AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ 2.0; ಬೆಲೆ ತಗ್ಗಲಿರುವ ಮತ್ತು ದುಬಾರಿಯಾಗಲಿರುವ ವಸ್ತುಗಳು

GST 2.0 from Sep 22: ಸೆಪ್ಟೆಂಬರ್ 22ರಿಂದ ಜಿಎಸ್​ಟಿ 2.0 ಕ್ರಮ ಜಾರಿಯಾಗಲಿದೆ. ಹೆಚ್ಚಿನ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಶೇ. 12 ಇದ್ದ ಟ್ಯಾಕ್ಸ್ ಶೇ. 5ಕ್ಕೆ ಇಳಿದಿವೆ. ಶೇ. 28 ಟ್ಯಾಕ್ಸ್ ಇದ್ದ ವಸ್ತುಗಳಿಗೆ ಶೇ. 18 ಟ್ಯಾಕ್ಸ್ ಆಗಿದೆ. ಜೀವನಕ್ಕೆ ಅಗತ್ಯವಾಗಿರುವ ಹೆಚ್ಚಿನ ವಸ್ತುಗಳು ಶೇ. 5ರ ಟ್ಯಾಕ್ಸ್ ಸ್ಲ್ಯಾಬ್​ಗೆ ಸೇರಿವೆ.

ಜಿಎಸ್​ಟಿ 2.0; ಬೆಲೆ ತಗ್ಗಲಿರುವ ಮತ್ತು ದುಬಾರಿಯಾಗಲಿರುವ ವಸ್ತುಗಳು
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2025 | 9:30 PM

Share

ನವದೆಹಲಿ, ಸೆಪ್ಟೆಂಬರ್ 21: ನಾಳೆ ಸೋಮವಾರದಿಂದ (ಸೆ. 22) ಹೊಸ ಜಿಎಸ್​ಟಿ (GST) ಸುಧಾರಣಾ ಕ್ರಮ ಜಾರಿಗೆ ಬರಲಿದೆ. ನಾಲ್ಕು ಇದ್ದ ಜಿಎಸ್​ಟಿ ಸ್ಲ್ಯಾಬ್ ದರಗಳನ್ನು ಎರಡು ಸ್ಲಾಬ್​ಗೆ ಇಳಿಸಲಾಗಿದೆ. ನಾಳೆಯಿಂದ ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಇರಲಿದೆ. ಇವುಗಳ ಜೊತೆಗೆ ಐಷಾರಾಮಿ ಮತ್ತು ಹಾನಿಕಾರ ವಸ್ತುಗಳಿಗೆ ವಿಶೇಷವಾದ ಶೇ. 40 ಟ್ಯಾಕ್ಸ್ ಕೂಡ ಇರುತ್ತದೆ. ಇದರೊಂದಿಗೆ ಟ್ಯಾಕ್ಸ್ ರಚನೆ ಮತ್ತಷ್ಟು ಸರಳಗೊಂಡಿದೆ.

2017ಕ್ಕೆ ಮುಂಚೆ ವಿವಿಧ ರೀತಿಯ ಟ್ಯಾಕ್ಸ್​ಗಳು ಅಡಕಗೊಂಡು ಸಂಕೀರ್ಣ ತೆರಿಗೆ ವ್ಯವಸ್ಥೆ ಜಾರಿಯಲ್ಲಿತ್ತು. 2017ರಲ್ಲಿ ಏಕೀಕೃತ ಟ್ಯಾಕ್ಸ್ ಸಿಸ್ಟಂ ಆದ ಜಿಎಸ್​ಟಿಯನ್ನು ಜಾರಿಗೆ ತರಲಾಯಿತು. ಶೇ. 5, ಶೇ. 12, ಶೇ. 18 ಮತ್ತು ಶೇ. 28 ಟ್ಯಾಕ್ಸ್ ಸ್ಲ್ಯಾಬ್​ಗಳು ಹಾಗೂ ಸಿನ್ ಗೂಡ್​ಗಳಿಗೆ ಹೆಚ್ಚುವರಿ ಸುಂಕದ ವ್ಯವಸ್ಥೆ ಮಾಡಲಾಯಿತು. ಈಗ ಜಿಎಸ್​ಟಿ 2.0 ಸುಧಾರಣೆಯಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ.

ಹೊಸ ಜಿಎಸ್​ಟಿ ಸುಧಾರಣೆಯಿಂದ ಬಹಳಷ್ಟು ವಸ್ತುಗಳ ಬೆಲೆ ಕಡಿಮೆ ಆಗಿದೆ. ಶೇ. 12ರ ಸ್ಲ್ಯಾಬ್​ನಲ್ಲಿದ್ದ ವಸ್ತುಗಳ ಮೇಲಿನ ಟ್ಯಾಕ್ಸ್ ಶೇ. 5ಕ್ಕೆ ಇಳಿಯಲಿವೆ. ಶೇ. 28ರಷ್ಟಿದ್ದ ಟ್ಯಾಕ್ಸ್ ದರಗಳು ಶೇ. 18ಕ್ಕೆ ಇಳಿಯುತ್ತಿವೆ. ಇದರಿಂದ ಹೆಚ್ಚಿನ ವಸ್ತುಗಳ ಬೆಲೆ ಇಳಿಕೆ ಆಗಲಿದೆ.

ಇದನ್ನೂ ಓದಿ: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

ಈಗ ಜನಜೀವನಕ್ಕೆ ಅಗತ್ಯವಾಗಿರುವ ಸರಕುಗಳಲ್ಲಿ ಹೆಚ್ಚಿನವು ಶೇ. 5ರ ಜಿಎಸ್​ಟಿ ಸ್ಲ್ಯಾಬ್​ಗೆ ಸೇರುತ್ತವೆ. ಅತ್ಯಗತ್ಯ ಅಲ್ಲದ ವಸ್ತುಗಳು ಶೇ. 18ರ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತವೆ. ಐಷಾರಾಮಿ ಮತ್ತು ಹಾನಿಕಾರಕ ವಸ್ತುಗಳು ಮತ್ತು ಸೇವೆಗಳು ಶೇ 40 ಟ್ಯಾಕ್ಸ್ ಆಕರ್ಷಿಸುತ್ತವೆ.

ಯಾವ್ಯಾವ ವಸ್ತುಗಳ ಬೆಲೆ ಇಳಿಕೆ ಆಗಲಿವೆ?

ಬಹುತೇಕ ಗೃಹ ಬಳಕೆ ವಸ್ತುಗಳ ಬೆಲೆ ಕಡಿಮೆ ಆಗಲಿದೆ. ಟೂತ್​ಪೇಸ್ಟ್, ಸೋಪ್, ಶಾಂಪೂ, ಬಿಸ್ಕತ್, ಜ್ಯೂಸ್, ತುಪ್ಪ, ಸೈಕಲ್, ಸ್ಟೇಷನರಿ, ಬಟ್ಟೆ, ಪಾದರಕ್ಷೆ ಇತ್ಯಾದಿ ವಸ್ತುಗಳ ಮೇಲಿನ ಟ್ಯಾಕ್ಸ್ ಶೇ. 12ರಿಂದ ಶೇ. 5ಕ್ಕೆ ಇಳಿದಿದೆ. ಇವುಗಳ ಮಾರಾಟ ಬೆಲೆ ಶೇ. 7ರಿಂದ 8ರಷ್ಟು ಕಡಿಮೆ ಆಗಬಹುದು.

ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಇಳಿಕೆ

ಎಸಿ, ಫ್ರಿಡ್ಜ್, ಡಿಶ್​ವಾಶರ್, ದೊಡ್ಡ ಪರದೆಯ ಟಿವಿ, ಸಿಮೆಂಟ್ ಇತ್ಯಾದಿಗಳ ಮೇಲಿನ ಜಿಎಸ್​ಟಿ ಶೇ. 28ರಿಂದ ಶೇ. 18ಕ್ಕೆ ಇಳಿದಿದೆ. ಇವುಗಳ ಬೆಲೆ ಶೇ. 7-8ರಷ್ಟು ಕಡಿಮೆ ಆಗಬಹುದು.

ವಾಹನಗಳ ಬೆಲೆ ಇಳಿಯಲಿದೆ…

ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದೆ. ಇವುಗಳ ಬೆಲೆಯೂ ಸಾಕಷ್ಟು ಕಡಿಮೆ ಆಗುತ್ತದೆ.

ಇದನ್ನೂ ಓದಿ: ಗಗನಕ್ಕೇರಿತು ರಾಜ್ಯಗಳ ಸಾಲ; ಮಿತಿಮೀರಿದ ಪಂಜಾಬ್ ಸಾಲ; ಕರ್ನಾಟಕದ್ದು ಎಷ್ಟು?

ಹಾಗೆಯೇ, ಇನ್ಷೂರೆನ್ಸ್ ಪ್ರೀಮಿಯಮ್ ದರವೂ ಕಡಿಮೆ ಆಗಲಿದೆ. ಇನ್ಷೂರೆನ್ಸ್ ಪ್ರೀಮಿಯಮ್​ಗೆ ಶೇ. 18 ಜಿಎಸ್​ಟಿ ಇತ್ತು. ಈಗ ಅದನ್ನು ಶೇ. 5ಕ್ಕೆ ಇಳಿಸಲಾಗಿದೆ. ಕೆಲವಕ್ಕೆ ಟ್ಯಾಕ್ಸ್ ವಿನಾಯಿತಿಯನ್ನೂ ನೀಡಲಾಗಿದೆ.

ಯಾವ್ಯಾವ ವಸ್ತುಗಳ ಬೆಲೆ ಏರಿಕೆ ಆಗಲಿದೆ…

  • ಸಿಗರೇಟ್ ಇತ್ಯಾದಿ ತಂಬಾಕು ಉತ್ಪನ್ನಗಳು, ಆಲ್ಕೋಹಾಲ್, ಪಾನ್ ಮಸಾಲ ಇತ್ಯಾದಿ ಆರೋಗ್ಯ ಹಾನಿಕಾರಕ ವಸ್ತುಗಳು ಶೇ. 40ರ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತವೆ.
  • ಆನ್​ಲೈನ್ ಬೆಟ್ಟಿಂಗ್, ಗೇಮಿಂಗ್ ಇತ್ಯಾದಿ ಚಟದ ಸೇವೆಗಳೂ ಕೂಡ ಶೇ. 40ರ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತವೆ.
  • ಲಕ್ಷುರಿ ವಸ್ತುಗಳಾದ ಡೈಮಂಡ್, ಹವಳ ಇತ್ಯಾದಿಗಳೂ ಕೂಡ ಹೆಚ್ಚಿನ ಟ್ಯಾಕ್ಸ್ ಆಕರ್ಷಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ