Car Prices After GST Cut: ಮಾರುತಿಯಿಂದ ಆಡಿವರೆಗೆ ಕಾರುಗಳ ಬೆಲೆ 30 ಲಕ್ಷ ರೂವರೆಗೆ ಇಳಿಕೆ
Automobile companies reducing car rates: ಜಿಎಸ್ಟಿ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಜಿಎಸ್ಟಿ ಕಡಿತದ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುತ್ತಿವೆ ಕಾರ್ ಕಂಪನಿಗಳು. ಮಾರುತಿ ಸುಜುಕಿಯಿಂದ ಹಿಡಿದು ಲ್ಯಾಂಡ್ ರೋವರ್ವರೆಗೆ ವಿವಿಧ ಕಂಪನಿಗಳ ಕಾರುಗಳ ಬೆಲೆ 30 ಲಕ್ಷ ರೂವರೆಗೆ ಕಡಿಮೆ ಆಗಲಿದೆ.

ನವದೆಹಲಿ, ಸೆಪ್ಟೆಂಬರ್ 18: ವಾಹನ ಹಾಗೂ ಬಿಡಿಭಾಗಗಳ ಮೇಲೆ ಸೆಪ್ಟೆಂಬರ್ 22ರಿಂದ ಜಿಎಸ್ಟಿ ಶೇ. 28 ಇದ್ದದ್ದು ಶೇ. 28ಕ್ಕೆ ಇಳಿಯಲಿದೆ. ಸರ್ಕಾರದ ಆಶಯದಿಂದ ಜಿಎಸ್ಟಿ (GST) ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಎಲ್ಲಾ ಆಟೊಮೊಬೈಲ್ ಕಂಪನಿಗಳು ನಿರ್ಧರಿಸಿವೆ. ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂವರೆಗೆ ಇಳಿಕೆ ಆಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂವರೆಗೆ ಇಳಿಕೆಯಾಗಲಿದೆ. ಮರ್ಸಿಡೆಸ್ ಬೆಂಜ್, ಲ್ಯಾಂಡ್ ರೋವರ್ ಬ್ರ್ಯಾಂಡ್ನ ಕೆಲ ಕಾರುಗಳ ಬೆಲೆ 30 ಲಕ್ಷ ರೂವರೆಗೂ ಇಳಿಕೆ ಆಗಲಿದೆ. ಕಾರು ಖರೀದಿಸುವ ಇರಾದೆಯವರು ಸೆಪ್ಟೆಂಬರ್ 22ರವರೆಗೂ ಕಾದರೆ ತುಸು ಅಗ್ಗದ ಬೆಲೆಯಲ್ಲಿ ಪಡೆಯಬಹುದು.
ಮಾರುತಿ ಸುಜುಕಿಯ ಸುಮಾರು 4 ಲಕ್ಷ ರೂ ಬೆಲೆಯ ಎಸ್ ಪ್ರೆಸ್ಸೋ ಕಾರಿನ ಬೆಲೆ ಬರೋಬ್ಬರಿ 1.29 ಲಕ್ಷ ರೂ ಇಳಿಕೆ ಆಗಲಿದೆ. ಆಲ್ಟೋ ಕೆ10 ಕಾರಿನ ಬೆಲೆಯಲ್ಲೂ ಒಂದು ಲಕ್ಷ ರೂಗಿಂತ ಅಧಿಕ ಮೊತ್ತದಷ್ಟು ಇಳಿಕೆ ಆಗಲಿದೆ. ಬಹಳ ಫಾಸ್ಟ್ ಮೂವಿಂಗ್ ಇರುವ ಸ್ವಿಫ್ಟ್ ಕಾರಿನ ಬೆಲೆ 84,600 ರೂನಷ್ಟು ಕಡಿಮೆ ಆಗಲಿದೆ.
ಇದನ್ನೂ ಓದಿ: ಟಾಟಾ ಅಲ್ಲ: ಆಗಸ್ಟ್‌ನಲ್ಲಿ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದು ಯಾವ ಕಂಪನಿ?
ಟಾಟಾ ಮೋಟಾರ್ಸ್ನ ನೆಕ್ಸಾನ್, ಹ್ಯಾರಿಯರ್, ಸಫಾರಿಯಂತಹ 1,200 ಸಿಸಿಗಿಂತಲೂ ದೊಡ್ಡ ಕಾರುಗಳ ಬೆಲೆ ಒಂದು ಲಕ್ಷ ರೂಗಿಂತ ಅಧಿಕದಷ್ಟು ಕಡಿಮೆ ಆಗಿದೆ. ಆಲ್ಟ್ರೋಜ್, ಟಿಯಾಗೋ, ಟೈಗೋರ್, ಪಂಚ್ ಇತ್ಯಾದಿ ಸಣ್ಣ ಕಾರುಗಳ ಬೆಲೆ 85,000 ರೂಗಳವರೆಗೂ ಕಡಿಮೆಗೊಂಡಿದೆ.
ಮಹೀಂದ್ರ ಕಂಪನಿಯ ಥಾರ್, ಸ್ಕಾರ್ಪಿಯೋ, ಬೊಲೆರೊ, ಎಕ್ಸ್ಯುವಿ ಕಾರುಗಳ ಬೆಲೆ ಕಡಿಮೆ ಆಗುತ್ತಿದೆ.
ಕೊರಿಯಾದ ಹ್ಯೂಂಡಾಯ್ ಕಂಪನಿ ತನ್ನ ಕಾರುಗಳ ಬೆಲೆಯನ್ನು 2.4 ಲಕ್ಷ ರೂವರೆಗೂ ಇಳಿಸಿದೆ. ಐ10, ಔರಾ, ಕ್ರೆಟಾ, ಆಲ್ಕಜಾರ್ ಕಾರುಗಳ ಬೆಲೆ 70,000 ರೂಗಿಂತಲೂ ಅಧಿಕ ಮೊತ್ತದಷ್ಟು ಇಳಿಕೆ ಆಗಿದೆ.
ಕಿಯಾ, ರೇನೋ, ನಿಸ್ಸಾನ್, ಟೊಯೊಟಾ, ಹೊಂಡಾ, ಎಂಜಿ, ವೋಲ್ಸ್ವ್ಯಾಗನ್, ಸ್ಕೋಡಾ, ಜೀಪ್, ಸಿಟ್ರೋಯನ್, ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಜಾಗ್ವರ್ ಲ್ಯಾಂಡ್ ರೋವರ್ ಕಂಪನಿಯ ಕಾರುಗಳ ಬೆಲೆ ಸಾಕಷ್ಟು ಕಡಿಮೆ ಆಗಲಿದೆ.
ಇದನ್ನೂ ಓದಿ: ಭಾರತದ ಮೇಲೆ ಟ್ಯಾರಿಫ್ ಅನ್ನು ಶೇ. 50ರಿಂದ ಶೇ. 10ಕ್ಕೆ ಇಳಿಸಲಿದೆಯಾ ಅಮೆರಿಕ?
ಟಾಟಾ ಒಡೆತನದ ಲ್ಯಾಂಡ್ ರೋವರ್ ಕಾರುಗಳ ಬೆಲೆ 30 ಲಕ್ಷ ರೂವರೆಗೂ ಇಳಿಮುಖವಾಗಲಿದೆ. ಆಡಿ, ಬೆಂಜ್ ಕಾರುಗಳ ಬೆಲೆಯೂ 30 ಲಕ್ಷ ರೂಗಳವರೆಗೆ ಕಡಿಮೆ ಆಗಲಿದೆ.
ಸೆಪ್ಟೆಂಬರ್ 22ರಂದು ಹೊಸ ಬೆಲೆಗಳು ಜಾರಿಗೆ ಬರಲಿವೆ. ಇದೇ ನಿರೀಕ್ಷೆಯಲ್ಲಿ ಆಗಸ್ಟ್ನಿಂದಲೇ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಆಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ವಾಹನಗಳ ಮಾರಾಟ ಎಂದಿಗಿಂತ ಕಡಿಮೆ ಇರಲಿದೆ. ಅಕ್ಟೋಬರ್ ತಿಂಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ವಾಹನಗಳ ಮಾರಾಟವಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Thu, 18 September 25




