AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್​ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ

ಛತ್ತೀಸ್​ಗಢದಲ್ಲಿ ಹೋಳಿ ಹಬ್ಬದ ರಾತ್ರಿ ಮಗನೊಬ್ಬ ತನ್ನ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ನಡೆದ ಜಗಳ ಭೀಕರ ಅಂತ್ಯ ಕಂಡಿದೆ. ಕೊಲೆಯ ನಂತರ, ಆರೋಪಿ ಮಗ ತಂದೆಯ ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದು, ಬಳಿಕ ನೆಮ್ಮದಿಯಿಂದ ಬಿರಿಯಾನಿ ತಿಂದು ಮಲಗಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್​ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ
ಅಪರಾಧ ನಡೆದ ಮನೆImage Credit source: India Today
ನಯನಾ ರಾಜೀವ್
|

Updated on: Mar 04, 2026 | 7:43 AM

Share

ಛತ್ತೀಸ್​ಗಢ, ಮಾರ್ಚ್​ 04: ಹೋಳಿ(Holi)ಯ ಹಬ್ಬದ ಅಂಗವಾಗಿ ನಡೆಸುವ ಹೋಳಿ ಕಾ ದಹನ್ ಹಬ್ಬದ ರಾತ್ರಿ ನಡೆದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛತ್ತೀಸ್​ಗಢದ ಅಂಬಿಕಾಪುರದಲ್ಲಿ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ, ಮನೆಯ ಪಕ್ಕದಲ್ಲಿರುವ ನೀರಿನ ತೊಟ್ಟಿಯಲ್ಲಿ ಎಸೆದು ನಂತರ ಶಾಂತವಾಗಿ ಬಿರಿಯಾನಿ ತಿಂದು ಮಲಗಿದ್ದಾನೆ ಎನ್ನಲಾಗಿದೆ.

ಪೊಲೀಸರು ಅದೇ ರಾತ್ರಿ ಆರೋಪಿ ಮಗನನ್ನು ಬಂಧಿಸಿದ್ದಾರೆ.ಮೃತ ಪರಾಸ್ ಕರ್ಕೆಟ್ಟಾ ಬೇರೆ ಮನೆಯಲ್ಲಿ ವಾಸವಾಗಿದ್ದರು, ಅವರ ಮಗ ಪ್ರಭಾತ್ ಅಲಿಯಾಸ್ ಲೆಡಾ ಮನೆ ಕೆಲವೇ ಕೆಲವು ಮೀಟರ್ ದೂರದಲ್ಲಿತ್ತು. ಇಬ್ಬರ ಮನೆಗಳ ಮಧ್ಯೆ ಕೇವಲ ಎರಡು ಮನೆಗಳಿದ್ದವು.

ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಹೋಳಿಕಾ ದಹನ್ ದಿನ ರಾತ್ರಿ 11 ಗಂಟೆ ಸುಮಾರಿಗೆ ಪ್ರಭಾತ್ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ, ಅವರ ತಂದೆ ಬೈದಿದ್ದರು. ಬಳಿಕ ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಕೋಪದ ಭರದಲ್ಲಿ ಪ್ರಭಾತ್ ಮನೆಯೊಳಗೆ ಇಟ್ಟಿದ್ದ ಕೊಡಲಿಯನ್ನು ಎತ್ತಿಕೊಂಡು ತಂದೆಯ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ಪರಾಸ್​ಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿಯು ಶವವನ್ನು ಎಳೆದುಕೊಂಡು ಹೋಗಿ ಮನೆಯ ಪಕ್ಕದಲ್ಲಿರುವ ಸಣ್ಣ ನೀರಿನ ಟ್ಯಾಂಕ್​​ಗೆ ಎಸೆದಿದ್ದಾನೆ ಎಂದು ಹೇಳಲಾಗಿದೆ. ಶವವನ್ನು ವಿಲೇವಾರಿ ಮಾಡಿದ ನಂತರ ಹತ್ತಿರದ ಅಂಗಡಿಗೆ ಹೋಗಿ ಬಿರಿಯಾನಿ ಕೊಂಡು ಮನೆಗೆ ಬಂದು ತಿಂದು ಕಂಬಳಿ ಹೊದ್ದು ನೆಮ್ಮದಿಯಿಂದ ನಿದ್ರಿಸಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ಓದಿ: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಮಯದಲ್ಲಿ ಕೋಪದಲ್ಲಿ ಹಲ್ಲೆ ನಡೆಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಮಗ ತನ್ನ ತಂದೆಯ ತಲೆಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ತಂದೆ ಮೃತಪಟ್ಟಿದ್ದಾರೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಅಪರಾಧಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಥಳದಿಂದ ತೆಗೆದ ಛಾಯಾಚಿತ್ರಗಳು ಅಪರಾಧ ಸ್ಥಳ, ಪೊಲೀಸರು ಪ್ರದೇಶವನ್ನು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್