶೋರೂಮುಗಳಿಗೆ ಬಂದು ಹೋಗಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಮಾರುತಿಯಿಂದ ಆಡಿವರೆಗೆ ಕಾರುಗಳ ಬೆಲೆ 30 ಲಕ್ಷ ರೂವರೆಗೆ ಇಳಿಕೆ

ಕಾರುಗಳ ಮೇಲೆ ಶೇ. 28ರಷ್ಟು ಇದ್ದ ಜಿಎಸ್​ಟಿ ದರ ಇದೀಗ ಶೇ. 18 ಮತ್ತು ಶೇ. 5ಕ್ಕೆ ಇಳಿದಿದೆ. 1,200 ಸಿಸಿ ಹಾಗೂ ಕಡಿಮೆ ಎಂಜಿನ್ ಸಾಮರ್ಥ್ಯದ ಕಾರುಗಳ ಬೆಲೆ ಸಾಕಷ್ಟು ತಗ್ಗಿದೆ. ಒಟ್ಟಾರೆ 30 ಲಕ್ಷ ರೂವರೆಗೂ ಕಾರುಗಳ ಬೆಲೆ ಕಡಿಮೆ ಆಗಿದೆ. ಜಿಎಸ್​ಟಿ ದರ ಇಳಿಕೆಯ ಲಾಭವನ್ನು ಬಹುತೇಕ ಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಿವೆ ಎಲ್ಲಾ ಆಟೊಮೊಬೈಲ್ ಕಂಪನಿಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ